Belagavi

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿ


ವಿಜಯಪುರ : ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘ, ದಲಿತ ಹಕ್ಕುಗಳ ಸಮಿತಿ – ಕರ್ನಾಟಕ, ಆದಿವಾಸಿ ಅಧಿಕಾರ ರಾಷ್ಟಿçÃಯ ಮಂಚ್ ಕರ್ನಾಟಕ, ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಭೀಮಶಿ ಕಲಾದಗಿ ಮಾತನಾಡಿ, ನರೇಗಾ ಯೋಜನೆಯಡಿಯಲ್ಲಿ ಯಂತ್ರಗಳನ್ನು ಬಳಕೆಮಾಡಿ ಜನಸಾಮಾನ್ಯರ ಉದ್ಯೋಗವನ್ನು ವಂಚಿಸುತ್ತಿದ್ದಾರೆ. ಈ ರೀತಿ ಮಾಡುವ ಅಧಿಕಾರಿಗಳ ಕಾನೂನು ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿನ ಬಲಾಢ್ಯ ಶಕ್ತಿಗಳು ಫಲಾನುಭವಿಗಳ ಜಾತಿ ಮತ್ತು ಲಿಂಗ ಬೇಧ ಮಾಡದೆ ಸಮಾನ ಅವಕಾಶ ಹಾಗೂ ಸಮಾನ ಕೆಲಸ ನೀಡುವುದರ ವಿರುದ್ಧ ತಮ್ಮ ಪ್ರಭಾವ ಬೀರುತ್ತಿರುವುದು ಕಂಡು ಬರುತ್ತಿದೆ. ಒಓಖಇಉಂ ಯ ಸಮರ್ಪಕ ಅನುಷ್ಠಾನ ಮಾಡಲು ಕೇಂದ್ರ ಸರ್ಕಾರದ ಮಧ್ಯಪ್ರದೇಶ ಅಗತ್ಯವಾಗಿದೆ. ಈ ಸಲಹೆಯು ಅಂತಹ ಯಾವುದೇ ಪರಿಹಾರವನ್ನು ಸೂಚಿಸುವುದಿಲ್ಲ. ಬದಲಾಗಿ ಕೆಲಸಗಾರರಿಗೆ ವೇತನ ನೀಡುವುದರ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಈಗಾಗಲೇ ಕೆಲವು ರಾಜ್ಯಗಳಿಂದ ಲಭ್ಯವಾದ ಮಾಹಿತಿಗಳ ಪ್ರಕಾರ ಎಸ್.ಸಿ./ಎಸ್.ಟಿ. ಕೆಲಸಗಾರರ ವೇತನ ಪಾವತಿ ವಿಳಂಬವಾಗುತ್ತಿದೆ ಮಾತ್ರವಲ್ಲ ಅವರಿಗೆ ನಿಗದಿತ ವೇತನಕ್ಕಿಂತ ಕಡಿಮೆ ಹಣ ನೀಡುವ ಕಾಯ್ದೆ ಉಲ್ಲಂಘನೆ ಸಹ ನಡೆಯುತ್ತಿದೆ. ಇದರ ಸಾಮಾಜಿಕ ಪರಿಣಾಮ ಈಗಾಗಲೇ ವ್ಯಕ್ತವಾಗತೊಡಗಿದೆ. ಜಾತಿ ಆಧಾರದಲ್ಲಿ ಕೆಲಸವನ್ನು ಮತ್ತು ಕೆಲಸದ ಸ್ಥಳವನ್ನು ನಿಗದಿಪಡಿಸಲಾಗುತ್ತಿದೆ. ಒಓಖಇಉಂ ಅಡಿಯಲ್ಲಿ ಕೆಲಸ ಮಾಡಲು ಬೇಡಿಕೆ ವ್ಯಾಪಕಗೊಳ್ಳುತ್ತಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಕೊರೋನಾ ಸಾಂಕ್ರಾಮಿಕದ ಕಾರಣದಿಂದ ವಲಸೆ ಕಾರ್ಮಿಕರು, ಗ್ರಾಮೀಣ ಪ್ರದೇಶಗಳಿಗೆ ಹಿಂತಿರುಗಿ ಬಂದಿರುವುದರಿAದ ಒಓಖಇಉಂ ಕೆಲಸದ ಬೇಡಿಕೆ ಮತ್ತಷ್ಟು ತೀವ್ರಗೊಂಡಿದೆ. ಸಾರಿಗೆ, ಇಂಧನ, ವಿದ್ಯುತ್ ಮತ್ತು ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆ ಗ್ರಾಮೀಣ ಬಡವರನ್ನು ಉಪವಾಸ ನರಳುವಂತೆ ಮಾಡಿದೆ. ಆದ್ದರಿಂದ ಸಲಹೆ ರೂಪದ ಈ ಆದೇಶವನ್ನು ಹಿಂತೆಗೆದುಕೊಳ್ಳುವAತೆಯೂ ಒಓಖಇಉಂ ಅಡಿಯಲ್ಲಿ ಕೆಲಸದ ದಿನಗಳನ್ನು ವರ್ಷದಲ್ಲಿ ೨೦೦ ದಿನಗಳಿಗೆ ಮತ್ತು ದಿನದ ವೇತನವನ್ನು ರೂ. ೬೦೦ ರೂಪಾಯಿಗಳಿಗೆ ಹೆಚ್ಚಿಸುವಂತೆಯೂ ಹಾಗೂ ನಗರ ಪ್ರದೇಶಗಳಿಗೂ ಉದ್ಯೋಗ ಖಾತ್ರಿಯನ್ನು ವಿಸ್ತರಿಸುವಂತೆಯೂ ತಾವು ಮಧ್ಯಪ್ರವೇಶಿಸಿ ಗ್ರಾಮೀಣ ಹಾಗೂ ನಗರಗಳ ಬಡವರನ್ನು ಸಂರಕ್ಷಿಸಬೇಕು ಎಂದರು.
ಜನವಾದಿ ಮಹಿಳಾ ಸಂಘಟನೆಯ ರಾಜ್ಯದ ಉಪಾಧ್ಯಕ್ಷರಾದ ಸುರೇಖಾ ರಜಪೂತ ಮಾತನಾಡಿ, ಸಮಾನ ಕೆಲಸಕ್ಕೆ ಸಮಾನ ವೇತನ ಪಡೆಯುವ ಹಕ್ಕನ್ನು ಹೊಂದಿರುವ ಕೆಲಸಗಾರರನ್ನು ಜಾತಿ ಆಧಾರದಲ್ಲಿ ವಿಭಜಿಸುವುದು ತಾರ್ಕಿಕವಾಗಿ ಸರಿಯಲ್ಲ. ಈ ಸಲಹೆಯಿಂದ ವೇತನ ಸಂದಾಯದ ಮೇಲೆ ಅಹಿತಕರ ಪರಿಣಾಮ ಬೀರುವುದಲ್ಲದೆ ವೇತನ ಸಂದಾಯ ಹಾಗೂ ಕೆಲಸವನ್ನು ನಿಗಧಿಪಡಿಸುವ ಪ್ರಕ್ರಿಯೆ ಅನಗತ್ಯ ವಿಳಂಬಕ್ಕೆ ಒಳಗಾಗುವುದು. ಒಓಖಇಉಂ, ನಿಗದಿತ ಕನಿಷ್ಠ ವೇತನ ಪಡೆಯಲು ಅಕುಶಲ ಕೆಲಸವನ್ನು ಮಾಡಲು ಒಪ್ಪುವ ಗ್ರಾಮೀಣ ಭಾರತದಲ್ಲಿ ವಾಸವಿರುವ ಯಾವುದೇ ಪ್ರೌಢವ್ಯಕ್ತಿಗಾಗಿ ರೂಪಿಸಲಾದ ಸಾರ್ವತ್ರಿಕ ಕಾರ್ಯಕ್ರಮವಿದು. ಬೇಡಿಕೆ ಆಧಾರದಲ್ಲಿ ಕೆಲಸವನ್ನು ಒದಗಿಸುವ ಈ ಸಾರ್ವತ್ರಿಕ ಕಾರ್ಯಕ್ರಮದಲ್ಲಿ ಕೆಲಸದ ಬೇಡಿಕೆ ಆಧಾರದಲ್ಲಿ ಮಾತ್ರ ಕೆಲಸವನ್ನು ನೀಡಬಹುದು. ಕೆಲಸಗಾರರನ್ನು ಜಾತಿ ಆಧಾರದಲ್ಲಿ ವಿಭಜಿಸಿ ಕೆಲಸ ನೀಡುವುದು ಕಾಯ್ದೆಯ ಮೂಲವನ್ನೇ ಕಡೆಗಣಿಸುತ್ತದೆ. ಫಲಾನುಭವಿಗಳನ್ನು ಜಾತಿ ಆಧಾರದಲ್ಲಿ ವಿಭಜಿಸುವುದು ಕಾಯ್ದೆಯ ಆಶಯಗಳಿಗೆ ವಿರುದ್ಧವಾಗಿದೆ ಮಾತ್ರವಲ್ಲ ಕಾಯ್ದೆಯ ಸಮರ್ಪಕ ಹಾಗೂ ನ್ಯಾಯಸಮ್ಮತ ಅನುಷ್ಠಾನಕ್ಕೆ ವಿರುದ್ಧವಾಗಿದೆ ಇದನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಳಸಿದ್ದ ನಾಯ್ಕೋಡಿ, ವಿಠ್ಠಲ ಹೊನಮೋರೆ, ಭೀಮಶಿ ಕೋಟ್ಯಾಳ, ಭೀಮರಾಯ ಪೂಜಾರಿ, ಫುಂಡಲೀಕ ಹಂದಿಗನೂರ, ಶ್ರೀಶೈಲಗೌಡ ಬಿರಾದಾರ, ಸಂಗಪ್ಪ ಸೀತಿಮನಿ, ಚನಗೊಂದ ಬಿರಾದರ, ಯಮನಪ್ಪ ಪೂಜಾರಿ, ಹಿರಗಪ್ಪ ಪೂಜಾರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


Leave a Reply