Belagavi

ನಗರದಲ್ಲಿ ದಿ  27 ರಂದು  ಪತ್ರಿಕಾ ದಿನಾಚರಣೆ


ಬೆಳಗಾವಿ ದಿ 26 :- ನಗರದ ನಗರ ಕೇಂದ್ರ ಗ್ರಂಥಾಲಯದ ಸಭಾಭವನದಲ್ಲಿ ದಿ. 27 ನೇ ಜುಲೈ 2024 ರಂದು ಮಧ್ಯಾಹ್ನ 3 ಗಂಟೆಗೆ ಪತ್ರಿಕಾ   ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ ಬೆಳಗಾವಿಯ ಹಿರಿಯ ಸಾಹಿತಿಗಳು ಹಾಗೂ ಪತ್ರಕರ್ತರಾದ   ಎಲ್. ಎಸ್. ಶಾಸ್ತ್ರಿ ಅಧ್ಯಕ್ಷತೆ ವಹಿಸುವರು. ಗ್ರಂಥಾಲಯ ಇಲಾಖೆಯ ಉಪನಿರ್ದೇಶಕರಾದ ಜಿ. ರಾಮಯ್ಯ ಉದ್ಘಾಟಿಸುವರು. ಕನ್ನಡ ಜಾನಪದ ಪರಿಷತ್ತಿನ ಬೆಳಗಾವಿ ವಿಭಾಗದ ಸಂಚಾಲಕರು  ಕೆ. ಎಸ್. ಕೌಜಲಗಿ, ಬೈಲಹೊಂಗಲದ ಖ್ಯಾತ ವೈದ್ಯರಾದ ಡಾ. ಮಂಜುನಾಥ ಮುದಕನಗೌಡ್ರ ಮುಖ್ಯಅತಿಥಿಗಳಾಗಿ ಆಗಮಿಸುವರು. ಗೌರವಾನ್ವಿತ ಉಪಸ್ಥಿತರಾಗಿ ಕನ್ನಡ ಜಾನಪದ ಪರಿಷತ್ತಿನ ಬೆಳಗಾವಿ ಜಿಲ್ಲಾಧ್ಯಕ್ಷರು  ಮೋಹನ ಗುಂಡ್ಲೂರ, ಚಲನಚಿತ್ರ ನಿರ್ದೇಶಕ ರಮೇಶ ತಿಗಡಿ, ಕಾರದಗಾದ ಡಿ ಎಸ್ ನಾಡಗೆ ಕಾಲೇಜಿನ ನಿವೃತ್ತ ಉಪ ಪ್ರಚಾರ್ಯರು   ಜೆ. ಬಿ. ಜನವಾಡೆ ಆಗಮಿಸುವರು. ಕಾರ್ಯಕ್ರಮದಲ್ಲಿ ಬೈಲಹೊಂಗಲದ ಜಾನಪದ ಬರಹಗಾರರು ಶ್ರೀಮತಿ ಲಕ್ಷ್ಮಿ  ಮೂಗಡ್ಲಿಮಠ, ಪತ್ರಕರ್ತ  ರಮೇಶ ಮಗದುಮ್ ಹಾಗೂ ಹಲವು ಕ್ಷೇತ್ರಗಳ ಹಲವು ಸಾಧಕರನ್ನು ಆತ್ಮೀಯವಾಗಿ ಸನ್ಮಾನಿಸಲಾಗುವುದು.

ಉತ್ತರ ಕರ್ನಾಟಕ ಸಮಾನಮನಸ್ಕ ಪತ್ರಕರ್ತರ ಸಂಘದ ವತಿಯಿಂದ ನಡೆಯುವ ಈ ಕಾರ್ಯಕ್ರಮಕ್ಕೆ ಬೆಳಗಾವಿಯ  ಶ್ರೀ  ಸದ್ಗುರು  ಸಾಹಿತ್ಯ  ಪ್ರತಿಷ್ಠಾನ, ಕನ್ನಡ ಜಾನಪದ ಪರಿಷತ್ತು ಬೆಳಗಾವಿ ಹಾಗೂ ಮೌಲ್ಯಸಂಪದ ಸ್ವಯಂ  ಸೇವಾ ಸಂಸ್ಥೆ ರಾಮದುರ್ಗ ಇವರ ಸಂಯುಕ್ತ ಸಹಕಾರದಲ್ಲಿ ನಡೆಯುವುದು. ಪತ್ರಿಕಾ ಸಂಪಾದಕ ಸೋಮಶೇಖರ ವೀ. ಸೊಗಲದರವರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಶ್ರೀ ಸದ್ಗುರು  ಸಾಹಿತ್ಯ ಪ್ರತಿಷ್ಠಾನ  ಅಧ್ಯಕ್ಷರಾದ ಬಸವರಾಜ ಫ. ಸುಣಗಾರರು ಪ್ರಾಸ್ತಾವಿಕವಾಗಿ ಮಾತನಾಡುವರು. ಬೈಲಹೊಂಗಲ ತಾಲೂಕಿನ ಕನ್ನಡ  ಜಾನಪದ ಪರಿಷತ್ತಿನ ಅಧ್ಯಕ್ಷರು  ಚಂದ್ರಶೇಖರ ಆರ್. ಕೊಪ್ಪದ ಸ್ವಾಗತಿಸುವರು. ರಾಮದುರ್ಗ, ಸವದತ್ತಿ, ಬೈಲಹೊಂಗಲ, ಗೋಕಾಕ, ಮೂಡಲಗಿ, ಹುಕ್ಕೇರಿ, ನರಗುಂದ, ಬದಾಮಿ, ಮುಧೋಳ, ಚಿಕ್ಕೋಡಿ ಹಾಗೂ ಇನ್ನಿತರ ತಾಲೂಕುಗಳ ಪತ್ರಕರ್ತರ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಸಂಘಟಕರು ತಿಳಿಸಿರುವರು


Leave a Reply