karanatakaKoppal

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಹಳ್ಳಿ ಪ್ರತಿಭೆ


ಕುಷ್ಟಗಿ: ಒಂದು ಚಿಕ್ಕ ಹಳ್ಳಿಯ ಹುಡುಗ ಯಲಬುರ್ಗಾ ತಾಲ್ಲೂಕಿನ ತಾಳಕೇರಿ ಗ್ರಾಮದ ಯಂಕಪ್ಪ ಬಂಡಿ ಹನಮಮ್ಮ ಬಂಡಿ ದಂಪತಿಯ ನಾಲ್ಕು ಮಕ್ಕಳಲ್ಲ ಕೊನೆಯ ಮಗ ಕನಕಪ್ಪ ಬಂಡಿ ಇವರು,

ಗೋವಾದ ಮಡಗಾಂವ್ ನಲ್ಲಿ ಇತ್ತೀಚಿಗೆ ನಡೆದ ಮೂರನೇ ಆಲ್ ಇಂಡಿಯನ್‌ ನ್ಯಾಷನಲ್‌ ಯೂಥ್ ರೂರಲ್ ಗೇಮ್ ಚಾಂಪಿಯನ್ ಶಿಪ್ ೨೦೨೧ ಸ್ಪರ್ಧೆಯಲ್ಲಿ ರಾಜ್ಯ ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗವನ್ನು ಪ್ರತಿನಿಧಿಸಿದ ಕನಕಪ್ಪ ಬಂಡಿ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಾಳಕೇರಿ ಗ್ರಾಮದ ಹಳ್ಳಿ ಹುಡುಗ ಕನಕಪ್ಪ ಬಂಡಿ ಚಿನ್ನದ ಪದಕ ಪಡೆದು ಜಿಲ್ಲೆಯ ಮತ್ತು ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾನೆ ,

ಪ್ರಸ್ತುತ ಕುಷ್ಟಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎ ಓದುತ್ತಿರುವ ಕನಕಪ್ಪ ಬಂಡಿ ಮೂಲತಃ ಖೋ ಖೋ ಆಟಗಾರರಾಗಿದ್ದಾರೆ,

ಮಸ್ಕಿಯ ಪುಟ್ಟರಾಜ ಮಲ್ಟಿ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಖೋ ಖೋ ಹಾಗೂ ರನ್ನಿಂಗ್ ತರಬೇತಿ ಪಡೆದಿದ್ದರು.
ನೇಪಾಳದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಕನಕಪ್ಪ ಬಂಡಿ ಪಾಲ್ಗೊಳ್ಳಲಿದ್ದಾರೆ
ಸರಕಾರಿ ಪ್ರಥಮ ದರ್ಜೆ ಕಾಲೇಜು ಕುಷ್ಟಗಿಯ ಪ್ರಾಂಶುಪಾಲರಾದ ಶ್ರೀ ಮತಿ ಅನಿತಾ ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದರು.

ವರದಿ-ಆರ್ ಶರಣಪ್ಪ ಗುಮಗೇರಾ.
ಕೊಪ್ಪಳ.


Leave a Reply