Koppal

ಕ್ಷಯ ಮುಕ್ತ ಸಮಾಜ ನಿರ್ಮಾಣದಲ್ಲಿ ಪಂಚಾಯಿತಿ ಪಾತ್ರ ಮಹತ್ವದ್ದು.-ಡಾ॥ಮಹೇಶ್MG


ಕುಷ್ಟಗಿ: ತಾಲ್ಲೂಕಿನ ಕಾಟಾಪುರ ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾಡಳಿತ ಕೊಪ್ಪಳ, ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರ ಕೊಪ್ಪಳ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಕುಷ್ಟಗಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹುಲಗೇರಾ, ಗ್ರಾಮ ಪಂಚಾಯಿತಿ ಕಾರ್ಯಾಲಯ ಕಾಟಾಪುರ ಇವರ ಸಹಯೋಗದಲ್ಲಿ ಆಯೋಜಿಸಿದ್ದ

ಕ್ಷಯ ಮುಕ್ತ ಗ್ರಾಮ ಪಂಚಾಯತ್ ಅಂದೋಲನ ಕಾರ್ಯಕ್ರಮದಲ್ಲಿ
ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾಕ್ಟರ್ ಮಹೇಶ್ ಎಮ್ ಜಿ ಅವರು ಮಾತನಾಡಿ 2025 ರವಳಗೆ ಕ್ಷಯ ಮುಕ್ತ ಭಾರತ ಮಾಡುವಲ್ಲಿ ಭಾರತ ಸರ್ಕಾರ ಗುರಿ ಹೊಂದಿದ್ದು, ಅದು ಸಕಾರಗೊಳ್ಳಲು ಸ್ಥಳೀಯ ಸರಕಾರದಂತಿರುವ ಗ್ರಾಮ ಪಂಚಾಯಿತಿ & ಸಾರ್ವಜನಿಕರು ಮಹತ್ವದ ಪಾತ್ರ ವಹಿಸಬೇಕಿದೆ… ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿಯೇ ಮೊದಲಿಗೆ ಕಾಟಾಪುರ ಪಂಚಾಯಿತಿ ಕ್ಷಯ ಮುಕ್ತ ಮಾಡಲು ಹೆಜ್ಜೆ ಹಾಕಿದ್ದು, ಎಲ್ಲಾ ಇಲಾಖೆಯ ಸಹಾಯದೊಂದಿಗೆ ಸಹಕಾರಗೊಳ್ಳಲಿ ಎಂದರು.

ವೈದ್ಯಾಧಿಕಾರಿ ಡಾಕ್ಟರ್ NR ಪವಾರ ಮತ್ತು ಎಸ್ ಟಿ ಪಾಟೀಲ್
ಮಾತನಾಡಿ ಕ್ಷಯ ಮುಕ್ತ ಕಾಟಾಪುರ ಗ್ರಾಮ ಪಂಚಾಯಿತಿ ಮಾಡುವಲ್ಲಿ ನಾವು ಹೆಜ್ಜೆ ಇಡೋಣ ಎಂದರು.

ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಾಟಾಪುರದ ಸಿಬ್ಬಂದಿಗಳಾದ ಅಜಯಕುಮಾರ, ಗುರುರಾಜ , ರಾಧಾ ರಾಠೋಡ್ ಹಾಗೂ ಗ್ರಾಮ ಪಂಚಾಯಿತಿ ಪಿಡಿಓ ಶ್ರಿ ಹರಿಷ ,M ಕ್ಷಯರೋಗ ಸಿಬ್ಬಂದಿ ವೆಂಕಟೇಶ್ ಗುಡಗುಡಿ ಮತ್ತು ಜಗನ್ನಾಥ ಕುಲಕರ್ಣಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ, ಮಂಜುನಾಥ ಪಾವಿ ಉಪಾಧ್ಯಕ್ಷ, ಕಸ್ತೊರೆವ್ವ ಅಮರಾವತಿ ,ಸದಸ್ಯರು ಕಾಟಾಪುರ ಮತ್ತು ಬಂಡರಗಲ್, ಆರೋಗ್ಯ ಇಲಾಖೆ ಸಿಬ್ಬಂದಿ, ಶಿಕ್ಷಣ ಇಲಾಖೆ, ಪೋಲಿಸ್ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ವರದಿ-ಆರ್ ಶರಣಪ್ಪ ಗುಮಗೇರಾ
ಕೊಪ್ಪಳ.


Leave a Reply