Belagavi

ಬುಡಾ ಆಯುಕ್ತರಾಗಿ ಜಿ.ಟಿ.ದಿನೇಶಕುಮಾರ್ ಅಧಿಕಾರ ಸ್ವೀಕಾರ


ಬೆಳಗಾವಿ, ಜು.೨೭ : ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಆಯುಕ್ತರಾಗಿ ಜಿ.ಟಿ ದಿನೇಶಕುಮಾರ್ ಅವರು ಸೋಮವಾರ(ಜು.೨೬) ಅಧಿಕಾರ ಸ್ವೀಕರಿಸಿದ್ದಾರೆ.
೨೦೧೦ ನೆಯ ಬ್ಯಾಚ್ ನ ಕೆ.ಎ.ಎಸ್. ಹಿರಿಯ ಶ್ರೇಣಿಯ ಅಧಿಕಾರಿಯಾಗಿರುವ ಇವರು ವಿಶೇಷ ಜಿಲ್ಲಾಧಿಕಾರಿ ಭೂಸ್ವಾಧೀನ, ಬೆಳಗಾವಿ ಅಪರ ಜಿಲ್ಲಾಧಿಕಾರಿಯಾಗಿ (ಪುನರ್ವಸತಿ) ಸೇವೆ ಸಲ್ಲಿಸಿರುವ ಅವರು ಪ್ರವಾಹ ಸಂದರ್ಭದಲ್ಲಿ ಜನಮೆಚ್ಚುಗೆ ಕಾರ್ಯ ಮಾಡಿ ಸರ್ವೋತ್ತಮ ಅಧಿಕಾರಿ ಪ್ರಶಸ್ತಿ ಕೂಡ ಸ್ವೀಕರಿಸಿದ್ದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.


Leave a Reply