Belagavi

ಸಾಹಿತಿ   ಲಕ್ಷ್ಮಿ  ಮೂಗಡ್ಲಿ ಮಠಗೆ  ಸನ್ಮಾನ 


ಬೈಲಹೊಂಗಲ  28 – ಪಟ್ಟಣದ  ಸಾಹಿತಿ ಲಕ್ಷ್ಮಿ  ಮೂಗಡ್ಲಿ ಮಠ ಅವರನ್ನು  ಬೆಳಗಾವಿಯಲ್ಲಿ ಜರುಗಿದ ಜರುಗಿದ ಪತ್ರಿಕಾ  ದಿನಾಚರಣೆ ಸಮಾರಂಭದಲ್ಲಿ  ಸನ್ಮಾನಿಸಲಾಯಿತು.
           ಬೆಳಗಾವಿಯ ಜಿಲ್ಲಾ ಕೇಂದ್ರ  ಗ್ರಂಥಾಲಯದಲ್ಲಿ  ಮಂಗಳವಾರ  ಕರ್ನಾಟಕ  ಸಮಾನ  ಮನಸ್ಕ ಪತ್ರಕರ್ತರ  ಸಂಘ, ಶ್ರೀ  ಸದ್ಗುರು  ಸಾಹಿತ್ಯ  ಪ್ರತಿಷ್ಠಾನ ಹಾಗೂ  ಮಾಲ್ಯ ಸಂಪದ ಸ್ವಯಂ  ಸೇವಾ  ಸಂಸ್ಥೆ  ರಾಮದುರ್ಗ  ಇವರ  ಸಂಯುಕ್ತ  ಆಶ್ರಯದಲ್ಲಿ  ಜರುಗಿದ ಪತ್ರಿಕಾ  ದಿನಾಚರಣೆ ಹಾಗೂ  ಸನ್ಮಾನ  ಸಮಾರಂಭದಲ್ಲಿ  ಸಾಹಿತಿ
ಲಕ್ಷ್ಮಿ ಮೂಗಡ್ಲಿ ಮಠ ಅವರನ್ನು  ಸನ್ಮಾನಿಸಲಾಯಿತು.
    ಹಿರಿಯ  ಪತ್ರಕರ್ತ ಎಲ್  ಎಸ್  ಶಾಸ್ತ್ರೀ, ಹಿರಿಯ  ಸಾಹಿತಿ  ಕೆ  ಎಸ್ ಕೌಜಲಗಿ, ಜಿಲ್ಲಾ  ಜಾನಪದ  ಪರಿಷತ ಅಧ್ಯಕ್ಷ ಮೋಹನ ಗುಂಡ್ಲೂರ, ಜೆ  ಬಿ  ಜನವಾಡೆ, ಸದ್ಗುರು  ಸಾಹಿತ್ಯ ಪ್ರತಿಷ್ಠಾನದ  ಅಧ್ಯಕ್ಷ  ಬಸವರಾಜ ಸುಣಗಾರ, ಗ್ರಂಥಾಲಯ  ಉಪ  ನಿರ್ದೇಶಕ
ಜಿ  ರಾಮಯ್ಯ, ಚಂದ್ರಶೇಖರ  ಕೊಪ್ಪದ, ಸೋಮಶೇಖರ ಸೊಗಲದ, ರಮೇಶ ತಿಗಡಿ  ಮತ್ತಿತರರು  ಈ  ಸಂದರ್ಭದಲ್ಲಿ  ಉಪಸ್ಥಿತರಿದ್ದರು.

Leave a Reply