Belagavi

ಪ್ರೇಮಾ  ಅಂಗಡಿ  ಅವರ ” ಬಯಲು  ಬೆಳಕು ” ಕೃತಿ  ಬಿಡುಗಡೆ  ಸಮಾರಂಭ 1 ರಂದು 


ಬೈಲಹೊಂಗಲ 28 – ಇಲ್ಲಿಯ ಶರಣೆ ಪ್ರವಚನ ಪ್ರವೀಣೆ  ಪ್ರೇಮಕ್ಕ  ಅಂಗಡಿ  ಅವರು  ಬರೆದ  “ಬಯಲು  ಬೆಳಕು  ” ಕೃತಿ  ಬಿಡುಗಡೆ  ಸಮಾರಂಭ  ರವಿವಾರ  ದಿ -1 ರಂದು ನಡೆಯಲಿದೆ.
           ಪಟ್ಟಣದ  ಪತ್ರಿ  ಬಸವ  ನಗರದಲ್ಲಿರುವ  ಪತ್ರಿ  ಬಸವೇಶ್ವರ  ಅನುಭವ  ಮಂಟಪದಲ್ಲಿ  ಬೆಳಿಗ್ಗೆ 10-30 ಕ್ಕೆ ಜರಗುವ  ಈ  ಸಮಾರಂಭ ದಲ್ಲಿ  ಮುರಗೋಡದ ಪೂಜ್ಯ  ನೀಲಕಂಠ  ಮಹಾಸ್ವಾಮಿಗಳು  ಸಾನಿಧ್ಯದಲ್ಲಿ  ಜಿಲ್ಲಾ  ಕ ಸಾ  ಪ ಅಧ್ಯಕ್ಷೆ  ಮಂಗಲಾ  ಮೆಟಗುಡ್ದ ಅಧ್ಯಕ್ಷತೆ  ವಹಿಸುವರು.
         ವಿಶ್ರಾಂತ ಪ್ರಾಧ್ಯಾಪಕಿ  ಡಾ.  ಗುರುದೇವಿ  ಹುಲೆಪ್ಪನವರ ಮಠ  ಕೃತಿ  ಬಿಡುಗಡೆ  ಮಾಡುವರು.  ಕನ್ನಡ  ಪ್ರಾಧ್ಯಾಪಕ ಡಾ.  ಫಕೀರನಾಯ್ಕ ಗದ್ದಿಗೌಡರ ಅವರು  ಕೃತಿ  ಪರಿಚಯ  ಮಾಡಲಿದ್ದು  ಮಾಜಿ  ಕ ಸಾ  ಪ ಮೋಹನ ಪಾಟೀಲ  ಅವರನ್ನು  ಸನ್ಮಾನಿಸಲಾಗುವುದು  ಜಿಲ್ಲಾ  ಕ ಸಾ  ಪ  ಕಾರ್ಯದರ್ಶಿ  ಜ್ಯೋತಿ  ಬದಾಮಿ ಗೌರವ  ಉಪಸ್ಥಿತ ರಿರುವರು.
         ತಾಲೂಕಾ  ಕ ಸಾ  ಪ ಅಧ್ಯಕ್ಷೆ  ಗೌರಾದೇವಿ  ತಾಳಿಕೋಟಿ ಮಠ ಸ್ವಾಗತ  ಭಾಷಣ  ಮಾಡುವರು. ಶರಣೆ  ಗೌರಕ್ಕ ಕರ್ಕಿ  ಪರಿಚಯಿಸುವರು  ಎಂದು  ಮುಕ್ತಾಯಕ್ಕ ಹಾಗೂ  ಅಜಗಣ್ಣ  ಬಳಗ  ತಿಳಿಸಿದ್ದಾರೆ.

Leave a Reply