Belagavi

ಉತ್ತರ ಪ್ರದೇಶ  ಭಕ್ತನಿಂದ ಶ್ರೀಗಳಿಗೆ  ಗೌರವ  ಸನ್ಮಾನ


ಬೈಲಹೊಂಗಲ 29 – ಗುರು ಶಿಷ್ಯರ  ಸಂಬಂಧ  ಅತ್ಯಂತ  ಪವಿತ್ರವಾದ ಸಂಬಂಧ. ಗುರು ಪೂರ್ಣಿಮಾ ದಿನದಂದು ಸಮೀಪದ  ಮುರಗೋಡದ ಮಹಾಂತ ದುರದುಂಡೀಶ್ವರ ಮಠದಲ್ಲಿ  ಜರುಗಿದ  ಗುರುವಂದನಾ

ಕಾರ್ಯಕ್ರಮದಲ್ಲಿ  ಪೂಜ್ಯ  ನೀಲಕಂಠ  ಸ್ವಾಮಿಗಳಿಗೆ ಭಕ್ತ  ಜೈರಾಮ  ಚೌಹಾನ ಅವರು  ಗುರು ಸಮರ್ಪಣೆ ಅರ್ಪಿಸಿದರು.

ಕಳೆದ ಶ್ರೀ  ಮಠ ಕ್ಕೆ  ಹತ್ತು  ವರುಷಗಳಿಂದ ಶ್ರೀ ಮಠಕ್ಕೆ   ತನು  ಮನದಿಂದ ಸೇವೆಯನ್ನು  ಸಲ್ಲಿಸುತ್ತಿರುವ   ಉತ್ತರಪ್ರದೇಶದ ಅಜಮಗಡದ ಜಿಲ್ಲೆಯ

ಭಕ್ತ ಜೈರಾಮ  ಚೌಹಾನ ಈತ ವೃತ್ತಿಯಲ್ಲಿ  ಕಾರ್ಪೆಂಟರ್ ಆಗಿದ್ದು ಪೂಜ್ಯ  ನೀಲಕಂಠ  ಸ್ವಾಮೀಜಿಯವರನ್ನು  ತನ್ನ  ಆರಾಧ್ಯ  ಗುರುಗಳೆಂದು  ನಂಬಿ

ಮಠ ದ  ಪರಮ  ಭಕ್ತ ನಾಗಿ

ಶ್ರೀ  ಮಠ ಕ್ಕೆ  ತನ್ನ  ಸೇವೆಯನ್ನು  ಸಲ್ಲಿಸಿದ್ದು  ಗುರು  ಗುರುಪೂರ್ಣಿಮೆಯಂದು ಪೂಜ್ಯ  ಶ್ರೀಗಳವರಿಗೆ ಭಕ್ತಿಪೂರ್ವಕ ಸನ್ಮಾನ ಸಮರ್ಪಣೆ ಅರ್ಪಿಸಿದನು.

ಭಕ್ತನ ಭಕ್ತಿಗೆ ಮೆಚ್ಚಿ ಶ್ರೀಗಳು ಆತನಿಗೆ ಆಶೀರ್ವಾದ ರೂಪದಲ್ಲಿ ಶ್ರೀರಕ್ಷ ನೀಡಿದರು.

ಈ  ಸಂದರ್ಭದಲ್ಲಿ  ಮುರಗೋಡದ ಗಣ್ಯರು, ಹಿರಿಯರು  ಸಂಸ್ಕೃತ ಪಾಠಶಾಲಾ ವಿದ್ಯಾರ್ಥಿಗಳು, ಅಕ್ಕನ ಬಳಗ, ಬಸವ ಮಹಾಮನೆ ಮಹಿಳೆಯರು,

ಅನೇಕ ಪೂಜ್ಯರು, ಮಠದ ಧರ್ಮದರ್ಶಿಗಳು ಉಪಸ್ಥಿತರಿದ್ದರು.

 


Leave a Reply