Belagavi

ವಿದ್ಯಾರ್ಥಿ ವೇತನ ಪರೀಕ್ಷೆಯಲ್ಲಿ ಅಮೃತಾ ಸಾಧನೆ


ಬೈಲಹೊಂಗಲ ೨೯: ಪಟ್ಟಣದ ಶತಮಾನೋತ್ಸವ ಪೂರೈಸಿದ ಪುರಸಭೆ ಸಂಚಾಲಿತ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯ ೮ನೇ ತರಗತಿಯ ವಿದ್ಯಾರ್ಥಿನಿ ಅಮೃತಾ ಸಿದ್ದನಗೌಡ ಪಾಟೀಲ ಎನ್.ಎಂ.ಎA.ಎಸ್. (ರಾಷ್ಟಿçÃಯ ವಿದ್ಯಾರ್ಥಿ ವೇತನ ಅರ್ಹತಾ ಯೋಜನೆ) ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಸಾಧನೆಗೈದಿದ್ದಾಳೆ.
ಅಮೃತಾ ದ್ವಿತೀಯ ಪಿ.ಯು.ಸಿ. ಶಿಕ್ಷಣ ಪೂರೈಸುವ ವರೆಗೆ ಪ್ರತಿ ತಿಂಗಳು ೧ ಸಾವಿರ ರೂ. ವಿದ್ಯಾರ್ಥಿ ವೇತನ ಪಡೆಯಲು ಅರ್ಹಳಾಗಿದ್ದಾಳೆ.
ವಿದ್ಯಾರ್ಥಿನಿಯ ಸಾಧನೆಗೆ ಪುರಸಭೆ ಅಧ್ಯಕ್ಷ ಬಾಬು ಕುಡಸೋಮಣ್ಣವರ, ಸ್ಥಾಯಿ ಸಮಿತಿ ಚೇರಮನ್ ಅರ್ಜುನ ಕಲಕುಟಕರ, ಮುಖ್ಯಾಧಿಕಾರಿ ಕವಿರಾಜ ನಾಗನೂರ, ಮುಖ್ಯಾಧ್ಯಾಪಕ ಎಂ.ವಿ.ನಾಗನೂರ ಹಾಗೂ ಪುರಸಭೆ ಸದಸ್ಯರು, ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.


Leave a Reply