Belagavi

ಮಹಿಳಾ  ಕಾಯಕೋತ್ಸವ  ಕಾರ್ಯಕ್ರಮಕ್ಕೆ  ಚಾಲನೆ


ಬೈಲಹೊಂಗಲ 29 – ಮಹಾತ್ಮಾ ಗಾಂಧಿ  ರಾಷ್ಟ್ರೀಯ  ಗ್ರಾಮೀಣ  ಉದ್ಯೋಗ  ಖಾತರಿ ಯೋಜನೆಯಡಿಯಲ್ಲಿ ಹಮ್ಮಿಕೊಂಡ ಮಹಿಳಾ ಕಾಯಕೋತ್ಸವ  ಕಾರ್ಯಕ್ರಮಕ್ಕೆ  ಚಾಲನೆ ನೀಡಲಾಯಿತು.

ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಬುಧವಾರ ಜರುಗಿದ ಈ ಕಾರ್ಯಕ್ರಮಕ್ಕೆ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸುಭಾಸ ಸಂಪಗಾಂವಿ ಅವರು ಸಸಿಗೆ ನೀರು  ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಈ ಅಭಿಯಾನವು ಜುಲೈ 15ರಿಂದ ಸೆಪ್ಟೆಂಬರ್ 15ರವರೆಗೆ ಎರಡು ತಿಂಗಳವರೆಗೆ  ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯಲಿದ್ದು ಗ್ರಾಮಗಳಲ್ಲಿ ಪ್ರತಿಯೊಂದು ಕುಟುಂಬದ ಮಹಿಳೆಯು ಈ  ನರೇಗಾ ಯೋಜನೆ ಜಾಬ್ ಕಾರ್ಡ್ ಪಡೆದುಕೊಂಡು ಕಡ್ಡಾಯವಾಗಿ 100 ದಿನ ಕೆಲಸ ಪೂರೈಸಿ ಪ್ರತಿ ದಿವಸಕ್ಕೆ 289 ರೂ ಪಡೆದು ಆರ್ಥಿಕ ವರ್ಷದಲ್ಲಿ  29.900 ರಷ್ಟು ಆದಾಯ ಗಳಿಸಬಹುದು ಆದ್ದರಿಂದ ಆರ್ಥಿಕವಾಗಿ ಸಾಮಾಜಿಕವಾಗಿ ಸದೃಢವಾಗಬೇಕೆಂದು  ತಿಳಿಸಿ ಈ  ಅಭಿಯಾನದ ಮುಖ್ಯ ಉದ್ದೇಶ ಶೇ 45ಕ್ಕಿಂತ ಕಡಿಮೆ ಸಹಭಾಗಿತ್ವವನ್ನು ಹೆಚ್ಚಿಗೆ ಮಾಡುವುದಾಗಿದೆ ಪ್ರತಿ ಮನೆ ಸಮೀಕ್ಷೆ ಮಾಡಿ  ಪ್ರತಿಯೊಬ್ಬರಿಗೂ  ಸರ್ಕಾರದ ಈ ನರೇಗಾ  ಯೋಜನೆಯ ಲಾಭವನ್ನು   ಪಡೆದುಕೊಳ್ಳಬೇಕೆಂದು ತಿಳಿಸಿದರು.

ಮಹಿಳಾ ಕಾಯಕೋತ್ಸವಕ್ಕೆ  ಆಯ್ಕೆಯಾಗಿರುವ  10 ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ವನಜಾಕ್ಷಿ ಪಾಟೀಲ, ಜ್ಯೋತಿ  ಉಪ್ಪಿನ,  ಮೇಘನ ಶೆಟ್ಟಿ, ಶಾಂತಲಾ ನಾಯ್ಕ,

ಬಸನಗೌಡ ಪಾಟೀಲ, ಅವಿನಾಶ ಅಂಗರಗಟ್ಟಿ,ಮತ್ತು ನರೇಗಾ ಸಂಯೋಜಕ ಎಸ್ ವಿ ಹಿರೇಮಠ, ಗ್ರಾಮ ಪಂಚಾಯತ ಗಣಕಯಂತ್ರ ಸಹಾಯಕರು, ಅಂಗನವಾಡಿ ಕಾರ್ಯಕರ್ತರು, ನರೇಗಾ  ಕಾಯಕ ಬಂಧುಗಳು,  ಸ್ವಸಹಾಯ ಸಂಘದ ಪ್ರತಿನಿಧಿಗಳು,  ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.

ತಾಲೂಕಾ ಸಂಯೋಜಕ ಎಸ್ ವಿ ಹಿರೇಮಠ ಅವರು ಮಹಿಳಾ ಕಾಯಕೋತ್ಸವ ಬಗ್ಗೆ  ಕಾರ್ಯಗಾರದ ಮೂಲಕ ಮಾಹಿತಿ ನೀಡಿದರು,  ತಾಲೂಕಿನ ಕೆಂಗಾನೂರ,  ಸುತಗಟ್ಟಿ,  ನಾಗನೂರು, ಸಂಗೊಳ್ಳಿ,  ಸಂಪಗಾಂವ, ಅಮಟೂರ, ಪಟ್ಟಿಹಾಳ ನೇಗಿನಹಾಳ, ಚಿಕ್ಕಬಾಗೇವಾಡಿ ಮತ್ತು ನೇಸರಗಿ ಗ್ರಾಮ ಪಂಚಾಯತಿಗಳು ಈ ಅಭಿಯಾನಕ್ಕೆ  ಆಯ್ಕೆಯಾಗಿವೆ.

 


Leave a Reply