Belagavi

ಐಹೊಳೆಗೆ ಸಚಿವ ಸ್ಥಾನ ನೀಡಲು ಆಗ್ರಹ


ಬೈಲಹೊಂಗಲ  29 – ರಾಯಬಾಗ ಶಾಸಕ ದುರ್ಯೋಧನ ಐಹೊಳೆ ವರೆಗೆ ನೂತನ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಅರ್ಪಿಸಲಾಯಿತು

ದುರ್ಯೋಧನ  ಐಹೊಳೆ ಅವರು ಮೂರು ಬಾರಿ ಶಾಸಕರಾಗಿ ಕ್ಷೇತ್ರದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದರ ಮೂಲಕ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಿ ಕಾರ್ಯನಿರ್ವಹಿಸುತ್ತಿದ್ದು ಕಳಂಕರಹಿತ ಆಡಳಿತವನ್ನು ನೀಡುತ್ತಿದ್ದಾರೆ. ಎಲ್ಲ ಧರ್ಮದ ಜಾತಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುತ್ತಿದ್ದಾರೆ. ಆದ್ದರಿಂದ ಅವರಿಗೆ ನೂತನ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಮನವಿ ಅರ್ಪಿಸಿದರು.

ಈ ಸಂದರ್ಭದಲ್ಲಿ  ಸಂಘರ್ಷ ಸಮಿತಿಯ ರಾಜಾಧ್ಯಕ್ಷ

ಸುರೇಶ  ರಾಯಪ್ಪಗೋಳ, ಪ್ರದಾನ ಕಾರ್ಯದರ್ಶಿ  ಬಸವರಾಜ ದೊಡಮನಿ, ಸಂಘಟನಾ  ಕಾರ್ಯದರ್ಶಿ  ಸಂಜೀವ  ಮುರಗೋಡ, ಖಜಾಂಚಿ  ಪ್ರಕಾಶ ದೊಡಮನಿ, ಯಲ್ಲಪ್ಪ  ಹೊಸಮನಿ, ಧರ್ಮರಾಜ ದೊಡಮನಿ, ಮುತ್ತು  ಹೊಂಗಲ, ಪ್ರಕಾಶ  ಹೊಸಮನಿ  ಹಾಗೂ  ಬಸವರಾಜ ಚುಳುಕಿ, ಬೈಲಹೊಂಗಲ  ಕರ್ನಾಟಕ ದಲಿತ  ಸಂಘರ್ಷ  ಸಮಿತಿಯ  ಸರ್ವ  ಸದಸ್ಯರು  ಉಪಸ್ಥಿತರಿದ್ದರು.

 


Leave a Reply