Belagavi

ಚಿಕ್ಕೋಡಿ ವಿಭಾಗದಲ್ಲಿ ಚಿಕ್ಕೋಡಿ-ಗೋಕಾಕ ಹಾಗೂ ಸಂಕೇಶ್ವರ-ಗೊಕಾಕ ಮಾರ್ಗದಲ್ಲಿ ಸಾರಿಗೆ ಕಾರ್ಯಾಚರಣೆ


ಬೆಳಗಾವಿ, ಜು.೨೯ : ಪ್ರಸ್ತುತ ಅಧಿಕ ಮಳೆಯ ಕಾರಣ ಚಿಕ್ಕೋಡಿ-ಗೋಕಾಕ ಹಾಗೂ ಸಂಕೇಶ್ವರ-ಗೋಕಾಕ ಮಾರ್ಗ ಬದಲಾವಣೆ ಮಾಡಿ ಸಾರಿಗೆ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಸಾರ್ವಜನಿಕ ಪ್ರಯಾಣಿಕರು ಇದರ ಪ್ರಯೋಜನ ಪಡೆಯಬೇಕು.
ಚಿಕ್ಕೋಡಿ-ಗೋಕಾಕ ಹಾಗೂ ಸಂಕೇಶ್ವರ-ಗೋಕಾಕ ಮಾರ್ಗ ಮಧ್ಯದಲ್ಲಿ ಬರುವ ಲೋಳಸೂರ ಸೇತುವೆಯು ತುಂಬಿದ ಕಾರಣ ಈ ಮಾರ್ಗದಿಂದ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಸಂಕೇಶ್ವರ-ಘಟಪ್ರಭಾ-ದುಫದಾಳ-ಕೊಣ್ಣೂರ-ಗೋಕಾಕ ಫಾಲ್ಸ್-ಗೋಕಾಕ ಹಾಗೂ ಚಿಕ್ಕೋಡಿ-ಘಟಪ್ರಭಾ-ದುಫದಾಳ-ಕೊಣ್ಣೂರ-ಗೋಕಾಕ ಫಾಲ್ಸ್-ಗೋಕಾಕವರೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಚಿಕ್ಕೋಡಿ ವಿಭಾಗದ ವಾಕರಸಾಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply