Belagavi

ಬೆಳಗಾವಿ ಜಿಲ್ಲೆಯಲ್ಲಿ ಸಸ್ಯ ಸಂತೆ ಗುಣಮಟ್ಟದ ಹಣ್ಣಿನ/ಫುಷ್ಪ/ಕಸಿಗಿಡಗಳು/ಜೈವಿಕ ಗೊಬ್ಬರ ಲಭ್ಯ


ಬೆಳಗಾವಿ, ಜು.೨೯ : ತೋಟಗಾರಿಕೆ ಇಲಾಖೆ ವತಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ಜುಲೈ ೨೪ರಿಂದ ಸಸ್ಯ ಸಂತೆ ಕಾರ್ಯಕ್ರಮವನ್ನು ಹ್ಯೂಮ ಪಾರ್ಕ, ಕ್ಲಬ್ ರೋಡ ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದು ಸಸ್ಯ ಸಂತೆಯನ್ನು ಅಗಸ್ಟ ೦೧ರ ವರೆಗೆ ಮುಂದುವರೆಸಲಾಗಿದೆ.
ಉತ್ತಮ ಗುಣಮಟ್ಟದ ಹೂವಿನ ಗಿಡಗಳು, ಅಲಂಕಾರಿಕ ಗಿಡಗಳು, ವಿವಿಧ ಬಗೆಯ ಹಣ್ಣಿನ ಗಿಡಗಳು ಹಾಗೂ ಜೈವಿಕ ಕೇಂದ್ರ, ಬೆಳಗಾವಿಯಲ್ಲಿ ಉತ್ಪಾದಿಸಿದ ವಿವಿಧ ಜೈವಿಕ ಗೊಬ್ಬರಗಳನ್ನು ಸಾರ್ವಜನಿಕರಿಗೆ / ರೈತರಿಗೆ ಮಾರಾಟಕ್ಕೆ ಲಭ್ಯವಿರುತ್ತವೆ. ಈ ಕಾರ್ಯಕ್ರಮದಲ್ಲಿ ಸಸಿಗಳ ಪೂರೈಕೆ ಏರ್ಪಡಿಸಲಾಗುವುದು.
ತೋಟಗಾರಿಕೆ ಅಭಿಯಾನ ಹಾಗೂ ಸಸ್ಯ ಸಂತೆ ಅಭಿಯಾನದಡಿ ಜಿಲ್ಲೆಯ ರೈತರಿಗೆ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಆಸಕ್ತಿ ಇರುವ ಸಾರ್ವಜನಿಕರಿಗೆ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಮಾವು, ಪೇರಲ, ಕರಿಬೇವು, ನೇರಳೆ ತಳಿಗಳಲ್ಲದೇ ಅನೇಕ ವಿವಿಧ ಕಸಿ/ಸಸಿಗಳು, ಅಲಂಕಾರಿಕ ಹೂವಿನ ಗಿಡಗಳು, (ದಾಸವಾಳ, ಗುಲಾಬಿ, ಸಂಪಿಗೆ ಬೋಗನವಿಲ್ಲಾ, ಅಡೆನಿಯಂ, ಜಿರಾನಿಯಂ, ಗೋಲ್ಡನ್ ಸೈಪ್ರಸ್ ಹಾಗೂ ಇತರೆ) ಸಸಿಗಳು ಲಭ್ಯವಿರುತ್ತವೆ. ರೈತರು ಹಾಗೂ ಸಾರ್ವಜನಿಕರು ಸಸ್ಯ ಸಂತೆಯ ಸದುಪಯೋಗ ಪಡೆದುಕೊಳ್ಳಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೩೧-೨೪೫೧೪೨೨ ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply