Belagavi

ಸಿ ಎಂ.ಬೊಮ್ಮಾಯಿಗೆ ಶುಭ ಕೋರಿದ ಶಾಸಕ, ಪದಾಧಿಕಾರಿಗಳು.   


 ಬೆಳಗಾವಿ: ಉತ್ತರ ಕರ್ನಾಟಕದ ಅನುಭವಿ ಸರಳ ವ್ಯಕ್ತಿತ್ವದ ರಾಜಕಾರಣಿ ಬಸವರಾಜ ಬೊಮ್ಮಾಯಿಯವರು ರಾಜ್ಯದ ಮುಖ್ಯಮಂತ್ರಿ ಆಗಿರುವದರಿಂದ ಉತ್ತರ ಕರ್ನಾಟಕಕ್ಕೆ ಆಧ್ಯತೆ ಸಿಕ್ಕಿದ್ದು ಸಂತಸ ತಂದಿದೆ ಎಂದು ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾ ಅಧ್ಯಕ್ಷ ಮಾಜಿ ಶಾಸಕ ಸಂಜಯ ಪಾಟೀಲ ಹರ್ಷ ವ್ಯಕ್ತಪಡಿಸಿದ್ದಾರೆ.
ನೂತನ ಮುಖ್ಯಮಂತ್ರಿಗಳಿಗೆ ಶುಭ ಹಾರೈಸಿ ಶುಕ್ರವಾರ ಮಾಧ್ಯಮ ಪ್ರಕಟಣೆ ಹೊರಡಿಸಿ, ಉತ್ತರ ಕರ್ನಾಟಕದ ಭಾಗದವರಿಗೆ ರಾಜಕೀಯ ಪ್ರಮುಖ‌ ಸ್ಥಾನಮಾನ ಸಿಗಬೇಕು ಎಂಬ ಕೂಗಿಗೆ ಬಿಜೆಪಿಯ ರಾಷ್ಟ್ರೀಯ ವರಿಷ್ಠರಿಂದ ಮತ್ತು ಶಾಸಕರ ಸಭೆಯಲ್ಲಿ ಬಸವರಾಜ ಬೊಮ್ಮಾಯಿಯವರು ರಾಜ್ಯದ ಮುಖ್ಯಮಂತ್ರಿಯಾಗಿ ಅವಿರೊಧವಾಗಿ ಆಯ್ಕೆಯಾಗುವ ಮೂಲಕ ಪಕ್ಷದ ವರ್ಚಸ್ಸು ಮತ್ತಷ್ಟು ಹೆಚ್ಚಿಸಿದೆ.
ಬೆಳಗಾವಿ ಜಿಲ್ಲೆಯ ಅನೇಕ ಜ್ವಲಂತ ಸಮಸ್ಯೆಗಳಿಗೆ ಇವರ ಅಧಿಕಾರವಧಿಯಲ್ಲಿ ಪರಿಹಾರ ಸಿಗುವ ಭರವಸೆವಿದ್ದು ನಮ್ಮೆಲ್ಲರ ನಾಯಕ ಬಿ.ಎಸ್.ಯಡಿಯೂರಪ್ಪನವರ ಹಾದಿಯಲ್ಲಿ ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡಲಿದ್ದಾರೆ. ಅಧಿಕಾರ ವಹಿಸಿಕೊಂಡ ಕೆಲವೆ ಸಮಯದಲ್ಲಿ ರೈತರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಶಿಷ್ಯವೇತನ ನೀಡಲು 1ಸಾವಿರ ಕೋಟಿ ರೂಪಾಯಿ ನಿಗದಿಗೊಳಿಸಿ ರೈತರ ಮಕ್ಕಳ ಕಲ್ಯಾಣಕ್ಕೆ ಪಣ ತೊಟ್ಟಿರುವದು ಶ್ಲಾಘನೀಯ ಎಂದರು.
 ಕಿತ್ತೂರು ಚೆನ್ನಮ್ಮ ಕ್ಷೇತ್ರದ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡುತ್ತಾ        ಸಮಾಜದಲ್ಲಿರುವ ಅಶಕ್ತ ಜನರಿಗೆ ಆಸರೆಯಾಗಿ ಶೇ 40-70 ಅಂಗವಿಕಲರ  ಹಾಗೂ ವಿಧವೆಯರ ಪಿಂಚಣಿ ಹಣವನ್ನು 600ರಿಂದ 800ಕ್ಕೆ ಹಾಗೂ ವಯಸ್ಸಾದ ವೃದ್ದರಿಗೆ ನೀಡುತಿದ್ದ 1ಸಾವಿರ ರೂಪಾಯಿಗಳಿಂದ 12 ನೂರು ರೂಪಾಯಿಗಳಿಗೆ ಹೆಚ್ಚಿಸುವ ಮೂಲಕ ಸಾಮಾಜದಲ್ಲಿ ಆಶಕ್ತರ ಸ್ವಾಭಿಮಾನ ಬದುಕಿಗೆ ದಾರಿದೀಪವಾಗಿದ್ದಾರೆ ಎಂದರು.
      ಈ ಸಂದರ್ಭದಲ್ಲಿ     ‌‌‌ಕಾಡಾ ಅಧ್ಯಕ್ಷ ಡಾ.ವಿ.ಆಯ್.ಪಾಟೀಲ, ಬುಡಾ ಅಧ್ಯಕ್ಷ  ಘೂಳಪ್ಪ ಹೊಸಮನಿ ಇತರರು ಇದ್ದರು.

Leave a Reply