Belagavi

ಅಪರಿಚಿತ ವ್ಯಕ್ತಿ ಸಾವು


ಬೆಳಗಾವಿ, ಜು.೩೦ :ಬೆಳಗಾವಿ ಜಿಲ್ಲೆಯ ನ್ಯೂ ಗಾಂಧಿ ನಗರದÀ ಹತ್ತಿರದ ಓವರ ಬ್ರೀಜ್ ಕೆಳಗೆ ರೈಲ್ವೇ ಹಳಿಗಳಲ್ಲಿ ಶೇಡಬಾಳ ಪ್ಯಾಸೆಂಜರ್ ರೈಲು ಗಾಡಿಯ ಮುಂದೆ ಬಿದ್ದು ಅಪರಿಚಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡು ಜುಲೈ ೨೯ ರಂದು ಮೃತಪಟ್ಟಿರುತ್ತಾನೆ.
ಈ ಕುರಿತು ಬೆಳಗಾವಿ ರೈಲ್ವೇ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಅಪರಿಚಿತ ವ್ಯಕ್ತಿಯ ವಯಸ್ಸು ಸುಮಾರು ೬೫ ವರ್ಷ ಆಗಿದ್ದು, ೫.೫ ಅಡಿ ಎತ್ತರ, ಕಪ್ಪು ಮೈ ಬಣ್ಣ ,ಕೋಲು ಮುಖ, ನೇರವಾದ ಮೂಗು ಮತ್ತು ತೆಳ್ಳನೆಯ ಶರೀರ ,ಬಿಳಿ ಕೂದಲು, ಮೀಸೆ ಹೊಂದಿದ್ದು, ಬಿಳಿ ಜುಬ್ಬಾ, ಪೈಜಾಮಾ ಮತ್ತು ಕಪ್ಪು ಬಣ್ಣದ ಪ್ಲಾಸ್ಟಿಕ್ ಬೂಟ್ ಧರಿಸಿರುತ್ತಾರೆ.
ಈ ಚಹರೆ ಪಟ್ಟ ಹೋಲುವ ವ್ಯಕ್ತಿÀ ಕಾಣೆಯಾದ ಬಗ್ಗೆ ತಮ್ಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೆ ಅಥವಾ ಮೃತನ ರಕ್ತ ಸಂಬAಧಿಗಳು ಯಾರಾದರೂ ಪತ್ತೆಯಾದರೆ ಬೆಳಗಾವಿಯ ರೈಲ್ವೇ ಪೋಲಿಸ್ ಠಾಣೆ ದೂರವಾಣಿ ಸಂಖೈ ೦೮೩೧-೨೪೦೫೨೭೩, ಪಿ.ಎಸ್.ಐ ೯೪೮೦೮೦೨೧೨೭ ಅಥವಾ ರೈಲ್ವೇ ಪೋಲಿಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖೈ ೦೮೦-೨೨೮೭೧೨೯೧ ಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ರೈಲ್ವೇ ಪೋಲಿಸ್ ಠಾಣೆಯ ಆರಕ್ಷಕ ಉಪನೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply