Belagavi

ವ್ಯಕ್ತಿ ನಾಪತ್ತೆ


ಬೆಳಗಾವಿ, ಜು.೩೦ :ಗೋಕಾಕ್ ತಾಲೂಕಿನ ಬೇಟಗೇರಿ ಗ್ರಾಮದ ನಿವಾಸಿಯಾದ ಶಾಂತವ್ವಾ ಪತ್ರೇಪ್ಪಾ ಮೇಳನ್ನವರ ಮಗನಾದ ಮಲ್ಲಿಕಾರ್ಜುನ ಪತ್ರೇಪ್ಪಾ ಮೇಳನ್ನವರ ೨೦೧೪ ರ ಜೂನ್.೧೪ ರಂದು ರಾತ್ರಿ ೭ ಗಂಟೆಗೆ ಮನೆಯಿಂದ ಯಾರಿಗೂ ಹೇಳದೆ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾನೆ. ಈ ಕುರಿತು ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಯಸ್ಸು ೩೨, ಸದೃಢ ಮೈ ಕಟ್ಟು, ದುಂಡು ಮುಖ, ಕಪ್ಪು ಕೂದಲು, ಕೆಂಪು ಬಣ್ಣದ ಶರ್ಟ, ಖಾಕಿ ಬಣ್ಣದ ಪ್ಯಾಂಟ್ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ.
ಸದರಿ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಗೋಕಾಕ ತಾಲೂಕಿನ ಕುಲಗೋಡ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: ೦೮೩೩೪-೨೨೨೨೩೩ ಯನ್ನು ಸಂಪರ್ಕಿಸಬಹುದು ಎಂದು ಕುಲಗೋಡ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply