Belagavi

ಸ್ವಾತಂತ್ರ್ಯೋತ್ಸವನ್ನು ಸರಳವಾಗಿ ಆಚರಿಸಲು ನಿರ್ಧಾರ


ಬೈಲಹೊಂಗಲ 31- ಬರುವ ಅಗಸ್ಟ್ 15 ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಯನ್ನು ನಗರದಲ್ಲಿ ಸರಳವಾಗಿ ಆಚರಿಸಲು ನಿರ್ಧರಿಸಲಾಯಿತು.

ಪಟ್ಟಣದ ತಾಲೂಕ ಸಭಾಭವನದಲ್ಲಿ ಶನಿವಾರ ಜರುಗಿದ ಸ್ವಾತಂತ್ರೋತ್ಸವ ಪೂರ್ವಭಾವಿ ಸಭೆಯಲ್ಲಿ ಸ್ವಾತಂತ್ರ್ಯೋತ್ಸವವನ್ನು  ಕೋವಿಡ್ ಇರುವ ಕಾರಣ ಸರ್ಕಾರದ ನಿಯಮಾನುಸಾರ ಅತ್ಯಂತ ಸರಳ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಉಪವಿಭಾಗಾಧಿಕಾರಿ  ಶಶಿಧರ ಬಗಲಿ  ಅವರು ತಿಳಿಸಿದರು.

ಈ ಸಂದರ್ಭದಲ್ಲಿ ತಹಸಿಲ್ದಾರ ಬಸವರಾಜ ನಾಗರಾಳ

ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ, ಪುರಸಭೆ ಮ ಮುಖ್ಯಾಧಿಕಾರಿ ಕವಿರಾಜ ನಾಗನೂರ ವೇದಿಕೆ ಮೇಲೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ

ಯೋಧರನ್ನು ಹಾಗೂ ಕೋರೋನಾ  ವಾರಿಯರ್ಸ್ ರನ್ನು ಸನ್ಮಾನಿಸಲು ನಿರ್ಧರಿಸಲಾಯಿತು.

ಗಣ್ಯರಾದ ಬಿ, ಜಿ  ತುರಮರಿ, ಮಹಾಂತೇಶ ಅಕ್ಕಿ, ವಿ,  ಎಲ್  ಮಾತಾಡೆ, ಅಶೋಕ  ಹೊಸೂರ ಸೇರಿದಂತೆ  ವಿವಿಧ ಇಲಾಖೆಯ  ಅಧಿಕಾರಿಗಳು  ಹಾಜರಿದ್ದರು. ಬಸವರಾಜ ಭರಮಣ್ಣವರ ನಿರೂಪಿಸಿದರು.


Leave a Reply