Belagavi

ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾಗಿ ಚವಲಗಿ ಆಯ್ಕೆ


ಬೆಳಗಾವಿ ದಿ 31 :-ನಾ೯ಟಕ ರಾಜ್ಯ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಚನ್ನಮ್ಮನ ಕಿತ್ತೂರು ತಾಲೂಕಿನ ಘಟಕದ ಅಧ್ಯಕ್ಷ ರಾಗಿ  ಸುರೇಶ ಚವಲಗಿ ಯವರನ್ನುಆಯ್ಕೆ ಮಾಡಲಾಯಿತು

ಇಂದು ಸಂಘದ ಎಲ್ಲಾ ಪದಾಧಿಕಾರಿಗಳು ಸೇರಿಕೊಂಡು ಕಿತ್ತೂರಿನಲ್ಲಿ ನಡೆದ ಸಭೆಯಲ್ಲಿ ಆಯ್ಕೆ ನಡೆಸಲಾಯಿತು

ಇಲ್ಲಿಯ ವರೆಗೆ ಅಧ್ಯಕ್ಷ ರಾಗಿ ಕಾಯ೯ನಿರತರಾಗಿದ್ದ ಶಶಿಧರ ರೊಟ್ಟಿ ಯವರು  ನಿವೃತ್ತಿ ಹೊಂದಿದ ಪ್ರಯುಕ್ತ ಈ ಆಯ್ಕೆ ಸವಾ೯ನುಮತದಿಂದ  ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಗಳಾದ ಆರ್ .ಕೆ ಬಣ್ಣಪ್ಪ ಗೌಡ್ರು, ಉಪಾಧ್ಯಕ್ಷರಾದ ಎಚ್. ಬಿ. ಬೋಗೂರ್ .ಶ್ರೀಮತಿ ವಿ.ವಿ. ಚಂಗೋಲಿ, ಪಿ.ಎನ .ನಾಡಗೌಡ.ಸಿ.ಬಿ. ಮುರಗೋಡ. ಎಂ. ಆರ್. ಬೋಗೂರ್  ಉಪಸ್ಥಿತರಿದ್ದರು

ಹಿಂದಿನ ಅಧ್ಯಕ್ಷ ರಾಗಿ ಎಸ್. ಎಸ್. ರೊಟ್ಟಿ ರವರ ಮಾರ್ಗದರ್ಶನದಲ್ಲಿ ಸಭೆ ನಡೆಸಲಾಯಿತು.

ಅಭಿನಂದನೆ:- ಕ್ರಿಯಾಶೀಲ ಮುಖ್ಯೋಪಾಧ್ಯಾಯರಾದ ಸುರೇಶ ಚವಲಗಿ ಯವರನ್ನು ಅಧ್ಯಕ್ಷ ರಾಗಿ ಆಯ್ಕೆಮಾಡಿದ ನಿಮಿತ್ತ ಅವರಿಗೆ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಗಳಾದ ಬಸವರಾಜ ಸುಣಗಾರ ಅಭಿನಂದನೆ ಸಲ್ಲಿಸಿ ಅವರಿಂದ ಉತ್ತಮ ಕೆಲಸ ಕಾರ್ಯಗಳು ಆಗಲೆಂದು ಆಶಿಸಿದ್ದಾರೆ


Leave a Reply