Belagavi

೨೦೨೦ ನೇ ವರ್ಷದ ಪುಸ್ತಕ ಬಹುಮಾನಕ್ಕಾಗಿ ಪುಸ್ತಕಗಳಿಗೆ ಸಲ್ಲಿಕೆಗೆ ಅರ್ಜಿ ಆಹ್ವಾನ


ಬೆಳಗಾವಿ, ಜು.೩೧ : ಕರ್ನಾಟಕ ಸಾಹಿತ್ಯ ಅಕಾಡಮಿಯು ಪ್ರತಿವರ್ಷದಂತೆ ೨೦೨೦ ನೇ ವರ್ಷದ ಪುಸ್ತಕ ಬಹುಮಾನ ಯೋಜನೆಗಾಗಿ ಪುಸ್ತಕಗಳನ್ನು ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿ ಪ್ರಕಾರದಲ್ಲಿ ವಿಮರ್ಶಕರು ಆಯ್ಕೆ ಮಾಡುವ ಒಂದು ಕೃತಿಗೆ ಬಹುಮಾನ ನೀಡಲಾಗುವುದು. ಬಹುಮಾನಕ್ಕೆ ಸಲ್ಲಿಸುವ ಕೃತಿಗಳು ೨೦೨೦ ರ ಜನವರಿ ೧ ರಿಂದ ೨೦೨೦ ರ ಡಿಸೆಂಬರ್ ೩೧ ರೊಳಗೆ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುವ ಕೃತಿಗಳಾಗಿರಬೇಕು. ಕೃತಿಯಲ್ಲಿ ಪ್ರಥಮ ಮುದ್ರಣ ೨೦೨೦ ಎಂದು ಮುದ್ರಿತವಾಗಿರಬೇಕು.
ಕಾವ್ಯ (ವಚನಗಳು ಮತ್ತು ಹನಿಗವನಗಳು ಸೇರಿ), ನವಕವಿಗಳ ಪ್ರಥಮ ಕವನ ಸಂಕಲನ (ದೃಢೀಕರಣ ಪತ್ರದೊಂದಿಗೆ), ಕಾವ್ಯ ಹಸ್ತಪ್ರತಿ (೩೦ ವರ್ಷ ಒಳಗಿನ ಯುವ ಕವಿಗಳ ಅಪ್ರಕಟಿತ ಕವನ ಸಂಕಲನದ ಹಸ್ತಪ್ರತಿಯನ್ನು ಚಿ.ಶ್ರೀನಿವಾಸರಾಜು ದತ್ತಿನಿಧಿ ಬಹುಮಾನಕ್ಕಾಗಿ ಕಳಿಸಿಕೊಡಬೇಕು.
ಕಾದಂಬರಿ (ಅಕಾಡೆಮಿ ಪುಸ್ತಕ ಬಹುಮಾನ ಹಾಗೂ ಚದುರಂಗ ದತ್ತಿನಿಧಿ ಬಹುಮಾನಗಳಿಗಾಗಿ, ಸಣ್ಣಕತೆ, ನಾಟಕ ಲಿಖಿತ ಪ್ರಬಂಧ (ಹರಟೆ ಮತ್ತು ವಿನೋದ ಸಾಹಿತ್ಯ ಸೇರಿ) (ಅಕಾಡೆಮಿ ಪುಸ್ತಕ ಬಹುಮಾನ ಹಾಗೂ ವಿ.ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿನಿಧಿ ಬಹುಮಾನಗಳಿಗಾಗಿ), ಪ್ರವಾಸ ಸಾಹಿತ್ಯ, ಜೀವನಚರಿತ್ರೆ / ಆತ್ಮಕಥೆ (ಅಕಾಡೆಮಿ ಪುಸ್ತಕ ಬಹುಮಾನ ಹಾಗೂ ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನಗಳಿಗಾಗಿ), ಸಾಹಿತ್ಯ ವಿಮರ್ಶೆ (ಸಾಹಿತ್ಯ ಚರಿತ್ರೆ , ಸಾಹಿತ್ಯತತ್ವ ಮತ್ತು ಸೌಂದರ್ಯ ಮೀಮಾಂಸೆ ಸೇರಿ) (ಅಕಾಡೆಮಿ ಪುಸ್ತಕ ಬಹುಮಾನ ಹಾಗೂ ಪಿ . ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನಗಳಿಗಾಗಿ ಕಳುಹಿಸಿಕೊಡಬೇಕು.
ಗ್ರಂಥ ಸಂಪಾದನೆ (ಪ್ರಾಚೀನ ಕೃತಿಗಳ ಸಂಪಾದನೆ), ಮಕ್ಕಳ ಸಾಹಿತ್ಯ, ವಿಜ್ಞಾನ ಸಾಹಿತ್ಯ (ಭೌತ , ರಸಾಯನ , ಗಣಿತ , ಪ್ರಾಣಿ , ಸಸ್ಯ , ಇಂಜಿನಿಯರಿAಗ್ , ವೈದ್ಯ , ಭೂ , ಖಗೋಳ , ಗೃಹವಿಜ್ಞಾನ , ಪರಿಸರ), ಮಾನವಿಕ (ಜಾನಪದ , ಇತಿಹಾಸ , ರಾಜಕೀಯ ಶಾಸ್ತöç , ಸಮಾಜಶಾಸ್ತöç , ಮಾನವಶಾಸ್ತöç , ಮನಃಶಾಸ್ತöç , ಭಾಷಾಶಾಸ್ತöç , ಶಿಕ್ಷಣ , ವಾಣಿಜ್ಯ , ಕಾನೂನು , ಗ್ರಂಥಭAಡಾರ ವಿಜ್ಞಾನ , ಸಮೂಹಸಂವಹನ , ಧಾರ್ಮಿಕ , ದಾರ್ಶನಿಕ), ಸಂಶೋಧನೆ (ಕನ್ನಡ ಭಾಷೆ ಸಾಹಿತ್ಯ ಮತ್ತು ಸಂಸ್ಕöÈತಿ ಗಳಿಗೆ ಸಂಬAಧಿಸಿದ ಸಂಶೋಧನೆ), ವೈಚಾರಿಕ | ಅಂಕಣ ಬರಹ (ಅಕಾಡೆಮಿ ಪುಸ್ತಕ ಬಹುಮಾನ ಹಾಗೂ ಬಿ.ವಿ. ವೀರಭದ್ರಪ್ಪ ದತ್ತಿನಿಧಿ ಬಹುಮಾನಗಳಿಗಾಗಿ) ಕಳುಹಿಸಿಕೊಡಬೇಕು.
ಅನುವಾದ -೧ ಇಂಗ್ಲಿಷ್ ಸೇರಿದಂತೆ ಭಾರತೀಯ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡ (ಸೃಜನ , ಸೃಜನೇತರ ಕೃತಿಗಳು) (ಅಕಾಡೆಮಿ ಪುಸ್ತಕ ಬಹುಮಾನ ಹಾಗೂ ಎಲ್ . ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನಗಳಿಗಾಗಿ), ಅನುವಾದ -೨ ಕನ್ನಡದಿಂದ ಅನ್ಯಭಾಷೆಗಳಿಗೆ ಅನುವಾದಗೊಂಡ ಸೃಜನ (ಸೃಜನೇತರ ಕೃತಿ), ಲೇಖಕರ ಮೊದಲ ಸ್ವತಂತ್ರ ಕೃತಿ (೨೦೨೦ ರಲ್ಲಿ ಮೊದಲ ಮುದ್ರಣಗೊಂಡ ಸ್ವತಂತ್ರ ಕೃತಿ , ಖಾತರಿಪಡಿಸಲು ದೃಢೀಕರಣ ಪತ್ರ ಲಗತ್ತಿಸಬೇಕು.) (ಆಕಾಡೆಮಿ ಪುಸ್ತಕ ಬಹುಮಾನ ಹಾಗೂ ಮಧುರಚೆನ್ನ ದತ್ತಿನಿಧಿ ಬಹುಮಾನಗಳಿಗಾಗಿ), ಕನ್ನಡದಿಂದ ಇಂಗ್ಲಿಷಿಗೆ ಅನುವಾದ (ಅಮೆರಿಕನ್ನಡ ದತ್ತಿನಿಧಿ ಬಹುಮಾನಕ್ಕಾಗಿ), ದಾಸ ಸಾಹಿತ್ಯ (ದಾಸ ಸಾಹಿತ್ಯ ಕುರಿತ ಸೃಜನ , ಸೃಜನೇತರ ಕೃತಿಗಳು) (ಶ್ರೀಮತಿ ಜಲಜಾ ಶ್ರೀಪತಿ ಆಚಾರ್ಯ ಗಂಗೂರ್ ದತ್ತಿನಿಧಿ ಬಹುಮಾನಕ್ಕಾಗಿ) ಕಳುಹಿಸಿಕೊಡಬೇಕು.
ಸಂಕೀರ್ಣ (ಮೇಲಿನ ಯಾವುದೇ ಪ್ರಕಾರಕ್ಕೆ ಹೊಂದಿಕೊಳ್ಳದ ವಿಶಿಷ್ಟ ಕೃತಿಗಳು) ಬಹುಮಾನಕ್ಕಾಗಿ ಪರಿಗಣಿಸಲ್ಪಡದ ಕೃತಿಗಳು :
೧) ಮರುಮುದ್ರಣವಾದ ಪುಸ್ತಕಗಳಾಗಿರಬಾರದು .
೨) ಪಿಎಚ್.ಡಿ . ಪದವಿಗಾಗಿ ಸಿದ್ಧಪಡಿಸಿದ ಸಂಶೋಧನಾ ಗ್ರಂಥಗಳಾಗಿರಬಾರದು.
೩) ಪಠ್ಯಪುಸ್ತಕಗಳಾಗಿರಬಾರದು .
೪) ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕöÈತ ಸಾಹಿತಿಗಳ ಕೃತಿಗಳಾಗಿರಬಾರದು.
೫) ಈಗಾಗಲೇ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಒಟ್ಟಾರೆ ಮಧು. ಬಾರಿ ಪುಸ್ತಕ ಬಹುಮಾನ ಪಡೆದವರ ಕೃತಿಗಳಾಗಿರಬಾರದ .
೬) ಒಂದು ಪ್ರಕಾರದಲ್ಲಿ ಒಂದು ಬಾರಿ ಪುಸ್ತಕ ಬಹುಮಾನ ಪಡೆದವರ ಕೃತಿಗಳನ್ನು ಮತ್ತದೇ ಪ್ರಕಾರದಲ್ಲಿ ಮುಂದಿನ ಮೂರು ವರ್ಷದವರೆಗೆ ಪರಿಗಣಿಸುವುದಿಲ್ಲ.
೭) ಒಬ್ಬ ಲೇಖಕರಿಗೆ ಮೂರು ಬಾರಿ ಬೇರೆ ಬೇರೆ ಪ್ರಕಾರಗಳಲ್ಲಿ ಬಹುಮಾನ ಪಡೆಯುವ ಅವಕಾಶವಿದೆ.
ಕಳುಹಿಸಲ್ಪಡುವ ಕೃತಿಯ ಮೇಲೆ ತಿಳಿಸಿದ ಪ್ರಕಾರಗಳಲ್ಲಿ ಯಾವ ಸಾಹಿತ್ಯ ಪ್ರಕಾರಕ್ಕೆ ಸೇರುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ಪುಸ್ತಕದ ಶೀರ್ಷಿಕೆ ಪುಟದಲ್ಲಿ ಬರೆದಿರಬೇಕು ಎಂದು ತಿಳಿಸಿದ್ದಾರೆ.
ಮೇಲ್ಕಂಡ ಅವಧಿಯಲ್ಲಿ ಪ್ರಕಟವಾದ ಪುಸ್ತಕಗಳ ತಲಾ ೪ ಪ್ರತಿಗಳನ್ನು ರಿಜಿಸ್ಟಾöçರ್ , ಕರ್ನಾಟಕ ಸಾಹಿತ್ಯ ಅಕಾಡೆಮಿ , ಕನ್ನಡ ಭವನ , ೨ ನೇ ಮಹಡಿ , ಜೆ.ಸಿ.ರಸ್ತೆ , ಬೆಂಗಳೂರು -೫೬೦೦೦೨ ಇವರಿಗೆ ರಿಜಿಸ್ಟರ್ಡ್ ಅಂಚೆ ಕೊರಿಯರ್ ಮೂಲಕ ಅಥವಾ ಖುದ್ದಾಗಿ ೨೦೨೧ ರ ಸೆಪ್ಟೆಂಬರ್ ೧೫ ರೊಳಗೆ ತಲುಪಿಸಬೇಕು ಎಂದು ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply