Belagavi

ಸೋಯಾಬಿನ್ ಬೆಳೆ ; ರೋಗ ನಿಯಂತ್ರಣಕ್ಕೆ ಕ್ರಮ


ಬೆಳಗಾವಿ, ಜು.೩೧ : ತಾಲೂಕಿನಲ್ಲಿ ಸೋಯಾಬಿನ್ ಬೆಳೆ ಹೂವಾಡುವ ಹಂತದಿAದ ಕಾಯಿ ಕಟ್ಟುವ ಹಂತದಲ್ಲಿದ್ದು, ತುಕ್ಕು ರೋಗಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಈ ರೋಗಕ್ಕೆ ತುತ್ತಾದ ಗಿಡದ ಕೆಳಭಾಗದ ಎಲೆಗಳ ಕೆಳಬದಿಯಲ್ಲಿ ಬೂದು ಬಣ್ಣದ ಸಣ್ಣ ಸಣ್ಣ ಗುಳ್ಳೆ ತರಹದ ಚಿನ್ಹೆಗಳು ಪ್ರಾರಂಭದಲ್ಲಿ ಕಾಣಿಸಿಕೊಂಡು ನಂತರ ಕೆಂಪು ಕಂದು ಬಣ್ಣಕ್ಕೆ ತಿರುಗುತ್ತವೆ. ಕ್ರಮೇಣ ಗಿಡದ ಮೇಲ್ಬಾಗದ ಎಲೆಗಳಿಗೂ ಹರಡಿ ಎಲ್ಲಾ ಎಲೆಗಳೂ ಹಳದಿ ವರ್ಣಕ್ಕೆ ತಿರುಗಿ ನಂತರ ಉದುರಿ ಬೀಳುತ್ತವೆ.
ಹತೋಟಿಗಾಗಿ ಈ ರೋಗ ಕಂಡ ತಕ್ಷಣ ಪ್ರತಿ ಲೀಟರ ನೀರಿಗೆ ೧ ಮಿ.ಲೀ ಹೆಕ್ಜಾಕೊನ್‌ಜೋಲ್ ೫ ಇ.ಸಿ ಅಥವಾ ೧ ಮಿ.ಲೀ ಪ್ರೊಪಿಕೊನ್‌ಜೋಲ್ ೨೫ ಎ.ಸಿ. ಶೀಲಿಂದ್ರ ನಾಶಕ ಔಷಧಿಯನ್ನು ಬೆರೆಸಿ ಸಿಂಪಡಿಸಬೇಕು. ರೋಗದ ತೀರ್ವತೆಗಣುಗುಣವಾಗಿ ೧೫ ದಿನಗಳ ಅಂತರದಲ್ಲಿ ಮತ್ತೊಮ್ಮೆ ಸಿಂಪರಣೆ ಮಾಡಬೇಕು. ಪ್ರತಿ ಎಕರೆಗೆ ೨೫೦ ರಿಂದ ೩೦೦ ಲೀಟರ ಸಿಂಪರಣಾ ದ್ರಾವಣ ಉಪಯೋಗಿಸಬೇಕು. ಡಿ.ಎಸ್.ಬಿ-೨೧ ತಳಿಯ ಸೋಯಾಬಿನ್ ಬೆಳೆ ಈ ರೋಗಕ್ಕೆ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಈ ತಳಿಗೆ ಶೀಲಿಂದ್ರ ನಾಶಕ ಸಿಂಪರಣೆ ಅವಶ್ಯಕತೆ ಇರುವುದಿಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply