Belagavi

ಸೇವಾ  ನಿವೃತ್ತಿಯಾದ ಕಾದ್ರೊಳ್ಳಿ ಗೆ  ಬೀಳ್ಕೊಡುಗೆ


ಬೈಲಹೊಂಗಲ 31:- ಇಲ್ಲಿಯ  ದಿ. ಓರಿಯಂಟಲ್   ಇನ್ಶೂರೆನ್ಸ್  ಕಂಪನಿಯಲ್ಲಿ  ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದ ದೊಡ್ಡವೀರಪ್ಪ ಕಾದ್ರೊಳ್ಳಿ ಅವರು ಸೇವೆಯಿಂದ ನಿವೃತ್ತಿ ಹೊಂದಿದ ಪ್ರಯುಕ್ತ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಪಟ್ಟಣದ ಹೊಸೂರು ರಸ್ತೆಯಲ್ಲಿರುವ ಓರಿಯಂಟಲ್ ಇನ್ಸೂರೆನ್ಸ್ ಕಾರ್ಯಾಲಯದಲ್ಲಿ ಶುಕ್ರವಾರ ಜರುಗಿದ ಬೀಳ್ಕೊಡುವ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಹುಬ್ಬಳ್ಳಿ ಶಾಖೆ ಮ್ಯಾನೇಜರ್ ಎನ್ ಸುದರ್ಶನ್ ಮಾತನಾಡಿ ಕಳೆದ 34 ವರ್ಷಗಳವರೆಗೆ ಸಂಸ್ಥೆಯ ವಿವಿಧ ಹುದ್ದೆಗಳಲ್ಲಿ ಸದಾ ನಗುಮುಖದಿಂದ ಪ್ರಾಮಾಣಿಕವಾಗಿ ಶಿಸ್ತಿನಿಂದ ಕರ್ತವ್ಯ ನಿರ್ವಹಿಸಿ ಈಗ ಸಂಸ್ಥೆ ಮ್ಯಾನೇಜರಾಗಿ ಕಾರ್ಯನಿರ್ವಹಿಸಿ ಸೇವೆಯಿಂದ ನಿವೃತ್ತಿ ಹೊಂದಿದ

ಡಿ ಡಿ ಕಾದ್ರೊಳ್ಳಿ ಅವರು ನೀಡಿದ ಸೇವೆಯನ್ನು ಶ್ಲಾಘಿಸಿ, ಕಾದ್ರೊಳ್ಳಿ ಅವರ ಆದರ್ಶಗಳನ್ನು ಇಂದಿನ ಎಲ್ಲ ಸಿಬ್ಬಂದಿ ಅವರು ಪಾಲಿಸಬೇಕು ಹಾಗೂ ಅವರ ನಿವೃತ್ತಿ ಜೀವನ ಸುಖಮಯವಾಗಿರಲೆಂದು ಶುಭಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು  ವಹಿಸಿದ್ದ  ಶ್ರೀಪಾದ ಕುಲಕರ್ಣಿ ಮಾತನಾಡಿ ಕಾದ್ರೊಳ್ಳಿಯವರು  34 ವರ್ಷಗಳವರೆಗೆ ಸಂಸ್ಥೆಯ ಶಿಸ್ತಿನ ಸಿಪಾಯಿಯಾಗಿ ಪ್ರಾಮಾಣಿಕವಾಗಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಅವರು ಸೇವೆಯಿಂದ  ನಿವೃತ್ತಿಯಾಗಿರುವ ಸಂಸ್ಥೆಯ ನಿವೃತ್ತಿ  ಹೊಂದಿದ  ಪತ್ರವನ್ನು ನೀಡಿ ಕಾದ್ರೊಳ್ಳಿಯವರ  ಸೇವೆ  ಇತರರಿಗೆ  ಮಾದರಿಯಾಗಲಿ ಎಂದು ನುಡಿದರು.

ಸೇವೆಯಿಂದ  ನಿವೃತ್ತಿ ಹೊಂದಿ ಓರಿಯಂಟಲ್ ಸಂಸ್ಥೆಯ ಸಿಬ್ಬಂದಿಯವರಿಂದ   ಸನ್ಮಾನ ಸ್ವೀಕರಿಸಿದ ದೊಡ್ಡಪ್ಪ ಕಾದ್ರೊಳ್ಳಿ ಮಾತನಾಡಿ ನನ್ನ ಸೇವಾವಧಿಯಲ್ಲಿ ಸಂಸ್ಥೆಯ ಅಧಿಕಾರಿಗಳು ಹಲವು  ರೀತಿಯಲ್ಲಿ ನನಗೆ ಮಾರ್ಗದರ್ಶನ ಮಾಡಿದರು ಹಾಗೂ ಸಂಸ್ಥೆಯಲ್ಲಿ ನನ್ನ ಜೊತೆ ಸೇವೆಸಲ್ಲಿಸುತ್ತಿದ್ದ  ಸಿಬಂದಿಯವರು  ಸಹಕಾರ  ನೀಡಿದ್ದು  ಕಳೆದ 34 ವರ್ಷಗಳ ಕಾಲ ಸಂಸ್ಥೆಯಲ್ಲಿ ಪ್ರಾಮಾಣಿಕವಾಗಿ ಸಲ್ಲಿಸಿದ ಸೇವೆ ನನಗೆ ತೃಪ್ತಿ ತಂದಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅವರು ಡಿ ಡಿ ಕಾದ್ರೊಳ್ಳಿ ಅವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಬಿಳ್ಕೊಟ್ಟರು, ಸಂಸ್ಥೆಯ ವಿವಿಧ ಶಾಖೆಗಳ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಸಿ ಎಸ್ ಕುಲಕರ್ಣಿ ಪ್ರಾರ್ಥಿಸಿದರು. ಶ್ರೀಪಾದ ಕುಲಕರ್ಣಿ ಸ್ವಾಗತಿಸಿದರು

ಶಂಕರ್ ಪೂಜಾರಿ ನಿರೂಪಿಸಿ ವಂದಿಸಿದರು


Leave a Reply