Koppal

ಬದುಕಲು ಬಿಡಿ ಇಲ್ಲವೆ, ನಮ್ಮ ನ್ನು ಸಾಯಲು ಬಿಡಿ -ಬೀದಿ ವ್ಯಾಪಾರ ಸ್ಥರು ಅಳಲು.


ಕುಷ್ಟಗಿ:ಪಟ್ಟಣದ ಬೀದಿ ವ್ಯಾಪಾರಸ್ಥರಗೆ ಪ್ರತಿದಿನ ಪೊಲೀಸ್ ಇಲಾಖೆ ಮತ್ತು ಪುರಸಭೆಯಿಂದ ಇಲಾಖೆ ನಮಗೆ ಕೇಸ್ ಹಾಕುವ ಮೂಲಕ ನಮಗೆ ತೊಂದರೆ ನೀಡುತ್ತಿದ್ದಾರೆ. ನಾವು ಏನು ತಪ್ಪು ಏನು ಮಾಡಿದ್ದೇವೆ ಎನ್ನುವುದನ್ನು ಅಧಿಕಾರಿಗಳು ಸ್ಪಷ್ಟಪಡಿಸಲಿ. ಬೀದಿ ವ್ಯಾಪಾರವನ್ನೇ ನಂಬಿಕೊಂಡು ವಿವಿಧ ಖಾಸಗಿ ಬ್ಯಾಂಕ್ ಗಳಲ್ಲಿ ಸಾಲ ಮಾಡಿಕೊಂಡು ನಮ್ಮ ಉಪಜೀವನ ನಡೆಸಿಕೊಂಡು ಹೋಗುತ್ತಿದ್ದೇವೆ.

ಕೊರೋನಾದಿಂದ ಹಲವಾರು ದಿನಗಳಿಂದ ಯಾವುದೇ ಉದ್ಯೋಗ ಮತ್ತು ಇಲ್ಲದೆ ಬೀದಿ ಬದಿ ವ್ಯಾಪಾರ ದಲ್ಲಿ ವಿವಿಧ ಉದ್ಯೋಗಗಳನ್ನು ಮಾಡಿಕೊಂಡಿರುವ ನಾವು ಪ್ರತಿನಿತ್ಯ ಪೋಲಿಸರು 92 ಕೇಸ್ ಗಳನ್ನು ಹಾಕುತ್ತಿದ್ದಾರೆ.

ನಾವು ನಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಉದ್ದೇಶದಿಂದ ಮತ್ತು ಹೊಟ್ಟೆಪಾಡಿಗಾಗಿ ನಾವು ನಿಯತ್ತಾಗಿ ದುಡಿದು ಬದುಕುತ್ತಿದ್ದೇವೆ. ಆದರೆ ಅದನ್ನು ಕಸಿದುಕೊಳ್ಳುವ ಕೆಲಸ ಕೆಲ ಅಧಿಕಾರಿಗಳಿಂದ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ನಮಗೆ ಯಾವುದೇ ತೊಂದರೆ ಆಗದ ರೀತಿ ನಮಗೆ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡುವ ದೃಷ್ಟಿಯಲ್ಲಿ ಸಹಕರಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಶಾಸಕರಿಗೆ,ಪುರಸಭೆ ಅಧ್ಯಕ್ಷರಿಗೆ, ಹಾಗೂ ತಹಶಿಲ್ದಾರರಿಗೆ ಮನವಿ ಮಾಡಿಕೊಂಡರು. ಸ್ಥಳದಲ್ಲಿ ಮನವಿಗೆ ಪ್ರತಿಕ್ರಿಯೆ ನೀಡಿದ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ,ಮಾತನಾಡಿ ಬೀದಿ ಬದಿ ವ್ಯಾಪಾರಸ್ಥರಿಗೆ ಯಾವದೇ ತೊಂದರೆ ಯಾಗದಂತೆ ಅಧಿಕಾರಿಗಳು ನಡೆದು ಕೊಳ್ಳಬೇಕು,ವ್ಯಾಪಾರಸ್ಥರು ಸ್ವಾವಂಬಿಯಾಗಿ ವ್ಯಾಪಾರ ವಹಿವಾಟು ಮಾಡುವ ವರಿಗೆ ವಿನಾಕಾರಣ ತೊಂದರೆ ಕೊಡಬಾರದು ಎಂದರು.ಪುರಸಭೆ ಅಧ್ಯಕ್ಷರಾದ ಜಿ.ಕೆ.ಹಿರೇಮಠ ಮಾತನಾಡಿ ಪುರಸಭೆಯಿಂದ ವ್ಯಾಪಾರ ಸ್ಥರಿಗೆ ಯಾವದೇ ಸಮಸ್ಯೆಯಾಗದ ರೀತಿ ನೋಡಿ ಕೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ರಾಘಣ್ಣ ಭಜಂತ್ರಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಬೀದಿಬದಿ ವ್ಯಾಪಾರಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ-ಆರ್ ಶರಣಪ್ಪ ಗುಮಗೇರಾ
ಕೊಪ್ಪಳ.


Leave a Reply