Belagavi

” ಬಯಲ ಬೆಳಕು ” ಕೃತಿ ಲೋಕಾರ್ಪಣೆ ಯುವ ಜನಾಂಗಕ್ಕೆ  ವಚನಕಾರರ  ವೈಚಾರಿಕ ವಿಚಾರಗಳನ್ನು  ತಿಳಿಸುವ  ಕಾರ್ಯವಾಗಬೇಕು ಡಾ. ಗುರುದೇವಿ  ಹುಲೆಪ್ಪನವರಮಠ


ಬೈಲಹೊಂಗಲ 2 – ಇಂದಿನ ಯುವಜನಾಂಗಕ್ಕೆ ಶರಣರ ವಚನಕಾರರ ವೈಚಾರಿಕ ವೈಜ್ಞಾನಿಕ ವಿಚಾರಗಳನ್ನು ತಿಳಿಸುವ ಕಾರ್ಯಗಳು ಆಗಬೇಕು ಪ್ರತಿಯೊಬ್ಬರು ವಚನಕಾರರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಾಹಿತಿ

ಡಾ. ಗುರುದೇವಿ  ಹುಲೆಪ್ಪನವರ ಮಠ ಹೇಳಿದರು.

ಪಟ್ಟಣದ ಪತ್ರಿ ಬಸವ ನಗರದಲ್ಲಿರುವ ಬಸವೇಶ್ವರ ಅನುಭವಮಂಟಪದಲ್ಲಿ ರವಿವಾರ  ಜರುಗಿದ ಶರಣೆ ಪ್ರೇಮಕ್ಕ ಅಂಗಡಿಯವರು ರಚಿಸಿದ “ಬಯಲ ಬೆಳಕು “ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ನಾಡಿನ ಎಲ್ಲ ಮಠಮಾನ್ಯಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧರ್ಮದರ್ಶನ ಕುರಿತು ಉಪನ್ಯಾಸ ನೀಡುವ ಧರ್ಮ ಪ್ರಚಾರಕ್ಕೆ ತಮ್ಮನ್ನು ಅರ್ಪಿಸಿಕೊಂಡ ಪ್ರೇಮಕ್ಕ ಅಂಗಡಿಯವರು ಪ್ರಥಮವಾಗಿ “ಬಯಲ ಬೆಳಕು “ಕೃತಿ

ರಚಿಸಿ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದು ಸಂತಸ ತಂದಿದೆ ಇವರಿಂದ  ಇನ್ನೂ  ಹಲವಾರು  ಕೃತಿಗಳು  ಪ್ರಕಟವಾಗಲಿ,  ಈ  ಗ್ರಂಥವು ಎಲ್ಲರೂ  ಅಧ್ಯಯನ  ಮಾಡಲು  ಯೋಗ್ಯವಾಗಿದೆ  ಎಂದರು.

ಬೆಳಗಾವಿ  ಲೇಖಕಿಯರ ಸಂಘದ ಅಧ್ಯಕ್ಷೆ  ಡಾ.  ಹೇಮಾ  ಸೊನೊಳ್ಳಿ  ಅವರು ಗಿಡಕ್ಕೆ ನೀರು ಹಾಕಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರವಚನ ಗಾರ್ತಿ ಆಗಿರುವ ಪ್ರೇಮಕ್ಕ ಅವರು ಬೇರೆ ಬೇರೆ ಕಡೆ ಶರಣರ ವಚನ ಸಾಹಿತ್ಯದ ಕುರಿತು ನೀಡಿದ ಪ್ರವಚನಗಳ ಸಾರವನ್ನು ಗ್ರಂಥದ ರೂಪದಲ್ಲಿ ಸಂಕಲಿಸಿ  ಕೊಟ್ಟಿದ್ದಾರೆ ಇದು ಮುಂದಿನ ಜನಾಂಗಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಯಾಗಿದೆ ಈ ಪುಸ್ತಕವನ್ನು ಎಲ್ಲರೂ ಕೊಂಡು ಓದಬೇಕೆಂದು ನುಡಿದರು.

ಪುಸ್ತಕವನ್ನು ಪರಿಚಯಿಸಿದ ಸ್ನಾತಕೋತ್ತರ ಕೇಂದ್ರದ ಕನ್ನಡ ಪ್ರಾಧ್ಯಾಪಕ  ಫಕೀರನಾಯ್ಕ ಗದ್ದಿಗೌಡರ ಮಾತನಾಡಿ ಶರಣರು ರೂಪಿಸಿದ ತತ್ವಗಳನ್ನು ಅನುಷ್ಠಾನಗೊಳಿಸಿದ ರೀತಿಯನ್ನು ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತೆ ಲೇಖಕಿ ಪ್ರಸ್ತಾಪಿಸಿದ್ದಾರೆ ಎಂದರು. ಸಮಾಜಸೇವಕಿ ಲೇಖಕಿ ಜ್ಯೋತಿ  ಬಾದಾಮಿ ಮಾತನಾಡಿ ಪ್ರೇಮಕ್ಕ ವರು ಸಂಘಜೀವಿ ಅನೇಕ ಸಂಘ-ಸಂಸ್ಥೆಗಳು ಕಟ್ಟಿ ಧಾರ್ಮಿಕ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಕಾರ್ಯವನ್ನು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ  ಜಿಲ್ಲಾ  ಕ  ಸಾ  ಪ ಅಧ್ಯಕ್ಷೆ  ಮಂಗಲಾ  ಮೆಟಗುಡ್ಡ  ಮಾತನಾಡಿ  ಪ್ರೇಮಕ್ಕ  ಅಂಗಡಿಯವರು ಜಿಲ್ಲೆಯ ದೊಡ್ಡ ಆಸ್ತಿ ಒಳ್ಳೆಯ ಪ್ರವಚನಕಾರರಾಗಿ ಲೇಖಕಿಯಾಗಿ ಕನ್ನಡ ಸಾಹಿತ್ಯಕ್ಕೆ ನೀಡುತ್ತಿರುವ ಕೊಡುಗೆ ಅಭಿನಂದನಾರ್ಹ ಎಂದರು.

ಸಮಾರಂಭ ಸಾನ್ನಿಧ್ಯ ವಹಿಸಿದ್ದ ಮುರಗೋಡದ ಪೂ ಶ್ರೀ ನೀಲಕಂಠ ಮಹಾಸ್ವಾಮಿಗಳವರು

ಪತ್ರಿಬಸವೇಶ್ವರ ಅನುಭವಮಂಟಪದಲ್ಲಿ ಮಹಾದಾಸೋಹಿ ನೀಲಮ್ಮ ಪ್ರಸಾದವನ್ನು ಉದ್ಘಾಟಿಸಿ ಮಾತನಾಡಿ ಪ್ರೇಮಕ್ಕ  ಅವರು ಭಕ್ತಿವಂತೆ,, ಗುರು  ಲಿಂಗ  ಜಂಗಮದಲ್ಲಿ  ಅಪಾರ  ಗೌರವ  ಹೊಂದಿದ  ಅವರು  ರಚಿಸಿದ ” ಬಯಲ ಬೆಳಕು ” ಮೌಖಿಕ ಕೃತಿಯಾಗಿದ್ದು  ಶರಣರ  ಜೀವನ  ಸಾಧನೆ  ಪರಿಚಯಿಸಿದ ಗ್ರಂಥವಾಗಿದೆ ಎಂದರು.

ಪುಂಡಲೀಕ ಕಟಕೊಳ, ದುಂಡಯ್ಯ  ಕುಲಕರ್ಣಿ, ಎ  ಎಸ್  ಐ  ಅಶೋಕ  ಸಾಲಿ, ಮಹಾದೇವ  ಕರಡಿಗುದ್ದಿ,  ಪ್ರಕಾಶ  ಅರಳಿಕಟ್ಟಿ,  ಚನ್ನಪ್ಪ  ನರಸನ್ನವರ,  ಶಿವಾನಂದ ಅರಬಾವಿ,  ಚಂದ್ರಣ್ಣ  ಕೊಪ್ಪ,  ನಾಗನಗೌಡ  ಪಾಟೀಲ, ಮಹಾಂತೇಶ ಅಕ್ಕಿ, ಭಾರತಿ  ಕಟ್ಟಿಶೆಟ್ಟಿ  ಸೇರಿದಂತೆ  ಅನೇಕರು  ಕಾರ್ಯಕ್ರಮದಲ್ಲಿ  ಇದ್ದರು. ಈ  ಸಂದರ್ಭದಲ್ಲಿ  ಕೇಂದ್ರ  ಬಸವ  ಸಮಿತಿಗೆ  ಆಯ್ಕೆಯಾಗಿರುವ   ಮೋಹನ  ಬ ಪಾಟೀಲ  ಅವರನ್ನು  ಸನ್ಮಾನಿಸಲಾಯಿತು.

ಶ್ರೀಶೈಲ  ಗದಗ ಪ್ರಾರ್ಥಿಸಿದರು, ಗೌರಾದೇವಿ  ತಾಳಿಕೋಟಿ ಮಠ  ಸ್ವಾಗತಿಸಿದರು. ಅನ್ನಪೂರ್ಣ  ಕನೋಜ ವಂದಿಸಿದರು, ಕುಸುಮಾ  ಗದಗ  ನಿರೊಪಿಸಿದರು.


Leave a Reply