Belagavi

ಇ-ಕೆವೈಸಿ ನೀಡಲು ಸೂಚನೆ


ಮೂಡಲಗಿ: ತಾಲೂಕಿನ ಎಲ್ಲ ಅಂತ್ಯೋದಯ ಹಾಗೂ ಬಿಪಿಎಲ್, ಎಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಎಲ್ಲ ಸದಸ್ಯರು ಆ.೧ರಿಂದ ಆ.೧೦ರ ರೊಳಗಾಗಿ ತಮಗೆ ಸಂಬAಧಿಸಿದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ. ಒಂದು ಬಾರಿ ಇ-ಕೆವೈಸಿ ನೀಡಲು ಮೂಡಲಗಿ ತಹಶೀಲ್ದಾರ ಡಿ.ಜಿ.ಮಹಾತ ತಿಳಿಸಿದ್ದಾರೆ.
ಸರ್ಕಾರವು ಇ-ಕೆವೈಸಿ ನೀಡಲು ಈ ಬಾರಿ ಕೊನೆಯ ಅವಕಾಶ ನೀಡಿದ್ದರಿಂದ ಒಂದು ವೇಳೆ ಈ ಅವಧಿಯಲ್ಲಿ ಇ-ಕೆವೈಸಿ ನೀಡದಿದ್ದಲ್ಲಿ, ಪಡಿತರ ಚೀಟಿಯಿಂದ ಅಂತಹ ಸದಸ್ಯರುಗಳ ಹೆಸರು ಕಡಿಮೆಯಾಗಿ ಪಡಿತರ ಪದಾರ್ಥ ಬಾರದೆ ಇದ್ದಲ್ಲಿ ನೇರವಾಗಿ ಪಡಿತರ ಚೀಟಿದಾರರೇ ಜವಾಬ್ದಾರಾಗಿರುತ್ತಾರೆ. ಇ-ಕೆವೈಸಿ ಸೇವೆಯು ಉಚಿತ ಸೇವೆಯಾಗಿದ್ದು, ಇದಕ್ಕಾಗಿ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿ ಸಂಚಾಲಕರಿಗೆ ಯಾವುದೇ ಹಣ ನೀಡುವ ಅವಶ್ಯಕತೆ ಇಲ್ಲ. ಒಂದು ವೇಳೆ ಈ ಬಗ್ಗೆ ಯಾವುದೇ ದೂರುಗಳಿದ್ದಲ್ಲಿ ತಹಶೀಲ್ದಾರ ಅಥವಾ ಆಹಾರ ಶಿರಸ್ತೇದಾರ, ಆಹಾರ ನಿರೀಕ್ಷಕರಿಗೆ ದೂರು ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply