Belagavi

ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಅಭಿನಂದಿಸಿದ ಡಾ.ಅಶೋಕ ದಳವಾಯಿ


ಮೂಡಲಗಿ: ಭಾರತ ಸರಕಾರದ ಪ್ರತಿಷ್ಠಿತ ರಾಷ್ಟಿçÃಯ ರೈತ ಆದಾಯ ದ್ವಿಗುಣ ಸಮಿತಿ ಚೇರಮನ್ನರಾದ ಕೌಜಲಗಿಯ ಡಾ.ಅಶೋಕ ಎಂ. ದಳವಾಯಿಯವರು ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರನ್ನು ನವದಿಲ್ಲಿಯಲ್ಲಿ ಭೇಟಿಯಾಗಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಬೊಮ್ಮಾಯಿಯವರು ಕೇಂದ್ರ ಸರಕಾರದ ರೈತಪರ ಯೋಜನೆಗಳಿಂದ ಭಾರತವು ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಿದರೂ ರೈತರಿಗೆ ಇನ್ನೂ ಹೆಚ್ಚಿನ ಪ್ರಯೋಜನಗಳು ದೊರೆಯಬೇಕಾಗಿದೆ, ರೈತ ಆದಾಯ ದ್ವಿಗುಣ ಮಾಡುವ ನಿಟ್ಟಿನಲ್ಲಿ ರೈತ ಕಲ್ಯಾಣಕ್ಕಾಗಿ ನಾವು ಯಾವ ರೀತಿ ಕಾರ್ಯಗಳನ್ನು ಹಾಕಿಕೊಳ್ಳಬೇಕೆಂಬುದನ್ನು ಚರ್ಚಿಸಿದರು. ಈ ಸಮಯದಲ್ಲಿ ರೈತ ಮುಖಂಡ ಕುರುಬುರ ಶಾಂತಕುಮಾರ ಮತ್ತಿತರು ಇದ್ದರು.


Leave a Reply