vijayapur

ಅ.೪ ರಂದು ವಿಜಯಪುರ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ


ವಿಜಯಪುರ : ಆ.೩ : ನಗರದ ೧೧೦ ಕೆ.ವ್ಹಿ ಸಿಟಿ ವಿದ್ಯುತ್ ವಿತರಣಾ ಕೇಂದ್ರದ ಮೇಲೆ ಈ ಕೆಳಕಾಣಿಸಿದ ಫೀಡರ್‌ಗಳ ಮೇಲೆ ಆರ್.ಟಿ.ಓ. ಆಫೀಸ್ ಆವರಣದಲ್ಲಿ ತುರ್ತು ಕಾಮಗಾರಿ ಇರುವ ಪ್ರಯುಕ್ತ ದಿನಾಂಕ: ೦೪.೦೮.೨೦೨೧ ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೨.೦೦ ಗಂಟೆಯವರೆಗೆ ವಿಜಯಪುರ ನಗರದ ೧೧೦ ಕೆ.ವ್ಹಿ ವಿದ್ಯುತ್ ವಿತರಣಾ ಕೇಂದ್ರದಿAದ ಹೊರಡುವ ಈ ಕೆಳಗೆ ನಮೂದಿಸಿದ ೧೧ ಕೆ.ವ್ಹಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಆಗುವುದು.
ನಗರದ ೧೧ ಕೆ.ವ್ಹಿ ಸಿದ್ದೇಶ್ವರ ಪೀಡರ್‌ನ ಶಹಾ ಅಲಿಹೇಸೇನ ಕಾಲೋನಿ, ಇಬ್ರಾಹಿಂ ರೋಜಾ, ಸೆಟ್ ಲೈಟ್ ಬಸ್ ನಿಲ್ದಾಣ, ಹಳೆ ಕುಂಬಾರ ಗಲಗಲಿ , ನೆಹರು ನಗರ, ಗಂಗಾ ಪೂರಮ ಕಾಲೋನಿ, ಮಾನಸ ರೆಸಿಡೆನ್ಸಿ, ಸೆಂಟ್ರಲ್ ಜೈಲ್, ಅಮೀನ ದರ್ಗಾ, ಹಾಗೂ ಇನ್ನಿತರ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಅದರಂತೆ ೧೧ ಕೆ.ವ್ಹಿ ವಿಜಯ ಕಾಲೇಜ್ ಪೀಡರ್. ಹಳೇ ಸರಕಾರಿ ಆಸ್ಪತ್ರೆ, ಶಿವಾಜಿ ಸರ್ಕಲ್, ಡೋಬಳೆ ಗಲ್ಲಿ, ಉಪಲಿಬುರಜ, ಸರಾಫ್ ಬಜಾರ, ಚಂದಾ ಬಾವಡಿ, ಮಠಪತಿ ಗಲ್ಲಿ, ಸಿದ್ದೇಶ್ವರ ದೇವಸ್ಥಾನ ಹಾಗೂ ಇನ್ನಿತರ ಬಡಾವಣೆಗಳು, ೧೧ಕೆ.ವ್ಹಿ ಚಾಲುಕ್ಯ ನಗರ ಪೀಡರ್. ಅರಿಹಂತ ಕಾಲೋನಿ, ಲಿಂಗದ ರೋಡ, ಮಹಾವೀರ ಕಾಲೋನಿ, ಚಾಲುಕ್ಯ ನಗರ ಹಾಗೂ ಇನ್ನಿತರ ಬಡಾವಣೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.
೧೧ ಕೆ.ವ್ಹಿ ವಾಟರ್ ಟ್ಯಾಂಕ್ ಪೀಡರ್. ೧೧ ಕೆ.ವ್ಹಿ ಮೀನಾಕ್ಷಿ ಪೀಡರ್. ೧೧ ಕೆ.ವ್ಹಿ ಮಹಾತ್ಮಾ ಗಾಂಧಿ ಪೀಡರ್‌ಗಳ ರಾಜಾಜಿ ನಗರ, ಮುಜಾವರ ಗಲ್ಲಿ , ಅಡಕಿ ಗಲ್ಲಿ, ಬಬಲೇಶ್ವರ ನಾಕಾ, ಪೋಲಿಸ್ ಹೆಡ್ ಕ್ವಾಟರ್ಸ, ಕಾಲಾಲ್ ಗಲ್ಲಿ, ಶಾಫುರ ಅಗಶಿ, ಬೇಂದ್ರೆಕರ್ ಚಾಳ, ಕುಂಬಾರ ಗಲಗಲಿ, ನಿಸಾರ ಮಡ್ಡಿ, ಹವೇಲಿ ಗಲ್ಲಿ, ಹಮೀದ ನಗರ, ಕೇಂದ್ರ ಬಸ್ ನಿಲ್ದಾಣ, ಖಾಜಾ ನಗರ, ಗಾಂಧಿ ಚೌಕ, ಗೊಡಬೋಳೆ ಮಾಲಾ, ಹಾಗೂ ಇನ್ನಿತರ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಈ ಎಲ್ಲ ೧೧ ಕೆ.ವ್ಹಿ ಪೀಡರಗಳ ಮೇಲೆ ಬರುವ ಬಡಾವಣೆಗಳಿಗೆ ಮುಂಜಾನೆ ೧೦.೦೦ ಗಂಟೆಯಿAದ ಮಧ್ಯಾಹ್ನ ೨.೦೦ ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಆಗುವುದು. ಆದ್ದರಿಂದ ಗ್ರಾಹಕರು ಮತ್ತು ಸಾರ್ವಜನಿಕರು ಹೆಸ್ಕಾಂ ಜೊತೆ ಸಹಕರಿಸಬೇಕೆಂದು ವಿಜಯಪುರ, ಹು.ವಿ.ಸ.ಕಂ.ನಿ. ಕಾರ್ಯ ಮತ್ತು ಪಾಲನಾ ವಿಭಾಗ, ಕಾರ್ಯನಿರ್ವಾಹಕ ಅಭಿಯಂತರು (ವಿ), ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.


Leave a Reply