Belagavi

ಶಾಸಕ ಅನಿಲ ಬೆನಕೆ ಅವರಿಂದ ಸ್ಮಾರ್ಟ ಸಿಟಿ ಪ್ರಗತಿ ಪರಿಶೀಲನೆ ಸಭೆ


ಬೆಳಗಾವಿ,: ದಿ ೦೨ ರಂದು ನಗರದ ಸ್ಮಾರ್ಟ ಸಿಟಿ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಲಾಯಿತು. ಸಭೆಯಲ್ಲಿ ಪ್ರಮುಖವಾಗಿ ಪ್ರಗತಿಯಲ್ಲಿರುವ ಕಾಮಗಾರಿಗಳ ಬಗ್ಗೆ ಚರ್ಚಿಸಿ ನಿಗದಿ ಪಡಿಸಿದ ವೇಳೆ ಒಳಗೆ ಕಾಮಗಾರಿ ಪೂರ್ಣಗೊಳ್ಳಬೇಕು ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಅನಿಕೆ ಬೆನಕೆ ತಿಳಿಸಿದರು.
ಜನರ ದೂರುಗಳ ಪ್ರಕಾರ ನಗರದಲ್ಲಿರುವ ಬೀದಿ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲಾ ಸ್ಮಾರ್ಟ ಸಿಟಿಯಿಂದ ಅಳವಡಿಕೆಗೊಂಡ ಆರ.ಓ ಶುಧ್ಧ ಕುಡುಯುವ ನೀರಿನ ಘಟಕಗಳ ನಿರ್ವಹನೆ ಸರಿಯಾಗಿ ಆಗುತ್ತಿಲ್ಲಾ ಆದ್ದರಿಂದ ಸಂಬAಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕು ಎಂದು ಸುಚಿಸಿದರು.
ನಗರದ ಉಧ್ಯಾನವನಗಳ ಅಭಿವೃದ್ಧಿ, ಮುಖ್ಯ ವೃತ್ತಗಳ ಅಭಿವೃದ್ಧಿ, ಸೈನಿಕ ಪಾರ್ಕ, ಸಾಯನ್ಸ ಪಾರ್ಕ, ಅನುಭವ ಮಂಟಪ, ಆರ್ಟ ಗ್ಯಾಲರಿಗಳ ಅನುಷ್ಠಾನದ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಸ್ಮಾರ್ಟ ಸಿಟಿ ವ್ಯವಸ್ಥಾಪಕರಾದ ಪ್ರವೀನ ಬಾಗೆವಾಡಿ, ಕಾರ್ಯನಿರ್ವಾಹಕ ಇಂಜಿನಿಯರ ಶ್ರೀ. ಪಿ.ಎಮ.ಪಾಟೀಲ. ಶ್ರೀ. ಕಮಟೆ ಸೆರಿದಂತೆ ಸ್ಮಾರ್ಟ ಸಿಟಿ ಅಧೀಕಾರಿಗಳು ಉಪಸ್ಥಿತರಿದ್ದರು.


Leave a Reply