Belagavi

“ಸಖಿ” ಒನ್ ಸ್ಟಾಪ್ ಕೇಂದ್ರ : ಆಕ್ಷೇಪಣೆ ಸಲ್ಲಿಸಲು ಆ.೧೮ ಕೊನೆಯ ದಿನಾಂಕ


ಬೆಳಗಾವಿ, ಆ.೦೩ : “ಸಖಿ” ಒನ್ ಸ್ಟಾಪ್ ಕೇಂದ್ರದ ಸಿಬ್ಬಂದಿ ಆಯ್ಕೆ ಕುರಿತು ಅಭ್ಯರ್ಥಿಗಳ ಪಟ್ಟಿಗೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ..
“ಸಖಿ” ಒನ್ ಸ್ಟಾಪ್ ಕೇಂದ್ರದಲ್ಲಿ ಸಿಬ್ಬಂದಿ ಆಯ್ಕೆ ಕುರಿತಂತೆ ೮ ವಿವಿಧ ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳನ್ನು ನೇರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಿ ಪ್ರಕಟಣೆ ಹೊರಡಿಸಲಾಗಿತ್ತು. ಅವುಗಳಲ್ಲಿ ಮಲ್ಟಿಪರ್ಪಸ್ ಕ್ಲೀನರ್/ಸೆಕ್ಯೂರಿಟಿ ಎರಡು ಹುದ್ದೆಗಳನ್ನು ಹೊರಡುಪಡಿಸಿ ಇನ್ನುಳಿದ ೬ ಹುದ್ದೆಗಳಿಗೆ ಸ್ವೀಕರಿಸಲಾದ ಅರ್ಜಿ ಹಾಗೂ ಅರ್ಜಿಯೊಂದಿಗೆ ಲಗತ್ತಿಸಿರುವ ದಾಖಲಾತಿಗಳನ್ನು ನಿಯಮಾನುಸಾರ ಪರಿಶೀಲಿಸಿ ಅರ್ಹ ಮತ್ತು ಅನರ್ಹವೆಂದು ವಿಭಾಗಿಸಿ ಉಪನಿರ್ದೇಶಕರ ಕಚೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಶಿವಾಜಿ ನಗರ ಬೆಳಗಾವಿ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
ಈ ಪಟ್ಟಿಗೆ ಸಂಬAಧಿಸಿದAತೆ ಯಾವುದೇ ರೀತಿಯ ಆಕ್ಷೇಪಣೆಗಳು ಇದ್ದಲ್ಲಿ ಅರ್ಜಿ ಸಲ್ಲಿಸುವಾಗ ಅರ್ಜಿಯೊಂದಿಗೆ ಲಗತ್ತಿಸಿದ ಸೂಕ್ತ ದಾಖಲಾತಿಗಳನ್ನು ಸಲ್ಲಿಸಿದ ಅನುಸಾರವಾಗಿ ಮಾತ್ರ ಪರಿಗಣಿಸಲಾಗುವುದು. ಯಾವುದೇ ಹೊಸ ದಾಖಲಾತಿಗಳನ್ನು ಸಲ್ಲಿಸದೇ ಇರುವ ಷರತ್ತಿಗೊಳಪಟ್ಟು ಲಿಖಿತ ಆಕ್ಷೇಪಣೆಯನ್ನು ಆಗಸ್ಟ್ ೧೮ ರ ಒಳಗಾಗಿ ಕಚೇರಿ ಸಮಯದಲ್ಲಿ ಉಪನಿರ್ದೇಶಕರ ಕಚೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ ಇಲ್ಲಿಗೆ ಸಲ್ಲಿಸಲು ತಿಳಿಸಲಾಗಿದೆ. ಅವಧಿ ಮೀರಿ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜ ವರವಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply