Belagavi

ಮಹಿಳೆಯರ ಸ್ವಯಂ ಉದ್ಯೋಗಕ್ಕೆ ಅರ್ಜಿ ಆಹ್ವಾನ


ಬೆಳಗಾವಿ, ಆ.೦೩ : ಬೆಳಗಾವಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದಿಂದ ೨೦೨೧-೨೨ ನೇ ಸಾಲಿನ “ಉದ್ಯೊಗಿನಿ” ಯೋಜನೆಯಡಿ ೧೮-೫೫ ವಯೋಮಿತಿಯ ಇತರೆ ಕುಟುಂಬ ವರ್ಗದ ವಾರ್ಷಿಕ ಆದಾಯವು ರೂ.೧.೫೦ ಲಕ್ಷ ಹಾಗೂ ಎಸ್.ಸಿ/ಎಸ್.ಟಿ ವರ್ಗದವರ ರೂ.೨ ಲಕ್ಷಕ್ಕಿಂತ ಮೀರದ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಘಟಕ ವೆಚ್ಚ ಕನಿಷ್ಠ ರೂ.೧ ಲಕ್ಷ ಮತ್ತು ಗರಿಷ್ಠ ರೂ.೩ ಲಕ್ಷವಿದ್ದು, ಇತರೆ ವರ್ಗದ ಘಟಕ ವೆಚ್ಚದ ಪ್ರತಿಶತ ೩೦ ರಷ್ಟು, ಗರಿಷ್ಠ ರೂ.೯೦,೦೦೦ ಹಾಗೂ ಎಸ್.ಸಿ, ಎಸ್.ಟಿ ವರ್ಗದವರಿಗೆ ಪ್ರತಿಶತ ೫೦ ರಷ್ಟು ಗರಿಷ್ಠ ರೂ.೧,೫೦,೦೦೦ ನಿಗಮದಿಂದ ಸಹಾಯಧನ ಮತ್ತು ಬ್ಯಾಂಕ್ ಮುಲಕ ಸಾಲ ಒದಗಿಸಲಾಗುವುದು ಎಂದು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಬಸವರಾಜ ವರವಟ್ಟಿ ತಿಳಿಸಿದ್ದಾರೆ.
ಆಸಕ್ತ ಮಹಿಳೆಯರು ತಮ್ಮ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಿಂದ ಅರ್ಜಿಗಳನ್ನು ಪಡೆದು ಅಗಸ್ಟ ೨೧ ರ ಒಳಗಾಗಿ ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಸಂಬAಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು, ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಸಾಲ ಪಡೆಯಲು ಇರಬೇಕಾದ ಅರ್ಹತೆಗಳು:
ಅರ್ಜಿದಾರಳು ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು, ೧೮-೫೫ ವರ್ಷದೊಳಗಿರಬೇಕು, ರಾಷ್ಟಿöçÃಕೃತ ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಚಾಲ್ತಿಯಲ್ಲಿರಬೇಕು.
ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಸಲ್ಲಿಸುವುದು, ಯೋಜನಾ ವರದಿ, ಆಯ್ಕೆಯಾದ ಫಲಾನುಭವಿಗಳಿಗೆ ಇ.ಡಿ.ಪಿ ತರಬೇತಿ ಪಡೆದು ಬ್ಯಾಂಕಿನಿAದ ಸಾಲ ಮಂಜೂರಾತಿ ನಂತರ ಫಲಾನುಭವಿಗಳಿಗೆ ಸಹಾಯಧನ ಮಂಜೂರು ಮಾಡಲಾಗುವುದು.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:
ಜಾತಿ ಪ್ರಮಾಣ ಪತ್ರ ದೃಢಿಕರಿಸಿದ, ಕುಟುಂಬ ವಾರ್ಷಿಕ ಆದಾಯ ಪ್ರಮಾಣಪತ್ರ, ವಿಳಾಸದ ದೃಢೀಕರಣ ದಾಖಲೆಗಳು, ಯೋಜನಾ ವರದಿ, ತರಬೇತಿ ಅಥವಾ ಅನುಭವ ಪತ್ರ, ೩ ಭಾವಚಿತ್ರ, ದ್ವಿ ಪ್ರತಿಯಲ್ಲಿ ಭರ್ತಿ ಮಾಡಿದ ಅರ್ಜಿ, ಸ್ತಿöçà ಶಕ್ತಿ ಸಂಘದ ನಡುವಳಿಕೆಗಳ ಪ್ರತಿ ಗುಂಪು ಸಾಲಕ್ಕೆ ಮಾತ್ರ, ರಾಷ್ಟಿöçÃಕೃತ ಬ್ಯಾಂಕಿನಲ್ಲಿ ತೆರೆಯಲಾದ ಬ್ಯಾಂಕ್ ಖಾತೆಯ ಪುಸ್ತಕದ ನಕಲು ಪ್ರತಿ ಮತ್ತು ಬ್ಯಾಂಕಿನ ಹೆಸರು ಐ.ಎಫ್‌ಎಸ್.ಸಿ ಕೋಡ್ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಬಸವರಾಜ ವರವಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply