Belagavi

ನಿಂಗ್ಯಾನಟ್ಟಿ:ಶೈಕ್ಷಣಿಕ ಸಾಮಗ್ರಿಗಳ ವಿತರಣೆ


 

ಬೆಳಗಾವಿ ದಿ 4:–ರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಿಂಗ್ಯಾನಟ್ಟಿ ಯಲ್ಲಿಂದು ಶಾಲೆಯ ವಿದ್ಯಾರ್ಥಿಗಳ ಪಾಲಕರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮುಂಬಯಿಯ ಟಚ್ ಪೌಂಡೇಶನ್ ವತಿಯಿಂದ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು

ಶಾಲಾ ಮುಖ್ಯೋಪಾಧ್ಯಾಯರಾದ ಬಸವರಾಜ ಸುಣಗಾರ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಕಲ್ಲಪ್ಪ ಪಾಮನಾಯಕರವರ ಮುಂದಾಳತ್ವದಲ್ಲಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ೧೦೮ ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲ ವಾಗುವ ನೋಟಬುಕ್ ಪೆನ್ನು ಸೇರಿದಂತೆ ಸಾಮಗ್ರಿಗಳನ್ನು ಹಾಗೂ

ಕರೋನಾ ರೋಗಾಣುಗಳ ನಿವಾರಣೆಗೆ ಮಕ್ಕಳಲ್ಲಿ ಆರೋಗ್ಯ ಸ್ಥಿತಿ ಸುಧಾರಣೆಗೆ ಪೌಷ್ಟಿಕಾಂಶ ಸಿಗುವ ಬೂಸ್ಟಗಳು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಎರಡು ಡಬ್ಬಿಗಳು

(ಆರೋಗ್ಯ ವಧ೯ಕ ಪುಡಿ) ಹಾಗೂ ಮೂರು ಸಾಬೂನು ಗಳನ್ನು ವಿತರಿಸಲಾಯಿತು

ಶಾಲೆಯ ಸವ೯ರಿಗೂ ಉಪಯುಕ್ತ ಸಾಮಗ್ರಿಗಳನ್ನು ವಿತರಿಸಿದ ಟಚ್ ಪೌಂಡೇಶನ್ ನವರಿಗೆ ಮುಖ್ಯೋಪಾಧ್ಯಾಯರಾದ ಬಸವರಾಜ ಸುಣಗಾರ ರವರು ಧನ್ಯವಾದಗಳನ್ನು ಅಪಿ೯ಸಿದರು,

ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ಮಾರುತಿ ಮಗದುಮ್ಮ, ಸದಸ್ಯರಾದ ಬಸವರಾಜ ತಳವಾರ, ಸತ್ಯಪ್ಪ ನಾಯಕ ಸೇರಿದಂತೆ ಮಹೇಶ ಪೌಂಡೇಶನ್ ದ ಪ್ರತಿನಿಧಿ ಸೂರಜ್ ಮಾಲಾಯಿ,ಶಾಲಾ ಸಹ ಶಿಕ್ಷಕಿಯರು, ಪಾಲಕರು ಉಪಸ್ಥಿತರಿದ್ದರು

ನಗರದ ಮಹೇಶ್ ಪೌಂಡೇಶನ್ ದ ಸಹಕಾರ ದಿಂದ ಈ ವಿತರಣೆ ಜರುಗಿತು


Leave a Reply