Belagavi

ಕಾರ್ಮಿಕ ಅಧಿಕಾರಿಗಳ ದಾಳಿ: ಬಾಲಕಾರ್ಮಿಕರ ರಕ್ಷಣೆ


ಬೆಳಗಾವಿ, ಆ.೦೪ : ಜಿಲ್ಲಾಧಿಕಾರಿಗಳು, ಬೆಳಗಾವಿ ಇವರ ನಿರ್ದೇಶನದಂತೆ ಕಾರ್ಮಿಕ ಅಧಿಕಾರಿಗಳು ತಂಡದೊAದಿಗೆ ಬೆಳಗಾವಿ ನಗರದಲ್ಲಿ ಹಠಾತ್ ಬಾಲಕಾರ್ಮಿಕ ದಾಳಿಗಳನ್ನು ಕೈಗೊಂಡಿದ್ದು, ಸದರಿ ಬಾಲಕಾರ್ಮಿಕರನ್ನು ಕೆಲಸದಿಂದ ಮುಕ್ತಿಗೊಳಿಸಿ, ಸದರಿ ಮಾಲೀಕರಿಗೆ ಸ್ಥಳದಲ್ಲಿಯೇ ನೋಟೀಸ್ ಜಾರಿಮಾಡಲಾಯಿತು.
ಸದರಿ ದಾಳಿ ಸಮಯದಲ್ಲಿ ಸ್ವಸ್ತಿಕ್ ಎಲೆಕ್ಟಿçಕಲ್ಸ್, ಕಲ್ಮಠ್ ರೋಡ, ಬೆಳಗಾವಿ, ಸಂತೋಷ ಅಗರಬತ್ತಿ ಏಜೆನ್ಸಿ, ಕಲ್ಮಠ್ ರೋಡ, ಬೆಳಗಾವಿ, ಹೊಟೇಲ್ ಗುರುದರ್ಶಿನಿ, ಭಾಗ್ಯ ನಗರ ಕ್ರಾಸ್, ಬೆಳಗಾವಿ, ಈ ಸಂಸ್ಥೆಗಳಲ್ಲಿ ಮೂರು ಬಾಲ ಕಾರ್ಮಿಕರು ಕೆಲಸ ಮಾಡುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ.
ಬಾಲಕಾರ್ಮಿಕರು ಮತ್ತು ಕಿಶೋರಾವಸ್ಥೆ ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಬಾಲಕಾರ್ಮಿಕರನ್ನು & ಕಿಶೋರಾವಸ್ಥೆಯ ಕಾರ್ಮಿಕರನ್ನು ನಿಬಂಧನೆಗಳಿಗೆ ವಿರುದ್ಧವಾಗಿ ನೇಮಿಸಿಕೊಂಡಲ್ಲಿ ೬ ತಿಂಗಳಿಗೆ ಕಡಿಮೆ ಇಲ್ಲದಂತೆ ಮತ್ತು ೨ ವರ್ಷಗಳಿಗೆ ವಿಸ್ತರಿಸಬಹುದಾದ ಕಾರಾಗೃಹ ಶಿಕ್ಷೆ ಅಥವಾ ರೂ. ೨೦,೦೦೦.೦೦ ಗಳಿಗಿಂತ ಕಡಿಮೆ ಇರದ ಹಾಗೂ ರೂ. ೫೦,೦೦೦.೦೦ ಗಳವರೆಗೆ ವಿಸ್ತರಿಸಬಹುದಾದ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿರುತ್ತದೆ ಎಂದು ಬೆಳಗಾವಿ ಪ್ರಾದೇಶಿಕ, ಉಪ ಕಾರ್ಮಿಕ ಆಯುಕ್ತರು ವೆಂಕಟೇಶ ಅಪ್ಪಯ್ಯ ಶಿಂದಿಹಟ್ಟಿ. ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Leave a Reply