vijayapur

ಡಾ|| ಶರಣಪ್ಪ. ಕಟ್ಟಿಯವರಿಗೆ ಬಿಳ್ಕೋಡುವ ಸಮಾರಂಭ


ವಿಜಯಪುರ: ಡಾ|| ಶರಣಪ್ಪ. ಕಟ್ಟಿ ರವರು ಸರಳ ಸಜ್ಜನಿಕೆಯ ಅಧಿಕಾರಿಯಾಗಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಿದ್ದಾರೆ ಎಂದು ನೂತನ ಜಿಲ್ಲಾ ಶಸ್ತçಚಿಕಿತ್ಸಕರಾಗಿ ಡಾ|| ಎಸ್. ಎಲ್. ಲಕ್ಕಣ್ಣವರ ಅವರು ಹೆಳಿದರು.
ಅವರು ಜಿಲ್ಲಾ ಆಸ್ಪತ್ರೆಯ ಸಾಮಾನ್ಯ ನರ್ಸಿಂಗ್ ಶಾಲೆಯ ಸಭಾಂಗಣದಲ್ಲಿ ಜಿಲ್ಲಾ ಆಸ್ಪತ್ರೆ ನೌಕರರ ಕ್ಷೇಮಾಭಿವೃದ್ದಿ ಸಂಘ, ಜಿಲ್ಲಾ ಶುಶ್ರೂಷಾ ಅಧಿಕಾರಿಗಳ ಸಂಘ, ಆರೋಗ್ಯ ಇಲಾಖೆಯ ಎಸ್.ಸಿ/ಎಸ್.ಟಿ ಸಂಘ, ಬಿ.ಎಸ್.ಸಿ ನರ್ಸಿಂಗ್ ಕಾಲೇಜ್ ಜಿ.ಎನ್.ಎಮ್ ಶಾಲೆ ಹಾಗೂ “ಡ” ವರ್ಗದ ನೌಕರರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ|| ಶರಣಪ್ಪ. ಕಟ್ಟಿ ಇವರ ವಯೋ ನೊವೃತ್ತಿ ಬಿಳ್ಕೋಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ|| ಕಟ್ಟಿ ಅವರಿಗೆ ವಯಕ್ತಿಕ ಜೀವನದಲ್ಲಿ ಕೆಲವು ದುರ್ಘಟನೆಗಳು ಸಂಭವಿಸಿದರು ಎದೆ ಗುಂದದೆ ಜಿಲ್ಲಾ ಆಸ್ಪತ್ರೆಗೆ ಅತ್ಯುತ್ತಮ ಸೇವೆ ನೀಡಿರುವದು ಸ್ಮರಣೀಯವಾದದ್ದು ಎಂದು ಡಾ|| ಎಸ್. ಎಲ್. ಲಕ್ಕಣ್ಣವರ ಹೆಳಿದರು.
ಮುಖ್ಯ ಅಥಿತಿಗಳಾಗಿ ಮಾತನಾಡಿದ ಡಿ.ಹೆಚ್.ಓ ಡಾ|| ರಾಜಕುಮಾರ. ಎರಗಲ್ ಕೋವಿಡ್ ಸಂದರ್ಭದಲ್ಲಿ ಡಾ|| ಕಟ್ಟಿ ಅವರು ರೋಗಿಗಳ ಸಂಕ್ಯೆ ಹೆಚ್ಚಾದರು ಸುಸಜ್ಜಿತವಾದ ಸೇವೆ ನೀಡುವಲ್ಲಿ ಆಸ್ಪತ್ರೆಯ ವೈದ್ಯರುಗಳಿಗೆ ಹಾಗೂ ಸಿಬ್ಬಂದಿಗಳಿಗೆ ಆತ್ಮಸ್ಥೆöÊರ್ಯ ಹಾಗೂ ಬೆಂಬಲ ತುಂಬಿದರು ಸರಳ ವ್ಯಕ್ತಿತ್ವದೊಂದಿಗೆ ದಿನದ ೨೪ ಗಂಟೆ ಯಾರೇ ದೂರವಾಣಿ ಕರೆ ಮಾಡಿದರು ಅವರಿಗೆ ಸ್ಪಂದಿಸುವ ಕಾರ್ಯಮಾಡಿದರು ಎಂದು ಹೆಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ|| ಕಟ್ಟಿ ಅವರು ನನ್ನ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ನನಗೆ ಅತ್ಯುತ್ತಮ ಬೆಂಬಲ ನೀಡಿದ್ದರು ಅವರು ನೀಡಿದ ಪ್ರೀತಿ ಬೆಂಬಲ ನನ್ನ ಜೀವನದಲ್ಲಿ ಮರೆಯಲಾಗದು ನನ್ನ ನೋವು ನಲಿವುಗಳಿಗೆ ಸ್ಪಂದಿಸಿ ನನಗೆ ಆತ್ಮ ಸ್ಥೆöÊರ್ಯ ತುಂಬಿದರು. ಎಲ್ಲರ ರುಣವನ್ನು ಸದಾ ಸ್ಮರಿಸುತ್ತೇನೆ ಎಂದು ಹೆಳಿದರು.
ಇದೆ ಸಂದರ್ಭದಲ್ಲಿ ಡಾ|| ಧರ್ಮರಾಯ. ಇಂಗಳೆ ರವರಿಗೆ ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ಡಾ|| ಮಲ್ಲನಗೌಡ. ಬಿರಾದಾರ, ಡಾ|| ಕವಿತಾ. ದೊಡಮನಿ, ಡಾ|| ಅಶೋಕ. ಜಾಧವ, ಡಾ|| ಪ್ರಭು, ಆಸ್ಪತ್ರೆಯ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಡಾ|| ಪರಶುರಾಮ. ದೇವಮಾನೆ, ಡಾ|| ಎ. ಜಿ. ಬಿರಾದಾರ, ಶ್ರೀಮತಿ. ರಜಿಯಾ. ಪಿಂಜಾರ ಉಪಸ್ಥತರಿದ್ದರು.
ಸಮಾರಂಭದಲ್ಲಿ ಡಾ|| ಶಶಿಕಲಾ. ಹಿರೆಮನಿ, ಡಾ|| ಆನಂದ. ಝಳಕಿ, ಡಾ|| ಮಹೇಶ. ಮೋರೆ, ಶ್ರೀ. ಪ್ರದೀಪ. ಕ್ಯಾತನ, ಶ್ರೀಮತಿ. ಗೀತಾ. ತೊರವಿ, ಶ್ರೀ. ಸುರೇಂದ್ರ. ಮಾನಕರ, ಶ್ರೀ. ವಸುಧೇಂದ್ರ. ಹೆಚ್, ಶ್ರೀಮತಿ. ದಾಕ್ಷಾಯಣಿ. ಪಾಟಿಲ, ಶ್ರೀಮತಿ. ಭಾರತಿ. ಮೊಕಾಶಿ, ಶ್ರೀ. ಪ್ರಶಾಂತ. ಸೋಮಣ್ಣವರ, ಶ್ರೀ. ಅನೀಲ. ಘೋರ್ಪಡೆ, ಶ್ರೀ. ಸಂತೋಷ. ಬಿರಾದಾರ ಹಾಗೂ ಆಸ್ಪತ್ರೆಯ ಎಲ್ಲ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದು ಡಾ|| ಕಟ್ಟಿ ಅವರಿಗೆ ಸನ್ಮಾನಿಸಿ ಬಿಳ್ಕೊಟ್ಟರು. ಇದೆ ಸಂದAರ್ಭದಲ್ಲಿ ನೂತನ ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ|| ಎಸ್. ಎಲ್. ಲಕ್ಕಣ್ಣವರ ಇವರಿಗೆ ಸ್ವಾಗತಿಸಲಾಯಿತು.
ಜಿಲ್ಲಾ ಆಸ್ಪತ್ರೆಯ ನೌಕರರ ಕ್ಷೇಮಾಭಿವೃದ್ದಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ. ರವಿ. ಕಿತ್ತೂರ ನಿರುಪಿಸಿ ವಂದಿಸಿದರು. ಶ್ರೀ. ಲಾಲಸಾಬ ಬಾಗಲಕೋಟ ಶುಶ್ರೂಷಾ ಅಧಿಕಾರಿ ಇವರು ಸ್ವಾಗತಿಸಿದರು.


Leave a Reply