Belagavi

ಕಾರ್ಮಿಕರು ದೇವರ ಸಮಾನ : ಸುಭಾನಿ ನದಾಫ


ಬೈಲಹೊಂಗಲ ೫: ಪಟ್ಟಣದ ಎಂ.ಸಿ.ಮೆಟಗುಡ್ಡ ಹಾಗೂ ಸುಭಾನಿ ಕಾಟನ್ ಟ್ರೇಡರ್ಸ್ ವತಿಯಿಂದ ಪ್ರತಿವರ್ಷದಂತೆ ಕಾಟನ್ ಮಿಲ್ಲ್ನಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರನ್ನು ಶ್ರೀ ಕ್ಷೇತ್ರ ಉಳವಿಗೆ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಉದ್ಯಮಿ ಸುಭಾನಿ ನದಾಫ ಮಾತನಾಡಿ, ಪ್ರತಿ ವರ್ಷದಂತೆ ಕೂಲಿ ಕಾರ್ಮಿಕರನ್ನು ಶ್ರೀ ಕ್ಷೇತ್ರ ಉಳವಿಯ ಚನ್ನಬಸವೇಶ್ವರರ ದರ್ಶನಕ್ಕೆ ಕಳುಹಿಸಲಾಯಿತು. ಕೂಲಿ ಕಾರ್ಮಿಕರು ದೇವರ ಸಮಾನರು. ಭಕ್ತಿಯಿಂದ ಕೆಲಸ ಮಾಡುವ ಅವರ ಕಾರ್ಯ ಶ್ಲಾಘನೀಯ ಎಂದರು. ೨೦ಕ್ಕೂ ಹೆಚ್ಚು ಕಾರ್ಮಿಕರು ಪ್ರಯಾಣ ಬೆಳೆಸಿದರು. ಎಲ್ಲ ಕಾರ್ಮಿಕರು ಸಂತೋಷದಿAದ ಉಳವಿಯ ಚನ್ನಬಸವೇಶ್ವರರಿಗೆ ಜಯವಾಗಲಿ ಎಂದು ಜಯಘೋಷ ಕೂಗುತ್ತಾ ಪ್ರಯಾಣ ಬೆಳೆಸಿದರು. ಈ ಸಂದರ್ಭದಲ್ಲಿ ರಾಜಶೇಖರ ಮೆಟಗುಡ್ಡ, ಮಲ್ಲಿಕ ನದಾಫ, ಸಯ್ಯದಸಾಬ ನದಾಫ, ಮಹಾಂತೇಶ ರೆಡ್ಡಿ, ಎಸ್.ಜಿ.ಹಣಮಶೇಟ, ಮುತ್ತು ಮೆಟಗುಡ್ಡ, ಫಾರೂಕ ಅಂಕಲಗಿ, ಜಾವೀದ್ ಮುಜಾವರ ಉಪಸ್ಥಿತರಿದ್ದರು.


Leave a Reply