Uncategorized

ಮಹಿಳಾ ಕಾಯಕೋತ್ಸವಕ್ಕೆ ಚಾಲನೆ


ಬೈಲಹೊಂಗಲ 5: ತಾಲೂಕಿನ ನಾಗನೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ದಿ: 4 ರಂದು “ಮಹಿಳಾ ಕಾಯಕೋತ್ಸವ ಅಭಿಯಾನ” ಕ್ಕೆ ಚಾಲನೆಯನ್ನು ಶ್ರೀಮತಿ ಬಸವಣ್ಣೆವ್ವ ಕಲ್ಲಪ್ಪ  ಸಣ್ಣಮನಿ ಗ್ರಾಮ ಪಂಚಾಯತ ಅಧ್ಯಕ್ಷರು ಯೋಜನೆಯ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸುವ ಮೂಲಕ ಚಾಲನೆ ನೀಡಿದರು.

ತಾಲೂಕ ಪಂಚಾಯತ ನರೇಗಾ ಐಇಸಿ ಸಂಯೋಜಕರು ಎಸ್‌ ವ್ಹಿ ಹಿರೇಮಠ, ಗ್ರಾಪಂ ಉಪಾಧ್ಯಕ್ಷರು ಮಹಾದೇವಿ ವಿರಪ್ಪ ಕಾಡಣ್ಣವರ, ಸದಸ್ಯರು ಶೋಭಾ ಪಾಟೀಲ ಮಮತಾಜ ನದಾಫ ಕಲ್ಲವ್ವ ಹೊಸಮನಿ ಅನ್ನವ್ವ ಪೂಜೇರಿ ಸಂಜು ಹೊಸಮನಿ ಕ್ಲರ್ಕ ಸುನೀಲ ತಲ್ಲೂರ ಸುಪ್ರೀತಾ ಪಾಟೀಲ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಮತ್ತು ಸ್ವಸಹಾಯ ಸಂಘದ ಪ್ರತಿನಿಧಿಗಳು ಮತ್ತು ಗ್ರಾಮದವರು ಹಾಜರಿದ್ದರು.

ನರೇಗಾ ತಾಲೂಕ ಐಇಸಿ ಸಂಯೋಜಕರು ಎಸ್‌ ವ್ಹಿ ಹಿರೇಮಠ ಮಾತನಾಡಿ ಇದು ಜುಲೈ-15-2021 ರಿಂದ ಸೆಪ್ಟಂಬರ-15-2021 ರವರೆಗೆ ಅಭಿಯಾನದ ರುಪದಲ್ಲಿ ತಾಲೂಕಿನ ಆಯ್ದ ಗ್ರಾಮ ಪಂಚಾಯತಿಳಲ್ಲಿ ಜರುಗುತ್ತಿದ್ದು ಮತ್ತು ಇದರ ಮುಖ್ಯ ಉದ್ದೇಶ ಉದ್ಯೋಗ ಖಾತರಿ ಯೋಜನೆಯಲ್ಲಿ ಮಹಿಳಾ ಕೂಲಿಕಾರರು ಅತಿ ಹೆಚ್ಚಿನ ಪ್ರಮಾಣದಲ್ಲ ಪಾಲ್ಗೋಳ್ಳುವುದಾಗಿದೆ ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಮಹಿಳೆಯರು ಬರುಬೇಕು, ಆರ್ಥಿಕವಾಗಿ ಸದೃಡರಗಲು ನರೇಗಾ ಯೋಜನೆಯು ಒಂದು ಆರ್ಥಿಕ ವರ್ಷದಲ್ಲಿ 100 ದಿವಸ ಕೆಲಸವನ್ನು ಪ್ರತಿ ಕುಟುಂಬಕ್ಕೆ ನೀಡುತ್ತದೆ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಗ್ರಾಪಂ ಕ್ಲರ್ಕ ಸಂಜು ಹೊಸಮನಿ ಸ್ವಾಗತಿಸಿ ವಂದಿಸಿದರು.


Leave a Reply