Belagavi

ರಸ್ತೆಗಳನ್ನು ದುರಸ್ತಿಗೊಳಿಸಲು ಕರವೇಯಿಂದ ಮನವಿ ಅರ್ಪಣೆ


ಬೈಲಹೊಂಗಲ ೫ – ಸಮೀಪದ ಮುರುಗೋಡ ಹೋಬಳಿಯಲ್ಲಿ ಬರುವ ನಾನಾ ಗ್ರಾಮಗಳ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಗೊಳಿಸಬೇಕು ಎಂದು ಸವದತ್ತಿ ತಾಲೂಕಾ ಕ ರ ವೇ ಅಧ್ಯಕ್ಷ ಉದಯಕುಮಾರ ಚಿಕ್ಕನ್ನವರ ನೇತೃತ್ವದಲ್ಲಿ ಸಹಾಯಕ ಕಾರ್ಯ £ರ್ವಾಹಕ ಅಭಿಯಂತರರು ಬೈಲಹೊಂಗಲ ಇವರಿಗೆ ಮನವಿ ಅರ್ಪಿಸಿದರು.
ಮುರಗೋಡದ ಸುತ್ತಮುತ್ತಲ ನಾನಾ ಗ್ರಾಮಗಳ ರಸ್ತೆಗಳು ಹಾಳಾಗಿ ಹಲವಾರು ವರ್ಷಗಳು
ಕಳೆದರು ಯಾವುದೇ ಜನಪ್ರತಿ£ಧಿಗಳು ಆ ಕಡೆ ಗಮನ ಹರಿಸಿದರು ದುರ್ದೈವದ ಸಂಗತಿ, £ತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತಿದ್ದು ರಸ್ತೆಗಳು ಹೊಂಡದಿAದ ಕೂಡಿದ್ದು ಇದರಿಂದ ಮಳೆಗಾಲದಲ್ಲಿ ಅನೇಕ ರೀತಿಯ ತೊಂದರೆಗಳು ಮತ್ತು ಅಪಘಾತಗಳು ಸಂಭವಿಸುತ್ತಿದ್ದು ಆದ್ದರಿಂದ ಕೂಡಲೇ ಸಂಬAಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ ಕೂಡಲೇ ರಸ್ತೆ ದುರಸ್ತಿ ಗೊಳಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುತ್ತು ಚನ್ನನವರ, ದೀಪು ಬಾಳಿಕಾಯಿ, ಬಸವರಾಜ ಕೋಲಕಾರ, ಶರೀಫ್ ನದಾಫ, ವಿನಾಯಕ ಪಾಸಲಕರ, ಶ್ರೀಕಾಂತ ನೇಸರಗಿ, ಮಲ್ಲಿಕಾರ್ಜುನ ಸೊಗಲದ, ಪ್ರಸಾದ ಯರಜರ್ವಿ, ಕಲಗೌಡ ಪಾಟೀಲ, ಮಲ್ಲಯ್ಯ ಪೂಜೇರಿ, ಗುರುಪುತ್ರ ಕಾಜಗಾರ, ಬೆಳಪ್ಪ ರುದ್ರಪ್ಪನವರ ಹಾಗೂ ಮುರಗೋಡ ಹೋಬಳಿಯ ಅನೇಕ ನಾಗರಿಕರು ಭಾಗವಹಿಸಿದ್ದರು.


Leave a Reply