Koppal

ಭೋವಿ ಸಮಾಜಕ್ಕೆ ಬಿಜೆಪಿ ಅನ್ಯಾಯ ಮಾಡಿದೆ


ಕುಷ್ಟಗಿ : ರಾಜ್ಯದಲ್ಲಿ ಭೋವಿ ಸಮಾಜದ ನಾಲ್ವರು ಶಾಸಕರು ಇದ್ದರೂ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಾನ ಕೊಡದಿರುವುದು ಖಂಡನೀಯ ಎಂದು ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ.

ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಭೋವಿ (ವಡ್ಡರ) ಸಮಾಜದ ಕೊಡುಗೆಯೂ ಇದೆ. ಒಬ್ಬರಿಗೂ ಸಚಿವ ಸ್ಥಾನ ಕೊಡದೆ ಅನ್ಯಾಯ ಮಾಡಲಾಗಿದೆ.

ನಮ್ಮ ರಾಜ್ಯಧ್ಯಕ್ಷರ ನೇತೃತ್ವದಲ್ಲಿ ಬೃಹತ್ ಮಟ್ಟದಲ್ಲಿ ಹೋರಾಟವನ್ನು ಮಾಡಬೇಕಾದ ಪರಿಸ್ಥಿತಿಯನ್ನು ಮಾಡಿಕೊಂಡಿರಿ.

ಸಮಾಜದ ಬಗ್ಗೆ ಬಿಜೆಪಿ ವರಿಷ್ಠರು ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ ಎಂದು ಕರ್ನಾಟಕ ಭೋವಿ ಯುವ ವೇದಿಕೆಯ ರಾಜ್ಯ ಮಾಧ್ಯಮ ಪ್ರತಿನಿಧಿ ನಾಗರಾಜ ಭೋವಿ ಬೇಸರ ವ್ಯಕ್ತಪಡಿಸಿದರು.

ವರದಿ-ಆರ್ ಶರಣಪ್ಪ ಗುಮಗೇರಾ
ಕೊಪ್ಪಳ.


Leave a Reply