Koppal

ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಪ್ರಯತ್ನ ಆಗಬೇಕು


ಬಿಜೆಪಿ ಸರಕಾರದ ಯೋಜನೆ ಯಾವುದೇ ಇರಲಿ ಫಲಾನುಭವಿಗಳಿಗೆ ಮುಟ್ಟುವಂತ ಕೆಲಸ ಬಿಜೆಪಿ ಕಾರ್ಯಕರ್ತರಿಂದ ಆಗಬೇಕು ಎಂದು ಕೊಪ್ಪಳ ಜಿಲ್ಲಾ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿ ಮೌನೇಶ ಹೇಳಿದರು.

ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ ತಾವರಗೇರಾ ರಸ್ತೆಯ ರವಿಕುಮಾರ ಹಿರೇಮಠ ಇವರ ಲೇಔಟ್ ನಲ್ಲಿ ಭಾರತೀಯ ಜನತಾ ಪಾರ್ಟಿ ಕುಷ್ಟಗಿ ಮಂಡಲ ವತಿಯಿಂದ ಹಿಂದುಳಿದ ವರ್ಗದ ಕಾರ್ಯಕಾರಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಪಕ್ಷದ ಸಿದ್ದಾಂತದ ಪ್ರಕಾರ ಕಾರ್ಯಕರ್ತರಾದವರು ನಾವು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರ ಯೋಜನೆಯನ್ನು ಜನರಿಗೆ ತಲುಪಿಸುವಂತ ಕೆಲಸವನ್ನು ಪ್ರತಿ ಬಿಜೆಪಿ ಕಾರ್ಯಕರ್ತರು ಸರಕಾರಿ ಇಲಾಖೆ ಅಧಿಕಾರಗಳ‌ ಜೊತೆ ಒಳ್ಳೆಯ ರೀತಿಯಿಂದ ನಡೆದುಕೊಂಡು ನಿಜವಾದ ಫಲನುಭವಿಗಳಿಗೆ ಸರಕಾರ ಯೋಜನೆ ದೊರಕುವಂತೆ ಮಾಡಬೇಕಾಗಿದೆ ಎಂದು ಸಭೆಯಲ್ಲಿ ತಿಳಿಸಿಕೊಟ್ಟರು.

ಇದೇ ಸಂದರ್ಭದಲ್ಲಿ ಕುಷ್ಟಗಿ ತಾಲೂಕು ಬಿಜೆಪಿ ಮಂಡಲದ ಹಿಂದುಳಿದ ಮೋರ್ಚಾ ಅಧ್ಯಕ್ಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪಕ್ಷದ ಹಿರಿಯರ ನೆಡೆಯಂತೆ ಮತ್ತು ಪಕ್ಷದ ಸಿದ್ದಾಂತದಂತೆ ಎಲ್ಲಾ ಕಾರ್ಯಕರ್ತರು ಬಿಜೆಪಿ ಸರಕಾರ ಯೋಜನೆ ಇರಬಹುದು ಮತ್ತು ಪಕ್ಷದ ಒಳಿತಿಗಾಗಿ ಶ್ರಮಿ

ಸಬೇಕು ಎಂದರು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೆ ಮಹೇಶ್ ರವರು ಮತ್ತು ಹಿಂದುಳಿದ ವರ್ಗಗಳ ಘಟಕ ದ ಜಿಲ್ಲಾದ್ಯಕ್ಷರಾದ ವೆಂಕಟೇಶ ರವರು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಂಜುನಾಥ ಜೂಲಕುಂಟಿ,ಚಂದಪ್ಪ ಬಾವಿಕಟ್ಟಿ, ಗ್ಯಾನಪ್ಪ ,ಶ್ರೀಕಾಂತ್ ಕಿರಗಿ, ರವಿ ಬಡಿಗೇರಾ ಭೀಮಣ್ಣ , ಯಮನೂರು ಹಾಗೂ ಎಲ್ಲಾ ಪದಾಧಿಕಾರಿಗಳು, ಪಕ್ಷದ ಮುಖಂಡರು ಇದ್ದರು.

ವರದಿ- ಆರ್ ಶರಣಪ್ಪಗುಮಗೇರಾ

ಕೊಪ್ಪಳ.


Leave a Reply