Belagavi

ಜೈನ ಸಮುದಾಯ ಭವನಕ್ಕೆ ೨೮ ಲಕ್ಷ ರೂ. ಮಂಜೂರು ಮಾಡಿಸಿದ ಶಾಸಕಿ ಲಕ್ಷಿ÷್ಮ ಹೆಬ್ಬಾಳಕರ್


ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುತಗಾ ಗ್ರಾಮದಲ್ಲಿ ಜೈನ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕಿ ಲಕ್ಷಿ÷್ಮ ಹೆಬ್ಬಾಳಕರ್ ಅವರು ವಿಶೇಷ ಅನುದಾನ ಮಂಜೂರು ಮಾಡಿಸಿದ್ದು, ಆದೇಶಪತ್ರವನ್ನು ಶುಕ್ರವಾರ
ಜೈನ ಸಮುದಾಯದ ಪ್ರತಿನಿಧಿಗಳಿಗೆ ಹಸ್ತಾಂತರಿಸಿದರು.
ಗ್ರಾಮದ ಜೈನ ಸಮುದಾಯದ ಪ್ರತಿನಿಧಿಗಳು ಲಕ್ಷಿ÷್ಮ ಹೆಬ್ಬಾಳಕರ್ ಅವರನ್ನು ಭೇಟಿ ಮಾಡಿ ಗ್ರಾಮಕ್ಕೊಂದು ಜೈನ ಸಮುದಾಯ ಭವನ ಮಂಜೂರು ಮಾಡಿಸಬೇಕೆನ್ನುವ ಬೇಡಿಕೆ ಇಟ್ಟಿದ್ದರು.ಇದು ಅವರ ಕಳೆದ ಸುಮಾರು ೧೫ ವರ್ಷಗಳ ಬೇಡಿಕೆಯಾಗಿತ್ತು.
ಗ್ರಾಮಸ್ಥರ ಬೇಡಿಕೆಯಂತೆ ಪ್ರಸ್ತಾವನೆ ಸಿದ್ದಪಡಿಸಿದ ಲಕ್ಷಿ÷್ಮ ಹೆಬ್ಬಾಳಕರ್ ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ೨೮ ಲಕ್ಷ ರೂ. ಮಂಜೂರು ಮಾಡಿಸಿ, ಆದೇಶ ಪತ್ರವನ್ನು ಹೊರಡಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.
`ಶುಕ್ರವಾರ ಆದೇಶ ಪತ್ರದ ಪ್ರತಿಯನ್ನು ಸಮುದಾಯದ ಮುಖಂಡರಿಗೆ ಹಸ್ತಾಂತರಿಸಿದೆ. ಈ ಸಂದರ್ಭದಲ್ಲಿ ಅವರ ಮುಖದಲ್ಲಿನ ಮಂದಹಾಸವನ್ನು ನೋಡಿ ಖುಷಿಪಟ್ಟೆ. ಜೊತೆಗೆ ಅವರ ಆತ್ಮೀಯ ಸನ್ಮಾನವನ್ನು ಸ್ವೀಕರಿಸಿದೆ” ಎಂದು ಲಕ್ಷಿ÷್ಮ ಹೆಬ್ಬಾಳಕರ್ ಪ್ರತಿಕ್ರಿಯಿಸಿದರು.


Leave a Reply