Koppal

ನೂತನ ಸಚಿವ ಹಾಲಪ್ಪ ಆಚಾರ್ ರವರ ಜಿಲ್ಲಾ ಪ್ರವಾಸ


ಕೊಪ್ಪಳ:ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಾಲಪ್ಪ ಆಚಾರ್ ಅವರು ಮೊದಲ ಬಾರಿ ಆ.7 ರಂದು ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಬೆಳಿಗ್ಗೆ 7ಗಂಟೆಗೆ ಬೆಂಗಳೂರಿನಿಂದ ಹೊರಟು ಮದ್ಯಾನ್ಹ 12ಗಂಟೆಗೆ ಕೊಪ್ಪಳಕ್ಕೆ ಆಗಮಿಸಲಿದ್ದಾರೆ.ಆಗಮಿಸಿದ ನಂತರ ಗವಿ ಮಠಕ್ಕೆ ಬೇಟಿ ನೀಡುವರು,ನಂತರ 12:30ಕ್ಕೆ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.ಮದ್ಯಾನ್ಹ 3:00 ಗಂಟೆಗೆ ಕೋವಿಡ್ ಮೂರನೇ ಅಲೆಯ ಮುಂಜಾಗ್ರತೆಯ ಕುರಿತು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವರು.ಸಂಜೆ 4:30ಗಂಟೆಗೆ ಕೊಪ್ಪಳದಿಂದ ಹೊರಟು ಸ್ವಗ್ರಾಮ ಮಸಬ ಹಂಚಿನಾಳಕ್ಕೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಸಹಾಯಕ ವಿಜಯ ಪುರಾಣಿಕ ತಿಳಿಸಿದ್ದಾರೆ.

ವರದಿ-ಆರ್ ಶರಣಪ್ಪ ಗುಮಗೇರಾ
ಕೊಪ್ಪಳ.


Leave a Reply