Belagavi

ಕಲಾಪ ಹಾಳು ಪ್ರಜಾಪ್ರಭುತ್ವ ವಿರೋಧಿ ನಡೆ: ಎಂ.ಬಿ.ಜಿರಲಿ


ಬೆಳಗಾವಿ: ಸುಪ್ರೀಂರ್ಕೋನಲ್ಲಿ ಬಾಕಿ ಇರುವ ಪೆಗಾಸಿಸ್ ಇಟ್ಟುಕೊಂಡು ಕಲಾಪ ನಡೆಸಲು ಅವಕಾಶ ಕೊಡದೇ ಇರುವುದು ಪ್ರಜಾಪ್ರಭುತ್ವ, ಜನವಿರೋಧಿ ನಡೆಯಾಗಿದೆ. ಇದು ಸಂವಿಧಾನ ರಚನೆ ಮಾಡಿದ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ರಾಜ್ಯ ಬಿಜೆಪಿ ವಕ್ತಾರ ಎಂ.ಬಿ. ಜೀರಲಿ ಕಿಡಿಕಾರಿದರು.

ಬೆಳಗಾವಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಬಿ. ಜೀರಲಿ ಕೋವಿಡ್‌ಗಿಂತಲೂ ಕಾಂಗ್ರೆಸ್‌ನವರಿಗೆ ಪೆಗಾಸಿಸ್ ಹೆಚ್ಚಾಗಿ ಬಿಟ್ಟಿದೆ. ಪೆಗಾಸಿಸ್ ಬಗ್ಗೆ ತನಿಖೆ ಮಾಡಬೇಕೋ ಬೇಡವೋ ಎಂಬ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ನಿಮ್ಮ ಏನೇ ವಿಚಾರಗಳು ಇದ್ದರೂ ಸದನದಲ್ಲಿ ಮಂಡಿಸಬೇಕಿತ್ತು. ಸರ್ಕಾರ ಏನಾದರೂ ತಪ್ಪು ಮಾಡಿದ್ದರೆ ಸದನದಲ್ಲಿ ನಿಂತು ಹೇಳಬೇಕಿತ್ತು. ಅದನ್ನು ಬಿಟ್ಟು ಸದನದಲ್ಲಿ ಮಂಡನೆ ಮಾಡುವ ವಿಧೇಯಕಗಳನ್ನು ಹರಿದು ಹಾಕಿ, ಕಲಾಪಕ್ಕೆ ಅಡ್ಡಿ ಪಡಿಸುತ್ತಿರುವುದು ಜನ ವಿರೋಧಿ ನಡೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.


Leave a Reply