Belagavi

ಪ್ರವಾಹದಿಂದ ಹಾನಿಯಾದ ಬೆಳೆ ಕುರಿತು ಸಂಪೂರ್ಣ ಸಮೀಕ್ಷಾ ವರದಿ ಪಡೆದು, ಪರಿಹಾರ ದೊರಕಿಸಲು ಕ್ರಮ: ಶಶಿಕಲಾ ಜೊಲ್ಲೆ


ವಿಜಯಪುರ : ಆಗಸ್ಟ್ : ೭: ಮುದ್ದೇಬಿಹಾಳ ತಾಲೂಕಿನ ಯಲಗೂರ ವ್ಯಾಪ್ತಿಯಲ್ಲಿ ಬೆಳೆ ಹಾನಿಗೆ ಸಂಬAಧಿಸಿದAತೆ ಸಮೀಕ್ಷೆ ಕಾರ್ಯ ನಡೆದಿದ್ದು, ಈ ಕುರಿತು ಸಂಪೂರ್ಣ ವರದಿ ಪಡೆದು ಸೂಕ್ತ ಮತ್ತು ತಕ್ಷಣ ಪರಿಹಾರ ದೊರಕಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಸಚಿವ ಸಂಪುಟ ದರ್ಜೆಯ (ಪ್ರವಾಹ ಮತ್ತು ಕೋವಿಡ್ ನಿರ್ವಹಣೆ) ಸಚಿವರು ಶಶಿಕಲಾ ಜೊಲ್ಲೆ ಅವರು ತಿಳಿಸಿದರು.
ಪ್ರವಾಹ ಹಾನಿ ಪರಿಶೀಲನೆ ಅಂಗವಾಗಿ ಯಲಗೂರ ಶ್ರೀ ಹನುಮಾನ್ ದೇವಸ್ಥಾನದ ದರ್ಶನ ಪಡೆದ ನಂತರ ಕೃಷ್ಣಾ ನದಿ ದಂಡೆಯ ಜಾಕ್‌ವೆಲ್ ಪರಿಶೀಲಿಸಿದ ಅವರು ಯಲಗೂರ ವ್ಯಾಪ್ತಿಯಲ್ಲಿ ೪೬೫ ಹೆಕ್ಟೇರ್ ಬೆಳೆ ಹಾನಿಯಾದ ಬಗ್ಗೆ ಈವರೆಗೆ ವರದಿಯಾಗಿದೆ. ಕಬ್ಬು ಬೆಳೆ ಹೆಚ್ಚಿನ ರೀತಿಯಲ್ಲಿ ನಾಶವಾಗಿರುವ ಬಗ್ಗೆ ಮಾಹಿತಿಯಿದ್ದು, ಹತ್ತಿ, ತೊಗರಿ, ಸೂರ್ಯಪಾನ ಸಹ ಹಾನಿಯಾಗಿದೆ. ಬೆಳೆ ಹಾನಿಗೆ ಸಂಬAಧಿಸಿದAತೆ ಸರ್ವೇ ಕಾರ್ಯ ನಡೆದಿದ್ದು, ಈ ಕಾರ್ಯ ಸಂಪೂರ್ಣ ಆದ ತಕ್ಷಣ ಪರಿಹಾರ ದೊರಕಿಸಿ ಕೊಡಲಾಗುವುದೆಂದು ಹೇಳಿದರು.
ಅದರಂತೆ ಪ್ರವಾಹ ಸಂದರ್ಭದಲ್ಲಿ ಜಾಕ್‌ವೆಲ್ ಮುಳುಗಿ ನಾಗರೀಕರಿಗೆ ನೀರಿನ ಸಮಸ್ಯೆಯಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಇದರ ಸ್ಥಳಾಂತರಕ್ಕೆ ನಾಗರೀಕರಿಂದ ಬೇಡಿಕೆ ಸಹ ಬಂದಿದೆ. ಈ ಕುರಿತು ಸಂಬAಧಪಟ್ಟ ಅಧಿಕಾರಿಗಳಿಗೆ ವರದಿ ನೀಡಲು ಸೂಚಿಸಲಾಗಿದ್ದು, ವರದಿ ಪಡೆದ ನಂತರ ಸರ್ಕಾರದ ಹಂತದಲ್ಲಿ ಪ್ರಯತ್ನಿಸಿ ನಾಗರೀಕರಿಗೆ ತೊಂದರೆಯಾಗದAತೆ ಇದರ ಸ್ಥಳಾಂತರಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದರು.
ಕಳೆದ ಬಾರಿ ಕೋವಿಡ್, ಬರಗಾಲ ಹಾಗೂ ಪ್ರವಾಹ ಏಕಕಾಲಕಕ್ಕೆ ಬಂದಿರುವುದರಿAದ ಇವುಗಳನ್ನು ಸಮರ್ಪಕ ನಿಭಾಯಿಸಲಾಗಿದೆ. ಅದರಂತೆ ಜಿಲ್ಲಾಡಳಿತ, ತಾಲೂಕಾ ಆಡಳಿತ, ಶಾಸಕರು ಮತ್ತು ಜನಪ್ರತಿನಿಧಿಗಳ ಸಹಕಾರದಿಂದ ಪ್ರವಾಹ ಮತ್ತು ಕೋವಿಡ್ ಎರಡನೇ ಅಲೆ ಸಮರ್ಪಕವಾಗಿ ನಿಭಾಯಿಸಿದೆ. ಇದಕ್ಕಾಗಿ ಮಾಧ್ಯಮ ಸಹೋದರರ ಸಹಕಾರಕ್ಕೆ ಅಭಿನಂದಿಸಿದ ಅವರು ಕೋವಿಡ್ ಮೂರನೇ ಅಲೆ ಎದುರಿಸಲು ಸರ್ವ ರೀತಿಯಲ್ಲಿ ಸನ್ನದ್ಧಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ಇತ್ತೀಚೆಗೆ ಪ್ರವಾಹ ಸಂದರ್ಭದಲ್ಲಿ ಜನರಿಗೆ ಆಗಿರುವ ತೊಂದರೆ ನಿಭಾಯಿಸಲು ಮತ್ತು ಅವರ ಸಂಕಷ್ಟಕ್ಕೆ ಸ್ಪಂದಿಸಲು ಇಂದು ಪ್ರವಾಹ ಹಾನಿ ಪ್ರದೇಶಗಳಾದ ಯಲಗೂರ, ತಂಗಡಗಿ, ಕಮಲದಿನ್ನಿ ಮತ್ತು ಗಂಗೂರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಅದರಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೊಂದರೆಗೀಡಾದ ನಾಗರೀಕರಿಗೆ ಎಲ್ಲ ರೀತಿಯಿಂದ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ಹೇಳಿದರು.
ತಂಗಡಗಿ, ಕುಂಚಗನೂರ ಹಾಗೂ ಕಮಲದಿನ್ನಿ ಗ್ರಾಮಗಳ ಬೆಳೆ ಮತ್ತು ಮನೆ ಹಾನಿ ಹಾಗೂ ರಸ್ತೆಗಳ ಬಗ್ಗೆ ಪರಿಶೀಲನೆ:
ಜಿಲ್ಲಾ ಉಸ್ತುವಾರಿ ಸಚಿವರು ನಂತರ ಮುದ್ದೇಬಿಹಾಳ ತಾಲೂಕಿನ ತಂಗಡಗಿ, ಕುಂಚಗನೂರ ಹಾಗೂ ಕಮಲದಿನ್ನಿ ಗ್ರಾಮಗಳ ವ್ಯಾಪ್ತಿಯ ಕೃಷ್ಣಾ ನದಿಯಿಂದ ಹಾನಿಗೊಳಗಾದ ಬೆಳೆ ಮತ್ತು ಮನೆ ಹಾನಿ ಹಾಗೂ ರಸ್ತೆಗಳ ಬಗ್ಗೆ ಪರಿಶೀಲಿಸಿದರು.
ಪ್ರವಾಹದಿಂದ ಮುದ್ದೇಬಿಹಾಳ ತಾಲೂಕಿನ ಇಂತಹ ಗ್ರಾಮಗಳು ಪದೇ ಪದೇ ಪ್ರವಾಹಕ್ಕೆ ತುತ್ತಾಗಿ ತೀವ್ರ ಸಂಕಷ್ಟ ಎದುರಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಅದರಂತೆ ಪ್ರವಾಹ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೂ ತೊಂದರೆಯಾಗುತ್ತಿರುವುದು ಸಹ ಗಮನಕ್ಕೆ ಬಂದಿದ್ದು, ಈ ಕುರಿತು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಅದರಂತೆ ತಂಗಡಗಿಯಿAದ ದೇವಗಿರಿವರೆಗೆ ನದಿ ದಡದಲ್ಲಿ ೯.೫ ಕಿ.ಮೀ ರಸ್ತೆ ಹಾನಿಯಾಗುವ ಜೊತೆಗೆ ೧೭ ಹಳ್ಳಿಗಳು ಜಲಾವೃತಗೊಂಡು ಜನರ ರಕ್ಷಣೆ ಸಹ ಕಷ್ಟವಾಗುತ್ತಿದ್ದು, ಈ ರಸ್ತೆಯನ್ನು ೨ ಮೀ.ರಷ್ಟು ಎತ್ತರಗೊಳಿಸಿ, ೭.೫ ಮೀ ರಷ್ಟು ಅಗಲ ಮಾಡಿ, ತಡೆಗೋಡೆ ರೀತಿಯಲ್ಲಿ ನಿರ್ಮಿಸಲು ಉದ್ದೇಶವಾಗಿದೆ ಎಂದು ಹೇಳಿದರು.
ಅದರಂತೆ ಕೃಷ್ಣಾ ನದಿ ದಡದಲ್ಲಿರುವ ಎಸ್ಸಿ,ಎಸ್ಟಿ ಕಾಲನಿಗಳು ಪ್ರಭಾವಿತವಾಗಿದ್ದು, ಶಾಸಕರು ಕೂಡ ಇಂತಹ ಬಡಜನರಿಗೆ ಮನೆ ನಿರ್ಮಿಸಿ ಕೊಡಲು, ತಲಾ ೧೧.೨೫ ಲಕ್ಷ ರೂ.ಗಳ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡುವ ಪ್ರಸ್ತಾವನೆ ನೀಡಿದ್ದು, ಸರ್ಕಾರದ ಮಟ್ಟದಲ್ಲಿ ಅವಶ್ಯಕ ಪ್ರಯತ್ನ ಮತ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕಮಲದಿನ್ನಿ ಗ್ರಾಮದ ಹಣಮವ್ವ, ಸಂಗಪ್ಪ ಕಾಶೀಬಾಯಿ ಅವರಿಗೆ ಧನ ಸಹಾಯ ನೀಡಿ ಮಾನವೀಯತೆ ಮೆರೆದ ಸಚಿವರು :
ಕಮಲದಿನ್ನಿ ಗ್ರಾಮದ ಹಣಮವ್ವ, ಸಂಗಪ್ಪ ಕಾಶೀಬಾಯಿ ಎಂಬ ವೃದ್ಧ ಮಹಿಳೆಯು ಒಬ್ಬಂಟಿಯಾಗಿ ಮನೆಯಲ್ಲಿ ವಾಸಇದ್ದು, ಇತ್ತೀಚೆಗೆ ಬಂದ ಪ್ರವಾಹ ಮತ್ತು ಮಳೆಯಿಂದಾಗಿ ಮನೆಗೆ ತೀವ್ರ ಹಾನಿಯಾಗಿದ್ದು, ಅಪಾಯ ಅಂಚಿನಲ್ಲಿರುವದರಿAದಈ ಕುರಿತು ಸಂಬAಧಿಸಿದ ಅಧಿಕಾರಿಗಳು ಸೂಕ್ತ ಗಮನ ಹರಿಸಲು ಅಧಿಕಾರಿಗಳಿಗೆ ತಿಳಿಸಿದ ಅವರು ಖರ್ಚಿಗಾಗಿ ಧನ ಸಹಾಯ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಾವು ಈ ಹಿಂದೆಯೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಅತ್ಯುತ್ತಮವಾಗಿ ನಿಭಾಯಿಸಿದ್ದು, ರಾಜ್ಯಾದ್ಯಂತ ಸಂಚರಿಸಿ ತಮ್ಮ ಜವಾಬ್ದಾರಿ ನಿರ್ವಹಿಸಿ ಜನರಿಗೆ ನೆರವಾಗಿದ್ದೇನೆ. ಸದ್ಯದ ಖಾತೆಯಲ್ಲಿಯೂ ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುವುದಾಗಿಯೂ ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಮುದ್ದೇಬಿಹಾಳ ಶಾಸಕ ಎ.ಎಸ್ ಪಾಟೀಲ (ನಡಹಳ್ಳಿ) ಅವರು ಮುದ್ದೇಬಿಹಾಳ ತಾಲೂಕಿನಲ್ಲಿ ಪದೇ ಪದೇ ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳ ಹಾಗೂ ಪರಿಹಾರದ ಬಗ್ಗೆ ಸಚಿವರ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ ಕುಮಾರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಉಪವಿಭಾಗಾಧಿಕಾರಿ ಬಲರಾಮ ಲಮಾಣಿ , ತಹಶೀಲ್ದಾರ ಕಟಕಬಾವಿ,ಕೃಷಿ ಜಂಟಿ ನಿರ್ದೇಶಕ ರಾಜಶೇಖರ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕರು ಪ್ರಾಣೇಶ ಜಹಗೀರದಾರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.


Leave a Reply