Belagavi

ಪಟ್ಟಣದ ಸ್ವಚ್ಚತೆಗೆ ಎಲ್ಲರ ಸಹಕಾರ ಅಗತ್ಯ :ಆನಂದ ಮಾಮನಿ


ಸವದತ್ತಿ :೭ : ಪಟ್ಟಣದ ಸ್ವಚ್ಚತೆಗೆ ಎಲ್ಲರ ಸಹಕಾರ ಅಗತ್ಯವಾಗಿ ಬೇಕು ಸ್ವಚ್ಚವಾದ ವಾತಾವರಣ ಎಲ್ಲರಗೂ ಅವಶ್ಯವಾಗಿ ಬೇಕು ಆನಿಟ್ಟಿನಲ್ಲಿ ಸಾರ್ವಜನಿಕರು ಪುರಸಭೆಯವರು ಮಾಡುವ ಕಾರ್ಯಕ್ಕೆ ಸಹಕಾರ ನಿಡಬೇಕು. ಪುರಸಭೆಯವರು ನೀಡುತ್ತಿರುವ ಬಕ್ಕೀಟುಗಳಲ್ಲಿ ತಮ್ಮ ಮನೇಯ ಕಸವನ್ನು ಹಾಕಿ ನಂತರ ಕಸ ತುಂಬಿಸಿಕೊಳ್ಳುವ ವಾಹನ ತಮ್ಮ ಮನೆಬಾಗಿಲಿಗೆ ಬಂದಾಗ ಅದರಲ್ಲಿ ಕಸ ಹಾಕಬೇಕು ಸ್ವಚ್ಚವಾದ ವಾತಾವರಣ ನಿರ್ಮಿಸಲು ಸಾರ್ವಜನಿಕರ ಸಹಕಾರ ಅತಿ ಮುಖ್ಯವಾಗಿ ಬೇಕು ಎಂದು ವಿಧಾನ ಸಭೆ ಉಪಸಭಾದ್ಯಕ್ಷ ಆನಂದ ಮಾಮನಿಯವರು ಮಾತನಾಡಿದರು
ಅವರು ಪುರಸಭೆ ಮುಂಭಾಗದಲ್ಲಿರುವ ದೀವಟಗೇರಿ ಓಣಿಯಲ್ಲಿ ಪುರಸಭೆಯವರು ಎರ್ಫಡಿಸಿದ ಡಸ್ಟಪಿನ್ ವಿತರಣಾ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಕಸ ಹಾಕುವ ಬಕೀಟುಗಳನ್ನು ವಿತರಿಸಿ ನಂತರ ಮಾಧ್ಯಮದವರೂಂದಿಗೆ ಮಾತನಾಡಿದರು
ಈ ಸಂಧರ್ಭದಲ್ಲಿ ಪುರಸಭೆ ಅದ್ಯಕ್ಷ ರಾಜಶೇಖರ ಕಾರದಗಿ. ಉಪಾದ್ಯಕ್ಷ ದೀಪಕ ಜಾನ್ವೇಕರ. ತಹಶೀಲ್ದಾರ ಪ್ರಶಾಂತ ಬಿ ಪಾಟೀಲ. ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಎಮ್ ಚನ್ನಪ್ಪನವರ.ಪುರಸಭೆ ಸದಸ್ಯರಾದ ಸಂಗಮೇಶ ಹಾದೀಮನಿ. ದರೆಪ್ಪ ಮಡ್ಲಿ ಲಕ್ಷö್ಮಣರಾವ ಕುಲಕರ್ಣಿ. ಬಾಬು ಕಾಳೆ. ಆಯ್ ಪಿ ಪಾಟೀಲ. ದ್ಯಾಮಣ್ಣ ಸುತಗಟ್ಟಿ. ಶೀವನಗೌಡಾ ಪಾಟೀಲ. ಸೇರಿದಂತೆ ಎಲ್ಲ ಸದಸ್ಯರು ಉಪಸ್ಥಿತರಿದ್ದರು.


Leave a Reply