karanatakaKoppal

ಅಭಿವೃದ್ಧಿ ಗಾಗಿ ಶ್ರಮಿಸುವೆ -ಸಚಿವ ಹಾಲಪ್ಪ ಆಚಾರ್


ಕೊಪ್ಪಳ: ಮೊದಲನೇ ಬಾರಿ ಸಚಿವನಾಗಿ ಕೊಪ್ಪಳಕ್ಕೆ ಆಗಮಿಸಿದ ಹಾಲಪ್ಪ ಆಚಾರ್ ನನಗೆ ದೊಡ್ಡ ಜವಾಬ್ದಾರಿಯನ್ನು ರಾಜ್ಯ ನಾಯಕರು ಮತ್ತು ಕೇಂದ್ರ ನಾಯಕರು ನೀಡಿದ್ದಾರೆ ಇದರಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ನಮ್ಮ ಜಿಲ್ಲೆಯ ಹಾಗೂ ರಾಜ್ಯದ ಕೀರ್ತಿಯನ್ನು ತರುತ್ತೇನೆ ಇಲಾಖೆಯಿಂದ ಆಗಬೇಕಾದ ಸಾರ್ವಜನಿಕರ ಕೆಲಸವನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗುವ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತೇನೆ

ಇಲಾಖೆಯ ಸಂಬಂಧಿಸಿದ ವಿಷಯಕ್ಕೆ ಮಾಧ್ಯಮದವರಿಗೆ ಮಾತನಾಡಿದ ಸಚಿವರು ಎರಡು ಗಂಟೆಯಿಂದ ಅಷ್ಟೇ ನನಗೆ ಖಾತೆಯನ್ನು ನೀಡಿದ್ದಾರೆ ಈಗಲೇ ಏನೂ ಹೇಳಲು ಆಗುವುದಿಲ್ಲ ಹಿರಿಯ ಅಧಿಕಾರಿಗಳ ಜೊತೆಗೆ ಸಮಾಲೋಚನೆ ಮಾಡಿ ಯಾವೆಲ್ಲ ವ್ಯವಸ್ಥೆಯನ್ನು ಸರ್ಕಾರದ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಉತ್ತಮ ಆಡಳಿತ ನೀಡುವುದಕ್ಕಾಗಿ ಬೇಕಾಗುವ ಎಲ್ಲ ವ್ಯವಸ್ಥೆಯನ್ನು ಮಾಡಿಕೊಳ್ಳುವುದಾಗಿ ತಿಳಿಸಿದರು.

KRS ಅಣೆಕಟ್ಟಿನ ಭಾಗದಲ್ಲಿನ ಗಣಿಗಾರಿಕೆ ವಿಷಯ ಕುರಿತು ಮಾತನಾಡಿದ ಸಚಿವರು ಸಂಬಂಧಿಸಿದ ವಿಜ್ಞಾನಿಗಳು ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಮಾತನಾಡಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಸಚಿವ ಸ್ಥಾನದ ಲಾಬಿಗಾಗಿ ಸಂತೋಷಜೀ ಯವರಗೆ ಯಾವದೇ ಒತ್ತಡ ಹಾಕಿಲ್ಲಾ ಕೇಂದ್ರ ಮತ್ತು ರಾಜ್ಯ ನಾಯಕರು ನನಗೆ ಜವಾಬ್ದಾರಿ ನೀಡಿದ್ದಾರೆ .ಹಾಗಾಗಿ ನಮ್ಮ ನಾಯಕರಾದ ಬಿ.ಎಸ್ ಯಡಿಯೂರಪ್ಪ ನವರು ಹಾಗೂ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆಗೆ ಮಾಡಲಾಗುವುದು ಎಂದು ಹೇಳಿದರು

ಕೊಪ್ಪಳಕ್ಕೆ ಆಗಮಿಸಿದ ನೂತನ ಸಚಿವರು ಕೊಪ್ಪಳದ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಕರ್ತೃಗದ್ದುಗೆ ಪೂಜೆ ಸಲ್ಲಿಸಿ ಪೂಜ್ಯರಿಂದ ಆಶೀರ್ವಾದ ಪಡೆದು ಮಾತನಾಡಿದರು.

ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶಾಸಕರಾದ ಪರಣ್ಣ ಮುನವಳ್ಳಿ ಕನಕಗಿರಿ ಶಾಸಕರಾದ ಬಸವರಾಜ ದಡೇಸುಗೂರು ತುಂಗಭದ್ರಾ ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ ಬಿಜೆಪಿ ಹಿರಿಯ ಮುಖಂಡರಾದ ಸಿವಿ ಚಂದ್ರಶೇಖರ್ ಹಾಗೂ ಬಳ್ಳಾರಿ ಜಿಲ್ಲಾ ಬಿಜೆಪಿ ಪ್ರಭಾರಿ ಕೊಪ್ಪಳ ಜಿಲ್ಲಾ ಮಾಜಿ ಬಿಜೆಪಿ ಅಧ್ಯಕ್ಷರಾದ ವಿರುಪಾಕ್ಷಪ್ಪ ಸಿಂಗನಾಳ ಸೇರಿ ಪಕ್ಷದ ಹಲವಾರು ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ವರದಿ-ಆರ್ ಶರಣಪ್ಪ ಗುಮಗೇರಾ
ಕೊಪ್ಪಳ.


Leave a Reply