Belagavi

ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತ ಸಂಘದಿAದ ಮನವಿ


ಮೂಡಲಗಿ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಕರ್ನಾಟಕ ರತೈ ಸಂಘ ಹಾಗೂ ಹಸಿರು ಸೇನೆಯ ಮೂಡಲಗಿ ತಾಲೂಕಾ ಘಟಕದ ಕಾರ್ಯಕರ್ತರು ಪಟಸೋಮವಾರ ಪಟ್ಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟಿಸಿ ಕೆಲ ಸಮಯ ರಸ್ತೆ ಬಂದ್ ಮಾಡಿ ಸ್ಥಳೀಯ ತಹಶೀಲ್ದಾರ ಡಿ.ಜಿ ಮಹಾತ್ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶ್ರೀಶೈಲ ಅಂಗಡಿ ಮಾತನಾಡಿ, ಕೇಂದ್ರ ಸರ್ಕಾರ ರೈತರ, ಬಡವರಿಗೆ ಮಾರಕವಾಗಿರುವ ವಿದ್ಯುತ್ ಖಾಸಗೀಕರಣ ಮಸೂದೆಯನ್ನು ಪ್ರಸ್ತುತ ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿರುವುದು ಜನ ವಿರೋಧಿಯಾಗಿದ್ದು, ಈ ಹಿಂದೆ ಎಸ್.ಎಂ.ಕೃಷ್ಣ ಅವರು ಮಖ್ಯಮಂತ್ರಿಯಾಗಿದ್ದಾಗಲೂ ಇದೇ ರೀತಿಯಲ್ಲಿ ಖಾಸಗೀಕರಣ ಕಾಯ್ದೆ ತರಲು ಮುಂದಾದಾಗ ರೈತರು ಮತ್ತು ಜನರ ವಿರೋಧಕ್ಕೆ ಹೆದರಿ ಹಿಂದೆ ಸರಿದಿದ್ದು ಇತಿಹಾಸ. ಮತ್ತೊಮ್ಮೆ ಅದೇ ರೀತಿಯಲ್ಲಿ ಪ್ರತಿಭಟನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎದುರಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಖಾಸಗೀಕರಣ ಬಿಲ್ ಒಮ್ಮೆ ಪಾಸಾದರೆ ರೈತರ ನೀರಾವರಿ ಪಂಪಸೆಟ್‌ಗಳಿಗೆ ಪ್ರಿಪೇಯ್ಡ್ ಸ್ಮಾರ್ಟ್ ಮೀಟರಗಳು ಬೀಳುತ್ತವೆ. ಅಲ್ಲದೆ ಸರ್ಕಾರ ಯೋಜನೆಗಳಾದ ಭಾಗ್ಯ ಜ್ಯೋತಿ, ಕುಟೀರ್ ಜ್ಯೋತಿ, ಕುಡಿಯುವ ನೀರಿನ ಯೋಜನೆಗಳ ಪಂಪಸೆಟ್‌ಗಳಿಗೆ ಮೀಟರ ಅಳವಡಿಸುವುದರಿಂದ ರೈತರು, ತಿಂಗಳಿಗೆ ಸಾವಿರಾರೂ ರೂಪಾಯಿಗಳಲ್ಲಿ ವಿದ್ಯುತ್ ಬಿಲ್ಲ ಕಟ್ಟಲಾದೆ, ವಿದ್ಯುತ್ ಕಂಪನಿಗಳ ಕಾಟಕ್ಕೆ ಹೆದರಿ ಸಾವಿನ ಹಾದಿ ತುಳಿಯುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಸರ್ಕಾರ ವಿದ್ಯುತ್ ಖಾಸಗೀಕರಣವನ್ನು ಕೈ ಬೀಡಬೇಕಂದು ಆಗ್ರಹಿಸಿ, ವಿದ್ಯುತ್ ಇಲಾಖೆಯ ಸಿಬ್ಬಂಧಿಗಳ ಹೋರಾಟಕ್ಕೆ ನಮ್ಮ ರೈತ ಸಂಘಟೆಯ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದರು.
ರೈತ ಸಂಘದ ತಾಲೂಕಾಧ್ಯಕ್ಷ ಈರಣ್ಣ ಸಸಾಲಟ್ಟಿ ಮಾತನಾಡಿ, ರೈತರಿಗೆ ಉಚಿತವಾಗಿ ವಿದ್ಯುತ್ ನೀಡುತ್ತಿದ್ದೇವೆ ಎಂಬುದು ಹಸಿ ಸುಳ್ಳು, ಸರ್ಕಾರ ವಿದ್ಯುತ್ ತಯಾರಿಸಿದರೂ ಅದನ್ನು ತಮ್ಮ ಜಮೀನುಗಳಿಗೆ ತರಲು ಅಗತ್ಯವಾದ ಕಂಬ ಮತ್ತು ವೈರ್‌ನ್ನು ರೈತರು ತಮ್ಮ ಹಣದಲ್ಲಿಯೇ ಭರಿಸುತ್ತಾರೆ. ಒಂದು ವೇಳೆ ಖಾಸಗೀಕರಣವಾದರೂ ರೈತರ ಮತ್ತು ಸರ್ಕಾರದ ನಡುವೆ ಸಂಪರ್ಕವೇ ಇಲ್ಲದಂತಾಗುತ್ತದೆ. ಹಾಗಾಗಿ ವಿದ್ಯುತ್ ಖಾಸಗೀಕರಣ ನಮ್ಮ ಪ್ರಬಲ ವಿರೋಧವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನೇರೆ ಹಾವಳಿ ಪರಿಹಾರ ಮತ್ತು ಹೊಸದಾಗಿ ತಾಲೂಕ ರಚನೆಯಾಗಿರುವುದರಿಂದ ಹಳೆಯ ತಾಲೂಕಾ ನೋಂದಣಿ ಕಚೇರಿಯಲ್ಲಿ ರೈತರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆ ಸರಿ ಪಡಿಸುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ತಾಲೂಕಾ ಉಪಾಧ್ಯಕ್ಷ ಗುರುನಾಥ ಹುಕ್ಕೇರಿ, ಪದಾಧಿಕಾರಿಗಳಾದ ಪ್ರಕಾಶ ತೇರದಾಳ, ಪದ್ಮಣ್ಣಾ ಉಂದ್ರಿ, ಪಾಂಡುರAಗ ಬೀರನಗಡ್ಡಿ, ವಿವೇಕ ಹನಗುಂದ, ರಮೇಶ ಮಾಳಾಪೂರ, ಎಮ್.ಡಿ. ಢವಳೇಶ್ವರ, ವಿಠ್ಠಲ ಬಡ್ಡಿ, ಅಶೋಕ ಕುರಿ, ಪರುಶುರಾಮ ಹನಗಂಡಿ ಹಾಗೂ ರೈತ ಸಂಘದ ಕಾರ್ಯಕರ್ತರು ಮತ್ತಿತರು ಇದ್ದರು.


Leave a Reply