Belagavi

ಎಸ್.ಎಸ್.ಆರ್ ಪಿಯು ಕಾಲೇಜಿನ ವಿದ್ಯಾರ್ಥಿ ೧೯ವರ್ಷ ಒಳಗಿನ ರಾಷ್ಟ್ರೀಯ ಕಬ್ಬಡಿ ತಂಡಕ್ಕೆ ವಿನಾಯಕ ನಾಯಿಕ ಆಯ್ಕೆ


ಮೂಡಲಗಿ: ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಶ್ರೀ ಶಿವಬೋಧರಂಗ ಪದವಿ ಪೂರ್ವ ಮಹಾವಿದ್ಯಾಲಯದ ಪಿಯುಸಿ ದ್ವಿತೀಯ ವರ್ಷದ ಕಲಾ ವಿಭಾಗದ ವಿದ್ಯಾರ್ಥಿ ವಿನಾಯಕ ಮಲ್ಲಪ್ಪ ನಾಯಿಕ ಇತನು ೧೯ವರ್ಷ ಒಳಗಿನ ಬಾಲಕರ ರಾಷ್ಟ್ರೀಯ ಕಬ್ಬಡಿ ತಂಡಕ್ಕೆ ಆಯ್ಕೆಯಾಗಿ ಆಗಷ್ಟ ೩೧ರಂದು ಇಂಡೋ-ನೇಪಾಳ ಸಹಯೋಗದಲ್ಲಿ ನೇಪಾಳದಲ್ಲಿ ನಡೆಯುವ ೫ನೇ ಅಂತರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಗೆ ಭಾರತ್ ತಂಡದಿAದ ಪ್ರತಿನಿಧಿಸುತ್ತಿರುವದಕ್ಕೆ ಸಂಸ್ಥೆಯಿAದ ಸನ್ಮಾನಿಸಿ ಗೌರವವಿಸಿದರು
ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ, ಉಪಾಧ್ಯಕ್ಷ ಎಸ್. ಆರ್.ಸೋನವಾಲ್ಕರ, ನಿರ್ದೇಶಕ ಆರ್.ಪಿ. ಸೋನವಾಲ್ಕರ ಕ್ರೀಡಾ ಪಟು ವಿನಾಯಕ ನಾಯಿಕ ಅವನ್ನನು ಸನ್ಮಾನಿಸಿ ಅಂತರ ರಾಷ್ಟೀಯ ಕ್ರೀಡೆಯಲ್ಲಿ ಯಶಸ್ಸು ಸಾಧಿಸಲಿ ಎಂದುಶುಭ ಹಾರೈಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಕ್ರೀಡಾ ಚೇರಮನ್ ಪ್ರೊ. ಎಂ.ಎಸ್. ಪಾಟೀಲ ಹಾಗೂ ಉಪನ್ಯಾಸಕರು ಇದ್ದರು


Leave a Reply