Belagavi

ನೀರಿನ ಘಟಕ ಉದ್ಘಟಿಸಿದ ಅನಿಲ ಬೆನಕೆ


ಬೆಳಗಾವಿ: ದಿ ೦೯ ರಂದು ಬೆಳಗಾವಿಯ ದೇವರಾಜ ಅರಸ ಕಾಲೊನಿಯ ಬಸವನ ಕುಡಚಿ ಜನರ ಬೇಡಿಕೆಗೆ ಸ್ವಂದನೆ ನೀಡಿರುವ ಶಾಸಕ ಅನಿಲ ಬೆನಕೆ ಕುಡಿಯುವ ನೀರಿ ಘಟಕ ಸ್ಥಾಪನೆ ಮಾಡಿ, ಇಂದು ನೀರಿನ ಘಟಕ್ಕೆ ಚಾಲನೆ ನೀಡಿದ್ದಾರೆ.
ಸೋಮವಾರ ಶುದ್ಧ ಕುಡಿಯು ನೀರಿನ ಘಟಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಅನಿಲ ಬೆನಕೆ ಅವರು, ಈ ಬಾಗದ ಜನರಿಗೆ ಕುಡಿಯು ನೀರಿನ ಸಮಸ್ಯೆ ಬಹಳ ದಿನಗಳಿಂದ ಕಾಡುತ್ತಿತ್ತು. ಅದಕ್ಕಾಗಿ ಜನರಿಗೆ ಶುದ್ಧ ಕುಡಿಯು ನೀರು ಒದಗಿಸುವ ಸಲುವಾಗಿ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ ಎಂದು ತಿಳಿಸಿದರು.
ಬರುವ ದಿನಗಳಲ್ಲಿ ಇಲ್ಲಿನ ಜನರಿಗೆ ನೀರಿನ ಸಮಸ್ಯೆ ಆಗುವುದಿಲ್ಲ. ೨೪ಘಿ೭ ನೀರು ಒದಗಿಸುವ ಸಲುವಾಗಿ ಸರ್ವೆ ನಡೆಸಲಾಗಿದೆ. ಸರ್ವೆ ಮುಗಿದ ಬಳಿಕ ವಾಟರ್ ಟ್ಯಾಂಕ್ ಕಟ್ಟಿ ದಿನದ ೨೪ ಗಂಟೆಗಳ ಕಾಲ ನೀರು ಪೂರೈಕೆಗೆ ಒತ್ತು ನೀಡಲಾಗುವುದು. ನೀರಿನ ಸಮಸ್ಯೆ ಹೊರತುಪಡಿಸಿ ರಸ್ತೆ, ಗಟಾರು, ಒಳ ಚರಂಡಿ ಮತ್ತು ಬೀದಿ ದೀಪಗಳ ಸಮಸ್ಯೆ ಬರುವ ದಿನಗಳಲ್ಲಿ ಬಗೆಹರಿಸಿ ಕೋಡುತ್ತೇನೆಂದು ಎಂದು ಭರವಸೆ ನೀಡಿದರು.
ಈ ವೇಳೆ ನ್ಯಾಯವಾದಿ ದಿವಟೆ, ಅಧಿಕಾರಿಗಳು ಸ್ಥಳಿಯರು ಉಪಸ್ಥಿತರಿದ್ದರು.


Leave a Reply