Belagavi

ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳಸಿಕೊಳ್ಳಿ : ನಾಗನೂರ


ಬೈಲಹೊಂಗಲ : ದೈಹಿಕ ಶಿಕ್ಷಣದಿಂದ ಬೋಧನೆಯ ಮೂಲಕ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಲು ಶ್ರಮಿಸಿದ ಶಿಕ್ಷಕ ಎ.ಎಂ.ಕರ್ಕಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಎಂಸ್ಸೆಸ್ಸೆಆರ್ ಪ್ರೌಢ ಶಾಲೆ ಮುಖ್ಯಾಧ್ಯಾಪಕ ಎಂ.ವಿ.ನಾಗನೂರ ಹೇಳಿದರು.
ಪಟ್ಟಣದ ಪುರಸಭೆ ಸಂಚಾಲಿತ ಶೂರ ಸಂಗೊಳ್ಳಿ ರಾಯಣ್ಣ (ಎಂಸ್ಸೆಸ್ಸೆಆರ್) ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕ ಎ.ಎಂ.ಕರ್ಕಿ ಅªರು ನಿವೃತ್ತಿ ಹೊಂದಿದ ನಿಮಿತ್ತ ಏರ್ಪಡಿಸಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಶತಮಾನೋತ್ಸವ ಪೂರೈಸಿದ ಐತಿಹಾಸಿಕ ಶಾಲೆಯಲ್ಲಿ ೩೫ ವರ್ಷಗಳ ಸುಧೀರ್ಘ ಅವಧಿಯಲ್ಲಿ ಶಾಲೆಯ ಚಟುವಟಿಕೆಗಳ ಯಶಸ್ವಿಗೆ ಪೂರಕವಾಗಿ ಸೇವೆ ಸಲ್ಲಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
ನಿವೃತ್ತ ಶಿಕ್ಷಕ ಎ.ಎಂ.ಕರ್ಕಿ ಮಾತನಾಡಿ, ದೇಶಾಭಿಮಾನಿ ರಾಯಣ್ಣನ ಸ್ಮರಣೆಯ ಶಾಲೆಯಲ್ಲಿ ಸೇವೆ ಮಾಡಿರುವುದು ಸಂತೃಪ್ತಿ ತಂದಿದೆ ಎಂದರು.
ಗಣಿತ ತಜ್ಞ ಈಶ್ವರ ಹೋಟಿ, ಹಿರಿಯ ಶಿಕ್ಷಕ ಎಂ.ಸಿ.ಹAಗರಕಿ, ಎಂ.ಎ.ಉರ್ದು ಪ್ರೌಢಶಾಲೆಯ ಮುಖ್ಯಾಧ್ಯಾಪಕ ಮಹಾಂತೇಶ ಮತ್ತಿಕೊಪ್ಪ, ಎಂಕೆಸಿಆರ್ ಪ್ರೌಢಶಾಲೆ ದೈಹಿಕ ಶಿಕ್ಷಕ ಎಸ್.ಯು.ಉಡಿಕೇರಿ ಮಾತನಾಡಿದರು.
ಶಿಕ್ಷಕರಾದ ಬಿ.ಟಿ.ಗುರಕನವರ, ಪಿ.ಟಿ.ಹಸರಂಗಿ, ಕಿರಣ ದಂಡಾವತಿಮಠ, ಶಿಕ್ಷಕಿಯರಾದ ಸುಲೋಚನಾ ಹೊಸಮನಿ, ಮಹಾದೇವಿ ಅಂಗಡಿ, ಸಿ.ಕೆ.ಯರಗಟ್ಟಿಮಠ ಅನಿಸಿಕೆ ವ್ಯಕ್ತಪಡಿಸಿದರು. ಎಚ್.ಟಿ.ಭಜಂತ್ರಿ, ಆರ್.ಬಿ.ಮುಲ್ಲಾ, ಕ್ಲರ್ಕ್ ಎಂ.ಬಿ.ಗರಗದ, ಕಸ್ತೂರಿ ಹರಕುಣಿ ಉಪಸ್ಥಿತರಿದ್ದರು. ಬಿ.ಆರ್.ಬೋರಗಲ್ ನಿರೂಪಿಸಿದರು.


Leave a Reply