Belagavi

ಭಕ್ತಿ ಸಂಗಮ, ಭಕ್ತಿ ಕುಸುಮ ಪುಸ್ತಕ ಬಿಡುಗಡೆ


ಬೈಲಹೊಂಗಲ :- ಪಟ್ಟಣದ ಮುರಗೋಡ ರಸ್ತೆಯ ಬಸವನಗರದ ೪ ನೇ ರಸ್ತೆಯ ದುರ್ಗಾದೇವಿ ದೇವಿ ದೇವಸ್ಥಾನದಲ್ಲಿ ಡಾ.ಮಹಾಂತಯ್ಯ ಶಾಸ್ರಿö್ತ ಆರಾದ್ರಿಮಠ ಅವರು ಯುವ ಸಾಹಿತಿ ವಿನಯ ನಂದಿಹಳ್ಳಿಮಠ ಇವರು ರಚಿಸಿದ ಭಕ್ತಿ ಸಂಗಮ, ಭಕ್ತಿ ಕುಸುಮ ಪುಸ್ತಕಗಳನ್ನು ಬಿಡುಗಡೆ ಹಾಗೂ ಸನ್ಮಾನಿಸಿದರು.
ಬೈಲಹೊಂಗಲ- ಇಂದಿನ ದಿನಮಾನಗಳಲ್ಲಿ ಯುವಕರು ಸಾಹಿತ್ಯ ಕ್ಷೇತ್ರದತ್ತ ಒಲವು ತೋರುವುದು ಅವಶ್ಯವಾಗಿದೆ ಎಂದು ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ.ಮಹಾಂತಯ್ಯ ಶಾಸ್ರಿö್ತ ಆರಾದ್ರಿಮಠ ಹೇಳಿದರು.
ಅವರು ಪಟ್ಟಣದ ಮುರಗೋಡ ರಸ್ತೆಯ ಬಸವನಗರದ ೪ ನೇ ರಸ್ತೆಯ ದುರ್ಗಾದೇವಿ ದೇವಿ ದೇವಸ್ಥಾನದಲ್ಲಿ ಯುವ ಸಾಹಿತಿ ವಿನಯ ನಂದಿಹಳ್ಳಿಮಠ ಇವರು ರಚಿಸಿದ ಭಕ್ತಿ ಸಂಗಮ, ಭಕ್ತಿ ಕುಸುಮ ಪುಸ್ತಕಗಳನ್ನು ಬಿಡುಗಡೆ ಹಾಗೂ ಸನ್ಮಾನಿಸಿ ಮಾತನಾಡಿ, ಇವರು ತಮ್ಮ ಸಾಹಿತಿ ಬರವಣಿಗೆ ಮೂಲಕ ಭಕ್ತಿ ಸಂಗಮ, ಭಕ್ತಿ ಕುಸುಮ ಪುಸ್ತಕಗಳನ್ನು ನಾಡಿಗೆ ಸಮರ್ಪಿಸಿದ್ದಾರೆ. ಸಾಹಿತ್ಯ ಆಸಕ್ತರು ಪುಸ್ತಕಗಳನ್ನು ಓದಿ ಪ್ರೋತ್ಸಾಹಿಸಬೇಕೆಂದರು.
ಈ ಸಂದರ್ಭದಲ್ಲಿ ಪ್ರಶಾಂತ್ ಶಾಸ್ತ್ರಿ, ಗಂಗಾಧರ ಸಾಲಿಮಠ, ದಾ ಅರ್ಚಕ ನಂದಿಹಳ್ಳಿ ಮಠ, ಸದ್ಭಕ್ತರು ಇದ್ದರು.


Leave a Reply