Belagavi

‘ಕ್ವಿಟ್ ಇಂಡಿಯಾ’ ಚಲೆಜಾವ ಚಳುವಳಿ ಕಾರ್ಯಕ್ರಮ


ಬೆಳಗಾವಿ ೧೦- ಬೆಳಗಾವಿ ಜಿಲ್ಲಾ ಸ್ವಾತಂತ್ರö್ಯ ಸೈನಿಕ ಹಾಗೂ ಉತ್ತರಾಧಿಕಾರಿ ಸಂಘ, ಭಾರತೀಯ ಸೇವಾದಳ ಇವರ ಸಂಯುಕ್ತ ಆಶ್ರಯದಲ್ಲಿ ’ಕ್ವಿಟ್ ಇಂಡಿಯಾ’ ಚಲೆಜಾವ ಚಳುವಳಿ’ ಕಾರ್ಯಕ್ರಮ ಆಚರಿಸಲಾಯಿತು. ಪ್ರತಿವರ್ಷ ಈ ಕಾರ್ಯಕ್ರಮ ರಾಷ್ಟöçಪತಿ ಭವನದಲ್ಲಿ ರಾಷ್ಟöçಪತಿ ಇವರ ಹಸ್ತದಿಂದ ಸ್ವಾತಂತ್ರö್ಯಯೋಧರಿಗೆ ಗೌರವ ಸಮರ್ಪಣೆ ನೀಡಲಾಗುತ್ತದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದ ಕಳೆದ ಎರಡು ವರ್ಷಗಳಿಂದ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದ್ದು, ಜಿಲ್ಲಾಧಿಕಾರಿಗಳ ಸಾನಿದ್ಯದಲ್ಲಿ ಈ ಕಾರ್ಯಕ್ರಮ ಜರುಗೀತು.
ಶ್ರೀಮತಿ ನಮಿತಾ ಪರಮಾಜ ಇವರಿಂದ ವಂದೆ ಮಾತರಂ ಗೀತೆಯೊಂದಿಗೆ ಪ್ರಾರಂಭವಾಯಿತು. ಕು. ಶ್ರೇಯಾ ಸವ್ವಾಸೇರಿ ಇವರು ಸ್ವಾಗತ ನೃತ್ಯ ಸಾದರ ಪಡಿಸಿದರು. ಪ್ರಾಸ್ತಾವಿಕ ಹಾಗೂ ಸ್ವಾಗತ ಭಾಷಣವನ್ನು ಭಾರತೀಯ ಸೇವಾ ದಳದ ಅತಿಥಿ ಬಸವರಾಜ ಹಟ್ಟಿಗೌಡರ ಮಾಡಿದರು. ಜಿಲ್ಲಾಧಿಕಾರಿಗಳಾದ ಎಮ್. ಜಿ. ಹಿರೇಮಠ, ಸ್ವಾತಂತ್ರö್ಯ ಯೋಧರಾದ ರಾಜೇಂದ್ರ ಕಲಘಟಗಿ, ವಿಠ್ಠಲ ಹೆಗಡೆ, ಸಂತೋಷ ಭೆಂಡಿಗೇರಿ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾಧಿಕಾರಿಗಳಾದ ಚಲೇಜಾವ್ ಚಳವಳಿಯ ಗೌರವ ಮೂರ್ತಿ ಗಳಾದ ಅಪ್ಪಣ್ಣ ಕರಲಿಂಗಣ್ಣವರ ಘಟಪ್ರಭಾ ಹಾಗೂ ಶಿವಪ್ಪ ಅಣ್ಣೀಗೇರಿ ಬೈಲಹೊಂಗಲ ಇವರಿಗೆ ಶಾಲು ಹೊದಿಸಿ ಗೌರವಿಸಿದರು. ಜಿಲ್ಲಾಧಿಕಾರಿಗಳು ಮಾತನಾಡುತ್ತ ಈ ಕಾರ್ಯಕ್ರಮದ ಮಹತ್ವ, ಸ್ವಾತಂತ್ರö್ಯ ಯೋಧರು ದೇಶಕ್ಕಾಗಿ ಸಮರ್ಪಿಸಿದ ಸೇವೆ, ತ್ಯಾಗ ಬಲಿದಾನದ ಬಗ್ಗೆ ಹಾಗೂ ಕೋವಿಡ್ ಅಲೆಯಲ್ಲಿ ಮಾಸ್ಕ ಧಾರಣೆ, ಸಾಮಾಜಿಕ ಅಂತರ ಪಾಲಿಸುವ ಅವಶ್ಯಕತೆ ಕುರಿತಂತೆ ಮಾತನಾಡಿದರು.
ಜಿಲ್ಲಾ ಸ್ವಾತಂತ್ರö್ಯ ಸಂಘಟನೆಯ ಪರವಾಗಿ ಜಿಲ್ಲಾಧಿಕಾರಿಗಳಾದ ಎಮ್. ಜಿ. ಹಿರೇಮಠ ಇವರು ರಂಗನಾಥ ವಡವಿ, ವಿಠ್ಠಲ ಹೆಗಡೆ, ರಾಜೇಶ ಮಾಳಗಿ ಇವರನ್ನು ಸನ್ಮಾನಿಸಿ ಗೌರವಿಸಿದರು. ಸಂತೋಷ ಹೊಂಗಲ ನಿರೂಪಿಸಿದರು. ಸಂಘದ ನನಿರ್ದೇಶಕರಾದ ಸುಭಾಷ ಹೊನಗೇಕರ ವಂದಿಸಿದರು. ರಾಷ್ಟöçಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಸಂಘದ ಪದಾಧಿಕಾರಿಗಳಾದ ವಿವೇಕಾನಂದ ಪೋಟೆ, ಸಂತೋಷ ಬೆಂಡಿಗೇರಿ, ಸುಭಾಷ ಹೊನಗೇಕರ, ವಿ. ಬಿ. ಮರೆಣ್ಣವರ ಮುಂತಾದವರು ಉಪಸ್ಥಿತರಿದ್ದರು.


Leave a Reply