Uncategorized

ಇಂದು ಸಿರಿಧಾನ್ಯ ಒಂದು ಚಳುವಳಿಯಾಗಿದೆ : ಸರಜು ಕಾಟ್ಕರ


ಬೆಳಾಗಾವಿ ಅ., :- ಜನರು ಸಾವಯವ ಮತ್ತು ಸಿರಿಧಾನ್ಯಗಳ ಬಗ್ಗೆ ಈಗ ಜಾಗೃತರಾಗುತ್ತಿದ್ದಾರೆ. ಅದು ಒಂದು ಚಳುವಳಿಯ ಸ್ವರೂಪ ಪಡೆದಿದೆ ಎಂದು ಹಿರಿಯ ಸಾಹಿತಿ ಮತ್ತು ಪತ್ರಕರ್ತ ಸರಜು ಕಾಟ್ಕರ ಅವರು ಹೇಳಿದರು.
ನಗರದ ಹಸಿರು ಕ್ರಾಂತಿ ಕಾರ್ಯಾಲಯದ ಸಭಾಗ್ರಹದಲ್ಲಿ ಜರುಗಿದ ಮನೆ ಮನೆಯಲ್ಲಿ ವಚನೋತ್ಸವ ಕಾರ್ಯಕ್ರಮವನ್ನು ಮತ್ತು ಸಿರಿಧಾನ್ಯ ಮಾರಾಟ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಈಗಿನ ಜನರಿಗೆ ಶುದ್ಧ ಆಹಾರವು ಅಲರ್ಜಿ ಆಗುವಷ್ಟರ ಮಟ್ಟಿಗೆ ಅವರು ಆಶುದ್ದ ಆಹಾರಕ್ಕೆ ಒಗ್ಗಿಕೊಂಡಿದ್ದಾರೆ. ಆದರೂ ಸಹ ಈಗ ಆರೋಗ್ಯ ಶುದ್ದ ಆಹಾರ, ಸಾವಯವ ಕೃಷಿ ಆಹಾರ, ಸಿರಿಧಾನ್ಯಗಳ ಬಗ್ಗೆ ಜಾಗೃತರಾಗುತ್ತಿದ್ದಾರೆ ಎಂದರು.
ಬಸವ ತತ್ವ ಎಲ್ಲರಿಗೂ ಮುಟ್ಟಬೇಕು, ಮನೆ ಮನೆಗೂ ಮುಟ್ಟಬೇಕು ಎಂದ ಸರಜು ಕಾಟ್ಕರ ಅವರು ಕಲ್ಯಾಣರಾವ ಮುಚಳಂಬಿಯವರು ತಮ್ಮ ಹೆಸರಿನಂತೆ ಕಲ್ಯಾಣ ನಾಡಿನಿಂದ ಬಂದು ಕಲ್ಯಾಣ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದರು.
ವಚನಗಳ ಬಗ್ಗೆ ಉಪನ್ಯಾಸ ನೀಡಿದ ಶ್ರೀಮತಿ ಸುನಂದಾ ಎಮ್ಮಿ ಅವರು, ಯಾವ ಕಾಯಕ ಮಾಡಿದರೆನು, ಭಾವ ಮತ್ತು ಮನಸ್ಸು ಶುದ್ದವಾಗಿರಬೇಕು, ಆಗ ದೇವರೂ ಸಹ ಅದಕ್ಕೆ ಕೈಜೋಡಿಸುತ್ತಾನೆ ಎಂದು ನೂಲಿನ ಚಂದಯ್ಯ ಅವರ ಕಥೆಯ ಮೂಲಕ ವಚನವನ್ನು ವಿವರಿಸಿದ ಅವರು ವಚನಗಳಿಂದ ಸಮಾಜದಲ್ಲಿ ಮಾಡಬಹುದಾದ ಬದಲಾವಣೆಯನ್ನು ವಿವರಿಸಿದರು.
ಆಶಿರ್ವಚನ ನೀಡಿದ ಕಾರಂಜಿ ಮಠದ ಶ್ರೀ ಗುರುಸಿದ್ದ ಮಹಾಸ್ವಾಮಿಗಳು ಮತ್ತು ಕಾಡಸಿದ್ದೇಶ್ವರ ಮಠದ ಮುಪ್ಪಿನ ಕಾಡಸಿದ್ದೇಶ್ವರ ಸ್ವಾಮಿಗಳು ಮನೆ ಮನೆಯಲ್ಲಿ ವಚನೋತ್ಸವ ಕಾರ್ಯಕ್ರಮದಿಂದ ಮಕ್ಕಳಲ್ಲಿ ಉತ್ತಮ ಸಂಸ್ಕಾರ ವೃದ್ಧಿಯಾಗುತ್ತದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಜನರಲ್ಲಿ ಶರಣರ ವಚನಗಳನ್ನು ಬಿತ್ತುವುದು ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮದ ಆಧ್ಯಕ್ಷತೆವಹಿಸಿದ್ದ ಕಲ್ಯಾಣರಾವ ಮುಚಳಂಬಿಯವರು ಮಾತನಾಡಿ, ಮನೆ ಮನೆಯಲ್ಲಿ ವಚನೋತ್ಸವ ಕಾರ್ಯಕ್ರಮವನ್ನು ಸುಮಾರು ೩೦ ವರ್ಷಗಳಿಂದ ನಡೆದುಕೊಂಡು ಬಂದಿದೆ. ಇಂದು ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಲು ವಚನಗಳು ಸಹಕಾರಿಯಾಗಲಿವೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಾಹಿತಿ ಮತ್ತು ಪತ್ರಕರ್ತರಾದ ಭೀಮಸೇನ ತೋರಗಲ್ಲ ಮತ್ತು ಎಲ್.ಎಸ್.ಶಾಸ್ತಿç ಅವರು ಮಾತನಾಡಿ ಶುಭಕೊರಿದರು.ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಎಮ್.ವಾಯ್. ಮೇಣಸಿನಕಾಯಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಮಾಜಿ ಮಹಾಪೌರ ಎನ್.ಬಿ.ನಿರ್ವಾಣಿ,


Leave a Reply